JNU New Rules : ಜೆಎನ್‌ಯು ಹೊಸ ನಿಯಮಗಳು: ಧರಣಿ ನಡೆಸಿದರೇ ಜೇಬಿಗೆ ಬರೆ, ಹಿಂಸಾಚಾರದಿಂದ ಕಾಲೇಜು ಪ್ರವೇಶಕ್ಕೆ ಕುತ್ತು!
ಬಿಬಿಸಿ ಸಾಕ್ಷ್ಯಚಿತ್ರದ ಪ್ರದರ್ಶನದ ವಿಚಾರದಲ್ಲಿ ವಿಶ್ವವಿದ್ಯಾನಿಲಯ ಭಾರೀ ಪ್ರತಿಭಟನೆಗೆ ಸಾಕ್ಷಿಯಾದ ನಂತರ ಹೊಸ ನಿಯಮಗಳು ಜಾರಿಗೆ ಬಂದಿದೆ.
ನವದೆಹಲಿ, ಮಾರ್ಚ್ 02: ಸಾಲು ಸಾಲು ಪ್ರತಿಭಟನೆ, ಹಿಂಸಾಚಾರದಿಂದ ಸುದ್ದಿಯಾಗುವ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯ ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಕ್ಯಾಂಪಸ್‌ನಲ್ಲಿ ಧರಣಿಗಳನ್ನು ನಡೆಸಿದರೆ ವಿದ್ಯಾರ್ಥಿಗಳಿಗೆ 20,000 ರೂಪಾಯಿ ದಂಡವನ್ನು ವಿಧಿಸಬಹುದು ಮತ್ತು ಹಿಂಸಾಚಾರರಕ್ಕೆ ಕಾರಣವಾದರೇ ಕಾಲೇಜು ಪ್ರವೇಶ ರದ್ದತಿಯನ್ನು ಎದುರಿಸಬಹುದು ಅಥವಾ 30,000 ರೂಪಾಯಿವರೆಗೆ ದಂಡ ವಿಧಿಸಬಹುದು.
ಪ್ರಧಾನಿ ನರೇಂದ್ರ ಮೋದಿ ಕುರಿತಾದ ಬಿಬಿಸಿ ಸಾಕ್ಷ್ಯಚಿತ್ರದ ಪ್ರದರ್ಶನದ ವಿಚಾರದಲ್ಲಿ ವಿಶ್ವವಿದ್ಯಾನಿಲಯ ಭಾರೀ ಪ್ರತಿಭಟನೆಗೆ ಸಾಕ್ಷಿಯಾದ ನಂತರ ಹೊಸ ನಿಯಮಗಳು ಜಾರಿಗೆ ಬಂದಿದೆ. 10 ಪುಟಗಳ 'ಜೆಎನ್‌ಯು ವಿದ್ಯಾರ್ಥಿಗಳ ಶಿಸ್ತಿನ ನಿಯಮಗಳು ಮತ್ತು ಸರಿಯಾದ ನಡವಳಿಕೆ' ಎಂಬ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಈ ನಿಯಮಗಳು ಪ್ರಾರಂಭವಾಗುವ ಮೊದಲು ಅಥವಾ ನಂತರ ಪ್ರವೇಶ ಪಡೆದರೂ ಅರೆಕಾಲಿಕ ವಿದ್ಯಾರ್ಥಿಗಳು ಸೇರಿದಂತೆ ವಿಶ್ವವಿದ್ಯಾನಿಲಯದ ಎಲ್ಲಾ ವಿದ್ಯಾರ್ಥಿಗಳಿಗೆ ನಿಯಮಗಳು ಅನ್ವಯಿಸುತ್ತವೆ ಎಂದು ಡಾಕ್ಯುಮೆಂಟ್ ಹೇಳುತ್ತದೆ.

ಹಿಂಸಾಚಾರ ತಡೆಗಟ್ಟುವಿಕೆ, ಜೂಜಾಟದಲ್ಲಿ ತೊಡಗುವುದು, ಹಾಸ್ಟೆಲ್ ಕೊಠಡಿಗಳನ್ನು ಅನಧಿಕೃತವಾಗಿ ವಶಪಡಿಸಿಕೊಳ್ಳುವುದು, ನಿಂದನೀಯ, ಅವಹೇಳನಕಾರಿ ಭಾಷೆಯ ಬಳಕೆ ಮತ್ತು ಫೋರ್ಜರಿ ಮಾಡುವುದು ಸೇರಿದಂತೆ 17 "ಅಪರಾಧಗಳಿಗೆ" ಶಿಕ್ಷೆಗಳನ್ನು ಪಟ್ಟಿ ಮಾಡಲಾಗಿದೆ. ಇದರ ಜೊತೆಗೆ ದೂರುಗಳ ಪ್ರತಿಯನ್ನು ವಿದ್ಯಾರ್ಥಿಗಳ ಪೋಷಕರಿಗೆ ಕಳುಹಿಸಲಾಗುವುದು ಎಂದು ನಿಯಮಗಳಲ್ಲಿ ಉಲ್ಲೇಖಿಸಲಾಗಿದೆ.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಜೆಎನ್‌ಯು ಕಾರ್ಯದರ್ಶಿ ವಿಕಾಸ್ ಪಟೇಲ್, ಹೊಸ ನಿಯಮಗಳನ್ನು "ತುಘಲಕಿ" ಎಂದು ಕರೆದಿದ್ದು, ಹಳೆಯ ನೀತಿ ಸಂಹಿತೆ ಸಾಕಷ್ಟು ಪರಿಣಾಮಕಾರಿಯಾಗಿದೆ. ಈ "ಕಠಿಣ" ನೀತಿ ಸಂಹಿತೆಯನ್ನು ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಇಬ್ಬರನ್ನೂ ಒಳಗೊಂಡ ಪ್ರಕರಣಗಳನ್ನು ವಿಶ್ವವಿದ್ಯಾಲಯ, ಶಾಲೆ ಮತ್ತು ಕೇಂದ್ರ ಮಟ್ಟದ ಕುಂದುಕೊರತೆ ಪರಿಹಾರ ಸಮಿತಿಗೆ ಉಲ್ಲೇಖಿಸಬಹುದು. ಲೈಂಗಿಕ ದೌರ್ಜನ್ಯ, ಈವ್-ಟೀಸಿಂಗ್, ರ‍್ಯಾಗಿಂಗ್ ಮತ್ತು ಕೋಮು ಸೌಹಾರ್ದತೆಯನ್ನು ಹಾಳು ಮಾಡುವ ಪ್ರಕರಣಗಳು ಮುಖ್ಯ ಪ್ರಾಕ್ಟರ್ ಕಚೇರಿಯ ವ್ಯಾಪ್ತಿಯಲ್ಲಿವೆ.

ಹಳೆಯ ನಿಯಮಗಳ ಪ್ರಕಾರ, ಮುತ್ತಿಗೆ ಹಾಕುವಿಕೆ, ಪ್ರತಿಭಟನೆ ಮತ್ತು ಲೈಂಗಿಕ ಕಿರುಕುಳಕ್ಕಾಗಿ ನೀಡುತ್ತಿದ್ದ ಶಿಕ್ಷೆಗಳೆಂದರೆ ಪ್ರವೇಶವನ್ನು ರದ್ದುಗೊಳಿಸುವುದು ಮತ್ತು ಕಾಲೇಜಿನಿಂದ ಹೊರಹಾಕುವಿಕೆಯಾಗಿತ್ತು.












Click it and Unblock the Notifications