ಹೊಸ ಸಂಸತ್ ಭವನಕ್ಕೆ ಡಿ.10ರಂದು ಶಂಕುಸ್ಥಾಪನೆ: ಕಟ್ಟಡದ ವಿಶೇಷತೆಯೇನು?

ನವದೆಹಲಿ, ಡಿಸೆಂಬರ್ 07: ಪ್ರಧಾನಿ ನರೇಂದ್ರ ಮೋದಿ ಡಿಸೆಂಬರ್ 10 ರಂದು ಹೊಸ ಸಂಸತ್ ಭವನದ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ.

ಭಾರತವು 2022ರಲ್ಲಿ ನಡೆಯುವ ಸ್ವಾತಂತ್ರ್ಯ ದಿನಾಚರಣೆಯನ್ನು ಹೊಸ ಕಟ್ಟಡದಲ್ಲಿ ಆಚರಿಸುವ ಗುರಿ ಹೊಂಡಿದೆ.

ರಾಷ್ಟ್ರ ರಾಜಧಾನಿಯಲ್ಲಿ ನಿರ್ಮಿಸಲಿರುವ 971 ಕೋಟಿ ರೂ. ವೆಚ್ಚದ ನೂತನ ಸಂಸತ್ ಕಟ್ಟಡವನ್ನು ಡಿಸೆಂಬರ್ 10 ರಂದು ಮಧ್ಯಾಹ್ನ 1 ಗಂಟೆಗೆ ಶಂಕುಸ್ಥಾಪನೆ ನೆರವೇರಲಿದೆ.

ಈ ಕುರಿತು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಮಾಹಿತಿ ನೀಡಿದ್ದಾರೆ. ಕಳೆದ ವಾರ ಓಂ ಬಿರ್ಲಾ ಅವರು ಹೊಸ ಸಂಸತ್ ಭವನನಿರ್ಮಾಣವಾಗುವ ಸ್ಥಳಕ್ಕೆ ಭೇಟಿ ನೀಡಿ ಭೂಮಿ ಪೂಜೆಯ ಸ್ಥಳ ಗುರುತಿಸಿದ್ದಾರೆ.

ಭೂಮಿ ಪೂಜೆ ನಂತರ ಕೆಲವೇ ದಿನಗಳಲ್ಲಿ ಕಟ್ಟಡ ನಿರ್ಮಾಣ ಕಾರ್ಯ ಆರಂಭವಾಗಲಿದೆ. ಹೊಸ ಸಂಸತ್ ಭವನದಲ್ಲಿ ಲೋಕಸಭೆಯ ಚೇಂಬರ್‌ನಲ್ಲಿ ಈ ಗಿರುವ 543 ಆಸನಗಳ ಬದಲು 888 ಆಸನಗಳು ಹಾಗೂ ರಾಜ್ಯಸಭೆ ಚೇಂಬರ್‌ನಲ್ಲಿ ಈಗಿರುವ 245 ಆಸನಗಳ ಬದಲು 384 ಆಸನಗಳಿರಲಿವೆ.

ಜಂಟಿ ಸಮಾವೇಶ ನಡೆಸಲು ಹೆಚ್ಚು ಆಸನಗಳ ಸಭಾಂಗಣ ನಿರ್ಮಾಣವಾಗಲಿದೆ. ಇಡೀ ಕಟ್ಟಡ ಭೂಕಂಪ ನಿರೋಧಕ ಶಕ್ತಿ ಹೊಂದಿರಲಿದೆ.

ಟಾಟಾಗೆ ಸಂಸತ್ ಭವನದ ಗುತ್ತಿಗೆ

ಟಾಟಾಗೆ ಸಂಸತ್ ಭವನದ ಗುತ್ತಿಗೆ

ಸಂಸತ್ ಭವನದ ಗುತ್ತಿಗೆ ಟಾಟಾ ಪಾಲಾಗಿದ್ದು, 861.90 ಕೋಟಿ ವೆಚ್ಚದಲ್ಲಿ ಸಂಸತ್ ನಿರ್ಮಾಣವಾಗಲಿದೆ.
* ಫರ್ನಿಚರ್‌ಗಳಲ್ಲಿ ಸ್ಮಾರ್ಟ್ ಡಿಸ್ಪ್ಲೇ, ಮತದಾನವನ್ನು ಸುಲಭಗೊಳಿಸಲು ಬಯೋಮೆಟ್ರಿಕ್ಸ್, ಡಿಜಿಟಲ್ ಅನುವಾದ ವ್ಯವಸ್ಥೆ ಮತ್ತಿತರ ಸೌಲಭ್ಯಗಳನ್ನು ಅಳವಡಿಸಲಾಗುತ್ತದೆ.
* ಅಂಡರ್‌ಪಾಸ್‌ ಮೂಲಕ ಸಂಸತ್‌ ಭವನಕ್ಕೆ ಸಂಪರ್ಕ ಕಲ್ಪಿಸಲಾಗುತ್ತದೆ. ಹೊಸ ಸಂಸತ್‌ ಭವನದ ಪಕ್ಕ ಶ್ರಮ ಶಕ್ತಿ ಭವನದ ಇರಲಿದ್ದು, ಇಲ್ಲಿ ಎಲ್ಲಾ ಸಂಸದರಿಗೆ ಕೊಠಡಿಗಳಿವೆ.
* ಕಟ್ಟಡವು ಭೂಕಂಪ ನಿರೋಧಕವಾಗಿರಲಿದ್ದು, ಅತ್ಯಂತ ಆಧುನಿಕ ಡಿಜಿಟಲ್ ತಂತ್ರಜ್ಞಾನವನ್ನು ಹೊಸ ಕಟ್ಟಡದಲ್ಲಿ ಅಳವಡಿಸಲಾಗುತ್ತದೆ.
* ಕಟ್ಟಡದ ನಿರ್ಮಾಣದಲ್ಲಿ ಸುಮಾರು 2,000 ಜನರು ನೇರವಾಗಿ ಭಾಗಿಯಾದರೆ, ಇನ್ನೂ 9,000 ಜನ ಪರೋಕ್ಷವಾಗಿ ನಿರ್ಮಾಣ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ.

ಕಟ್ಟಡ ನಿರ್ಮಾಣ ಕಾರ್ಯ ಆರಂಭ ಯಾವಾಗ?

ಕಟ್ಟಡ ನಿರ್ಮಾಣ ಕಾರ್ಯ ಆರಂಭ ಯಾವಾಗ?

ಪ್ರಧಾನಿ ನರೇಂದ್ರ ಮೋದಿ ಅವರು ಡಿಸೆಂಬರ್ 10 ರಂದು ಮಧ್ಯಾಹ್ನ 1 ಗಂಟೆಗೆ ಕಟ್ಟಡದ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದು, ಕೆಲವೇ ದಿನಗಳಲ್ಲಿ, ಕಾಮಗಾರಿಯೂ ಶುರುವಾಗಲಿದೆ.
* 64,500 ಚ.ಮೀಟರ್ ಪ್ರದೇಶದಲ್ಲಿ ಕಟ್ಟಡ ನಿರ್ಮಾಣವಾಗಲಿದ್ದು, ಒಟ್ಟು 971 ಕೋಟಿ ರೂ. ವೆಚ್ಚವಾಗಲಿದೆ ಎಂದು ತಿಳಿದುಬಂದಿದೆ.
* 2022ರ ವೇಳೆಗೆ ಹೊಸ ಸಂಸತ್‌ ಕಟ್ಟಡ ಉದ್ಘಾಟನೆಗೊಳ್ಳುವ ನಿರೀಕ್ಷೆಯಿದೆ.

ಹೊಸ ಸಂಸತ್ ಭವನದ ವಿಶೇಷತೆ

ಹೊಸ ಸಂಸತ್ ಭವನದ ವಿಶೇಷತೆ

* 120 ಕಚೇರಿಗಳು: ಸಮಿತಿಗಳ ಕೊಠಡಿಗಳು, ಸಂಸದೀಯ ವ್ಯವಹಾರಗಳ ಸಚಿವಾಲಯದ ಪ್ರಮುಖ ಕಚೇರಿಗಳು, ಲೋಕಸಭಾ ಸಚಿವಾಲಯ, ರಾಜ್ಯಸಭಾ ಸಚಿವಾಲಯ, ಪ್ರಧಾನ ಮಂತ್ರಿಗಳ ಕಚೇರಿಗಳು, ಕೆಲವು ಸಂಸದರು ಮತ್ತು ಸಿಬ್ಬಂದಿ ಮತ್ತು ಭದ್ರತಾ ಸಿಬ್ಬಂದಿಯ ಕಚೇರಿಗಳನ್ನು ಒಳಗೊಂಡಂತೆ ಒಟ್ಟು 120 ಕಚೇರಿಗಳು ಹೊಸ ಸಂಸತ್‌ ಕಟ್ಟಡ ಹೊಂದಿರಲಿದೆ.
ಒಟ್ಟು ಆರು ಪ್ರವೇಶದ್ವಾರಗಳು: ರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿಗಳು ಬರಲು ಒಂದು ದ್ವಾರ, ಲೋಕಸಭೆಯ ಸ್ಪೀಕರ್, ರಾಜ್ಯಸಭೆಯ ಅಧ್ಯಕ್ಷರು ಮತ್ತು ಸಂಸದರು ಬರಲು ಒಂದು ದ್ವಾರ, ಸಾಮಾನ್ಯ ದ್ವಾರ, ಸಂಸದರಿಗಾಗಿ ಮತ್ತೊಂದು ಪ್ರವೇಶ ದ್ವಾರ ಹಾಗೂ ಎರಡು ಸಾರ್ವಜನಿಕ ಪ್ರವೇಶ ದ್ವಾರಗಳು ಹೊಸ ಕಟ್ಟಡದಲ್ಲಿ ಇರಲಿವೆ.
* ಹೊಸ ಸಂಸತ್‌ ಸಂಕೀರ್ಣ ನಾಲ್ಕು ಮಹಡಿಗಳನ್ನು ಹೊಂದಿರಲಿದ್ದು, ಕೆಳ ಮಹಡಿ, ನೆಲ ಮಹಡಿ, ಮೊದಲ ಮತ್ತು ಎರಡನೇ ಮಹಡಿಗಳು ಇರಲಿವೆ.

ಲೋಕಸಭೆ, ರಾಜ್ಯಸಭೆಯಲ್ಲಿನ ಬದಲಾವಣೆಗಳು

ಲೋಕಸಭೆ, ರಾಜ್ಯಸಭೆಯಲ್ಲಿನ ಬದಲಾವಣೆಗಳು

* ಎರಡು ಆಸನಗಳ ಬೆಂಚ್‌ಗಳಲ್ಲಿ ಸಂಸದರನ್ನು ಕೂರಿಸಲಾಗುವುದು. ಜಂಟಿ ಅಧಿವೇಶನದ ಸಂದರ್ಭದಲ್ಲಿ ಇಲ್ಲಿ ಮೂವರು ಕುಳಿತುಕೊಳ್ಳಲು ಅವಕಾಶ ಇದೆ.
* ಆಸನಗಳು 60 ಸೆಂ.ಮೀ. ಅಗಲ ಮತ್ತು 40 ಸೆಂ.ಮೀ. ಎತ್ತರ ಇರಲಿವೆ. ಪ್ರಸ್ತುತ ಇರುವ ಆಸನಗಳಿಗಿಂತ ದೊಡ್ಡದಾಗಿರಲಿವೆ.
* 3,015 ಚ.ಮೀಟರ್ ವಿಸ್ತೀರ್ಣದಲ್ಲಿ ಲೋಕಸಭೆ ಇರಲಿದ್ದು, 1,145 ಚ.ಮೀಟರ್ ವಿಸ್ತೀರ್ಣದಲ್ಲಿ 543 ಆಸನಗಳ ಬದಲಿಗೆ 888 ಆಸನಗಳು ಇರಲಿವೆ.
* ಜಂಟಿ ಅಧಿವೇಶನ ನಡೆಯುವ ವೇಳೆ ಹೊಸ ಲೋಕಸಭೆಯಲ್ಲಿ 1,224 ಸದಸ್ಯರಿಗೆ ಕುಳಿತುಕೊಳ್ಳಲು ಅವಕಾಶ ಕಲ್ಪಿಸಬಹುದು.
* 3,220 ಚ.ಮೀಟರ್ ವಿಸ್ತೀರ್ಣದಲ್ಲಿ ರಾಜ್ಯಸಭೆ ಇರಲಿದ್ದು, 1,232 ಚ.ಮೀಟರ್ ವಿಸ್ತೀರ್ಣದಲ್ಲಿ 245 ಸ್ಥಾನಗಳ ಬದಲಾಗಿ 384 ಆಸನಗಳನ್ನು ಹೊಂದಿರಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+