ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ವಿರುದ್ಧ ಪ್ರಚಾರ: 20 ಯೂಟ್ಯೂಬ್ ಚಾನೆಲ್‌, 2 ವೆಬ್‌ಸೈಟ್‌ ಬ್ಲಾಕ್‌

|
Google Oneindia Kannada News

ನವದೆಹಲಿ, ಡಿಸೆಂಬರ್‌ 22: ಭಾರತದ ವಿರುದ್ಧವಾಗಿ ಪ್ರಚಾರ ಮಾಡುವ ಹಿನ್ನೆಲೆಯಿಂದಾಗಿ ಕೇಂದ್ರ ಸರ್ಕಾರ ರೂಪಿಸಿದ ಹೊಸ ಮಾಹಿತಿ ಹಾಗೂ ತಂತ್ರಜ್ಞಾನ ನಿಯಮದ ಅಡಿಯಲ್ಲಿ, ಕಾಶ್ಮೀರದ ಎರಡು ವೆಬ್‌ಸೈಟ್‌ ಹಾಗೂ 20 ಯೂಟ್ಯೂಬ್ ಚಾನೆಲ್‌ಗಳನ್ನು ಈ ವರ್ಷದ ಆರಂಭದಲ್ಲಿ ನಿಷೇಧ ಮಾಡಲಾಗಿದೆ (ಬ್ಲಾಕ್‌) ಎಂದು ಕೇಂದ್ರ ಮಾಹಿತಿ ಹಾಗೂ ಪ್ರಸಾರ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

"ಚಾನಲ್‌ಗಳು ಪೋಸ್ಟ್ ಮಾಡಿದ ಹೆಚ್ಚಿನ ವಿಷಯವು "ರಾಷ್ಟ್ರೀಯ ಭದ್ರತೆಯ ದೃಷ್ಟಿಕೋನದಿಂದ ಸೂಕ್ಷ್ಮ ವಿಷಯಗಳಿಗೆ ಸಂಬಂಧಿಸಿದೆ ಮತ್ತು ವಾಸ್ತವಿಕವಾಗಿ ತಪ್ಪಾದ ವಿಚಾರಗಳನ್ನು ಪ್ರಚಾರ ಮಾಡುತ್ತಿದೆ," ಎಂದು ಸರ್ಕಾರ ಹೇಳಿದೆ. ಯೂಟ್ಯೂಬ್ ಚಾನೆಲ್‌ಗಳು ಮತ್ತು ವೆಬ್‌ಸೈಟ್‌ಗಳನ್ನು ನಿರ್ಬಂಧಿಸುವ ನಿರ್ಧಾರವನ್ನು ಸಚಿವಾಲಯವು ಗುಪ್ತಚರ ಸಂಸ್ಥೆ ಜೊತೆ ನಡೆಸಿದ ಚರ್ಚೆಯ ಬಳಿಕ ಕೈಗೊಂಡಿದೆ.

ಭಾರತದ ಕಾನೂನಿಗೆ ಗೂಗಲ್ ಬದ್ಧ - ಹೊಸ ಐಟಿ ನಿಯಮದ ಬಗ್ಗೆ ಸ್ಪಷ್ಟನೆ ನೀಡಿದ ಸುಂದರ್ ಪಿಚೈ ಭಾರತದ ಕಾನೂನಿಗೆ ಗೂಗಲ್ ಬದ್ಧ - ಹೊಸ ಐಟಿ ನಿಯಮದ ಬಗ್ಗೆ ಸ್ಪಷ್ಟನೆ ನೀಡಿದ ಸುಂದರ್ ಪಿಚೈ

ಈ ನಿರ್ಬಂಧಿತ ಚಾನಲ್‌ಗಳು ಮತ್ತು ವೆಬ್‌ಸೈಟ್‌ಗಳು ಪಾಕಿಸ್ತಾನದ ವಿಚಾರಗಳನ್ನು ಪ್ರಚಾರ ಮಾಡುತ್ತಿದೆ. ಕಾಶ್ಮೀರ, ಭಾರತೀಯ ಸೇನೆ, ರಾಮಮಂದಿರ, ಅಲ್ಪಸಂಖ್ಯಾತ ಸಮುದಾಯಗಳು ಮತ್ತು ಸಿಡಿಎಸ್‌ ಜನರಲ್‌ ಬಿಪಿನ್‌ ರಾವತ್‌ ವಿಚಾರದಲ್ಲಿ ಭಾರತ ವಿರೋಧಿ, ಸೂಕ್ಷ್ಮ ವಿಚಾರಗಳನ್ನು ಪೋಸ್ಟ್‌ ಮಾಡಿದೆ ಎಂದು ಕೂಡಾ ಸಚಿವಾಲಯ ಹೇಳಿದೆ.

New IT Rules: 20 Anti-India YouTube Channels and Two Websites Blocked

ಪಾಕಿಸ್ತಾನ ಮೂಲದ ದಿ ನಯಾ ಪಾಕಿಸ್ತಾನ್ ಗ್ರೂಪ್ (NPG) ನ ಯೂಟ್ಯೂಬ್ ಚಾನೆಲ್‌, 35 ಲಕ್ಷಕ್ಕೂ ಹೆಚ್ಚು ಚಂದಾದಾರರನ್ನು ಹೊಂದಿರುವ ಇತರ ಕೆಲವು ಚಾನೆಲ್‌ಗಳು ತಪ್ಪು ಮಾಹಿತಿ ಪ್ರಚಾರ ಮಾಡುತ್ತಿದೆ. ಯಾ ಪಾಕಿಸ್ತಾನ್ ಗ್ರೂಪ್‌ನ ಕೆಲವು ಯೂಟ್ಯೂಬ್ ಚಾನೆಲ್‌ಗಳನ್ನು "ಪಾಕಿಸ್ತಾನಿ ಸುದ್ದಿ ವಾಹಿನಿಗಳ ನಿರೂಪಕರು" ನಿರ್ವಹಣೆ ಮಾಡುತ್ತಿದ್ದಾರೆ ಎಂದು ಕೂಡಾ ಸಚಿವಾಲಯ ಉಲ್ಲೇಖ ಮಾಡಿದೆ.

ರೈತರ ಪ್ರತಿಭಟನೆ, ಪೌರತ್ವ ವಿಚಾರ ಪೋಸ್ಟ್‌

"ಯೂಟ್ಯೂಬ್ ಚಾನೆಲ್‌ಗಳು ರೈತರ ಪ್ರತಿಭಟನೆಗಳು ಮತ್ತು ಪೌರತ್ವ (ತಿದ್ದುಪಡಿ) ಕಾಯ್ದೆಗೆ ಸಂಬಂಧಿಸಿದ ವಿಷಯವನ್ನು ಪೋಸ್ಟ್ ಮಾಡುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಧಾರ್ಮಿಕ ಅಲ್ಪಸಂಖ್ಯಾತರನ್ನು ಪ್ರಚೋದಿಸಲು ಪ್ರಯತ್ನಿ ಮಾಡುತ್ತಿದೆ," ಎಂದು ಕೂಡಾ ಆರೋಪ ಮಾಡಲಾಗಿದೆ. ಹಾಗೆಯೇ, "ಈ ಯೂಟ್ಯೂಬ್ ಚಾನೆಲ್‌ಗಳನ್ನು ಐದು ರಾಜ್ಯಗಳಲ್ಲಿ ಮುಂಬರುವ ಚುನಾವಣೆಗಳ ಪ್ರಜಾಸತ್ತಾತ್ಮಕ ಪ್ರಕ್ರಿಯೆಯನ್ನು ದುರ್ಬಲ ಮಾಡುವ ವಿಚಾರಗಳನ್ನು ಪೋಸ್ಟ್‌ ಮಾಡಲೆಂದು ಬಳಕೆ ಮಾಡಲಾಗುತ್ತಿದೆ," ಎಂದು ಸಚಿವಾಲಯ ಆರೋಪ ಮಾಡಿದೆ. ಇನ್ನು ಸುಳ್ಳು ಸುದ್ದಿಗಳನ್ನು ಪೋಸ್ಟ್‌ ಮಾಡಿದ ಕಾರಣಕ್ಕಾಗಿಯೂ ಈ ಯೂಟ್ಯೂಬ್‌ ಚಾನೆಲ್‌ಗಳನ್ನು ಸರ್ಕಾರ ಬ್ಯಾನ್‌ ಮಾಡುತ್ತಿದೆ ಎಂದು ಕೂಡಾ ಸರ್ಕಾರ ತಿಳಿಸಿದೆ.

ಸರ್ಕಾರವು ನಿರ್ಬಂಧಿಸಿದ ಯೂಟ್ಯೂಬ್ ಚಾನೆಲ್‌ಗಳು ಯಾವುದು?

ಸರ್ಕಾರವು ನಿರ್ಬಂಧಿಸಿದ ಯೂಟ್ಯೂಬ್ ಚಾನೆಲ್‌ಗಳು ದಿ ಪಂಚ್ ಲೈನ್, ಇಂಟರ್‌ನ್ಯಾಶನಲ್ ವೆಬ್ ನ್ಯೂಸ್, ಖಾಲ್ಸಾ ಟಿವಿ, ದಿ ನೇಕೆಡ್ ಟ್ರೂತ್, 48 ನ್ಯೂಸ್, ಫಿಕ್ಷನಲ್, ಹಿಸ್ಟಾರಿಕಲ್ ಫ್ಯಾಕ್ಟ್ಸ್, ಪಂಜಾಬ್ ವೈರಲ್, ನಯಾ ಪಾಕಿಸ್ತಾನ್ ಗ್ಲೋಬಲ್, ಕವರ್ ಸ್ಟೋರಿ, ಗೋ ಗ್ಲೋಬಲ್, ಇಕಾಮರ್ಸ್ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿವೆ. ಇನ್ನು ಜುನೈದ್ ಹಲೀಮ್ ಅಫಿಶಿಯಲ್‌, ತಯ್ಯಬ್ ಹನೀಫ್, ಝೈನ್ ಅಲಿ ಅಫಿಶಿಯಲ್‌, ಮೊಹ್ಸಿನ್ ರಜಪೂತ್, ಅಫಿಶಿಯಲ್‌, ಕನೀಜ್ ಫಾತಿಮಾ, ಸದಾಫ್ ದುರಾನಿ, ಮಿಯಾನ್ ಇಮ್ರಾನ್, ಅಹ್ಮದ್, ನಜಮ್ ಉಲ್ ಹಸನ್, ಬಜ್ವಾ ಮತ್ತು ನ್ಯೂಸ್24 ಕೂಡಾ ಬ್ಯಾನ್‌ ಆಗಲಿದೆ.

ಗುಪ್ತಚರ ಸಂಸ್ಥೆಗಳು ಹಾಗೂ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಜಂಟಿಯಾಗಿ ಪರಿಶೀಲನೆ ನಡೆಸಿ, ಮಾಹಿತಿ ತಂತ್ರಜ್ಞಾನ (ಡಿಜಿಟಲ್‌ ಮಾಧ್ಯಮ ನೀತಿ ಸಂಹಿತೆಗಳು) ನಿಯಮಗಳು, 2021 ರ ನಿಯಮ 16 ರ ಅಡಿಯಲ್ಲಿ ತುರ್ತು ಅಧಿಕಾರವನ್ನು ಬಳಸಿಕೊಂಡು ಈ ಕ್ರಮವನ್ನು ಕೈಗೊಂಡಿದೆ. ಈ ಯೂಟ್ಯೂಬ್‌ ಚಾನೆಲ್‌ಗಳು ಮತ್ತು ವೆಬ್‌ಸೈಟ್‌ಗಳನ್ನು ಬ್ಲಾಕ್‌ ಮಾಡುವಂತೆ ಇಂಟರ್‌ನೆಟ್‌ ಸೇವಾದಾರರಿಗೆ ನಿರ್ದೇಶನ ನೀಡುವಂತೆ ದೂರಸಂಪರ್ಕ ಇಲಾಖೆಗೆ ಮನವಿ ಮಾಡಲಾಗಿದೆ.

(ಒನ್‌ಇಂಡಿಯಾ ಸುದ್ದಿ)

Recommended Video

Cricket Flashback 2021 Episode 02 | Top 10 Richest cricketers of India | Oneindia Kannada

English summary
New IT Rules: 20 'Anti-India' YouTube Channels and Two Websites Blocked.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X