ನವದೆಹಲಿ ವಿಶ್ವ ಪುಸ್ತಕ ಮೇಳ 2026: ಮಕ್ಕಳಿಗೆ ಕಥೆ–ಕಲ್ಪನೆಯ ‘ಕಿಡ್ಸ್ ಎಕ್ಸ್‌ಪ್ರೆಸ್’ ವಿಶೇಷ ರೈಲು ಅನುಭವ
ನವದೆಹಲಿಯ ವಿಶ್ವ ಪುಸ್ತಕ ಮೇಳ-2026ರಲ್ಲಿ ಮಕ್ಕಳಿಗಾಗಿ ರೂಪಿಸಲಾದ ವಿಶೇಷ ಪೆವಿಲಿಯನ್ 'ಕಿಡ್ಸ್ ಎಕ್ಸ್‌ಪ್ರೆಸ್' ಭಾರೀ ಗಮನ ಸೆಳೆಯುತ್ತಿದೆ. ಜನವರಿ 10ರಿಂದ 18ರವರೆಗೆ ಭಾರತ್ ಮಂಟಪದ ಹಾಲ್-6ರಲ್ಲಿ ನಡೆಯುತ್ತಿರುವ ಈ ಪೆವಿಲಿಯನ್, ರೈಲು ಪ್ರಯಾಣದ ಕಲ್ಪನೆಯೊಂದಿಗೆ ಮಕ್ಕಳನ್ನು ಕಥೆ, ಕಲ್ಪನೆ ಮತ್ತು ಸೃಜನಶೀಲತೆಯ ಲೋಕಕ್ಕೆ ಕರೆದೊಯ್ಯುತ್ತಿದೆ.
ರೈಲು ಆಕಾರದಲ್ಲಿ ವಿನ್ಯಾಸಗೊಳಿಸಲಾದ ಕಿಡ್ಸ್ ಎಕ್ಸ್‌ಪ್ರೆಸ್‌ನ ನೇರಳೆ ಬಣ್ಣದ ಆಕರ್ಷಕ ಹೊರಭಾಗ, ಚಲಿಸುವಂತೆ ಕಾಣುವ ಕಿಟಕಿಗಳು ಹಾಗೂ ಟಿಕೆಟ್ ಚೆಕ್ಕರ್, ಚಾಯ್‌ವಾಲಾ, ಸಂಗೀತಗಾರ ಮತ್ತು ಪುಸ್ತಕ ಓದುತ್ತಿರುವ ಮಗು ಮುಂತಾದ ಚಿತ್ರಣಗಳು ಮಕ್ಕಳ ಗಮನ ಸೆಳೆಯುತ್ತಿವೆ. ರೈಲು ಎಂಜಿನ್ ರೂಪದ ಪ್ರವೇಶ ದ್ವಾರದಲ್ಲಿ ಬಬಲ್‌ಗಳು ಆವಿಯಂತೆ ಹೊರಬರುತ್ತಿದ್ದು, ಎನ್‌ಬಿಟಿ-ಇಂಡಿಯಾದ (ನ್ಯಾಷನಲ್ ಬುಕ್ ಟ್ರಸ್ಟ್) ವಿದ್ಯಾ ಮತ್ತು ಜ್ಞಾನ ಪಾತ್ರಗಳು ಮಕ್ಕಳನ್ನು ಈ ಕಲ್ಪನಾ ಪ್ರಯಾಣಕ್ಕೆ ಆಹ್ವಾನಿಸುತ್ತಿವೆ.

ಈ ಪೆವಿಲಿಯನ್ ಒಳಗೆ ಪ್ರವೇಶಿಸಿದಾಗ, ವಿಭಿನ್ನ ಉದ್ದೇಶಗಳಿಗೆ ವಿನ್ಯಾಸಗೊಳಿಸಲಾದ ಬಣ್ಣಬಣ್ಣದ ರೈಲು ಕೋಚ್‌ಗಳು ಮಕ್ಕಳನ್ನು ಸ್ವಾಗತಿಸುತ್ತವೆ. ಓದು, ಚಿಂತನೆ, ಕಲಿಕೆ, ಭಾವನೆ ಮತ್ತು ಸೃಜನಶೀಲತೆಯನ್ನು ಉತ್ತೇಜಿಸುವಂತೆ ಪ್ರತಿಯೊಂದು ಕೋಚ್ ರೂಪುಗೊಂಡಿದೆ. ಈ ಕಲ್ಪನಾ ಯಾತ್ರೆಯು ಸ್ಟೋರಿಟೈಮ್ ಶತಾಬ್ದಿಯಿಂದ ಆರಂಭವಾಗುತ್ತದೆ. ರೀಡ್ ಬಿಯಾಂಡ್ ದ ಸ್ಟಾರ್ಸ್ ಎಂಬ ಸಂದೇಶ ಹೊಂದಿರುವ ಬಾಹ್ಯಾಕಾಶ ಥೀಮ್ ಗೋಡೆಯ ಮುಂದೆ ಇರುವ ಓದು ಮೂಲೆ, ಮಕ್ಕಳಿಗೆ ಹೊಸ ಕಥಾಲೋಕಗಳ ಬಾಗಿಲು ತೆರೆಯುತ್ತದೆ. ರಾಕೆಟ್ ಆಕಾರದ ಪುಸ್ತಕ ಶೆಲ್ಫ್‌ಗಳಲ್ಲಿ ಕಥಾ ಪುಸ್ತಕಗಳು ಪ್ರದರ್ಶನದಲ್ಲಿವೆ.
ರೈಲು ಮ್ಯೂಸಿಯಂ ಕೋಚ್‌ನಲ್ಲಿ ಪುರಾತನ ಸ್ಟೀಮ್ ಎಂಜಿನ್ ಮತ್ತು ಆಧುನಿಕ ವಂದೇ ಭಾರತ್ ರೈಲು ಮಾದರಿಗಳನ್ನು ಪ್ರದರ್ಶಿಸಲಾಗಿದೆ. 'ಚಲ್ತಿ ಕಾ ನಾಮ್ ರೈಲ್ ಗಾಡಿ' ಎಂಬ ಸಾಲಿನಡಿ, ಭಾರತೀಯ ರೈಲ್ವೆಯ ಬೆಳವಣಿಗೆಯನ್ನು ವಿವರಿಸುವ ಫೋಟೋ ಪ್ರದರ್ಶನವಿದೆ. ಜೊತೆಗೆ ಇಂಟರಾಕ್ಟಿವ್ ಸ್ಕ್ರೀನ್‌ಗಳ ಮೂಲಕ ಕ್ವಿಜ್, ಪಜಲ್ ಮತ್ತು ಸುಡೋಕು ಆಟಗಳನ್ನು ಆಯೋಜಿಸಲಾಗಿದ್ದು, ಗೆದ್ದ ಮಕ್ಕಳಿಗೆ ಪುಸ್ತಕ ಕೂಪನ್‌ಗಳನ್ನು ಸಹ ನೀಡಲಾಗುತ್ತಿದೆ.
ಓದುಗರ ಕ್ಲಬ್ ಮೂಮೆಂಟ್ ಕೋಚ್‌ನಲ್ಲಿ NBTಯ ಓದುಗರ ಕ್ಲಬ್ ಬುಲೆಟಿನ್ ಮತ್ತು ಪಾಠಕ್ ಮಂಚ್ ಬುಲೆಟಿನ್ ಮೂಲಕ ದೇಶದಾದ್ಯಂತ ಮಕ್ಕಳೇ ಬರೆದ ಕವನ, ಲೇಖನ ಮತ್ತು ಚಿತ್ರಕಲೆ ಕೃತಿಗಳನ್ನು ಪರಿಚಯಿಸಲಾಗಿದೆ. ಇದರಿಂದ ಮಕ್ಕಳಲ್ಲಿ ಬಾಲ್ಯದಲ್ಲೇ ಓದು ಮತ್ತು ಬರವಣಿಗೆಯ ಅಭ್ಯಾಸ ಬೆಳೆಸುವ ಪ್ರಯತ್ನ ಮಾಡಲಾಗಿದೆ.
ರೈಲು ನಿಲ್ದಾಣದ ಪುಸ್ತಕ ಮಳಿಗೆಗಳಿಂದ ಪ್ರೇರಿತವಾಗಿರುವ ಕಿತಾಬ್ ಘರ್ ಮಕ್ಕಳ ಸೃಜನಶೀಲತೆಗೆ ವೇದಿಕೆಯಾಗಿದೆ. ಅಪೂರ್ಣ ಕಥೆಗಳನ್ನು ಪೂರ್ಣಗೊಳಿಸುವುದು, ಕವನ ಬರೆಯುವುದು ಹಾಗೂ ಪುಸ್ತಕ ಮುಖಪುಟ ವಿನ್ಯಾಸಗೊಳಿಸುವಂತಹ ಚಟುವಟಿಕೆಗಳಲ್ಲಿ ಮಕ್ಕಳು ತೊಡಗಿಸಿಕೊಂಡಿದ್ದಾರೆ. ಇಮೋಜಿ ಜಂಕ್ಷನ್ ಕೋಚ್‌ನಲ್ಲಿ ಬಣ್ಣ ಮತ್ತು ಕಲೆಯ ಮೂಲಕ ಮಕ್ಕಳು ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಜಲಾಂತರ್ಗಾಮಿ ಥೀಮ್‌ನ ಕ್ಲಿಕ್ ಮಿ ಜಂಕ್ಷನ್ ಫೋಟೋ ಕಾರ್ನರ್ ಕುಟುಂಬಗಳ ಗಮನ ಸೆಳೆಯುತ್ತಿದೆ.
ಮಧುಬನಿ, ವಾರ್ಲಿ ಚಿತ್ರಕಲೆ, ಪೇಪರ್ ಕಠ್ಪುಟ್ಲಿ, ಕ್ಲೇ ಆರ್ಟ್, ಆರ್ಟ್ ಅಂಡ್ ಕ್ರಾಫ್ಟ್ ಸೇರಿದಂತೆ ಹಲವು ಕಾರ್ಯಾಗಾರಗಳು ಮಕ್ಕಳ ಕೈಚಳಕ ಮತ್ತು ಸೃಜನಶೀಲತೆಯನ್ನು ಹೆಚ್ಚಿಸುತ್ತಿವೆ. 'ರಂಗ್ ದೋ ದುನಿಯಾ ಸಾರಿ' ಎಂಬ ಸಂದೇಶದೊಂದಿಗೆ ರೂಪಿಸಲಾದ ಕಲರ್ ಮಿ ಕೋಚ್‌ನಲ್ಲಿ, ಮಕ್ಕಳು ದೊಡ್ಡ ಡೂಡಲ್ ಕ್ಯಾನ್‌ವಾಸ್ ಮೇಲೆ ಮುಕ್ತವಾಗಿ ಬಣ್ಣ ತುಂಬುತ್ತಿದ್ದಾರೆ.
ಸಂಗೀತ, ನಾಟಕ, ಗೊಂಬೆ ಆಟ, ರೋಲ್‌ಪ್ಲೇ ಮೂಲಕ ಕಥಾ ವಾಚನ ಗುರಿಗಳೊಂದಿಗೆ ಸಂಬಂಧಿಸಿದ ಚಟುವಟಿಕೆಗಳು, ಮಕ್ಕಳಿಗೆ ಆಟದ ಜೊತೆಗೆ ಕಲಿಕೆಯ ಅನುಭವ ನೀಡುತ್ತಿವೆ. ಸ್ಪೇನ್, ರಷ್ಯಾ, ಫಿನ್‌ಲ್ಯಾಂಡ್, ಇಸ್ರೇಲ್‌ನ ಅಂತರರಾಷ್ಟ್ರೀಯ ಕಥೆಗಾರರು ಮತ್ತು ಲೇಖಕರು ಮಕ್ಕಳೊಂದಿಗೆ ಸಂವಾದ ನಡೆಸುತ್ತಿರುವುದು ಇಲ್ಲಿನ ವಿಶೇಷ.
ಒರಿಗಮಿ, ಕಾರ್ಟೂನ್ ವಿನ್ಯಾಸ, ಪಾತ್ರ ಸೃಷ್ಟಿ, ರಂಗಭೂಮಿ ಕಾರ್ಯಾಗಾರಗಳು, ಬೊಂಬೆ ಪ್ರದರ್ಶನಗಳ ಮೂಲಕ ಗಣಿತ ಮತ್ತು ವಿಜ್ಞಾನವನ್ನು ರಸದಾಯಕವಾಗಿ ಪರಿಚಯಿಸಲಾಗುತ್ತಿದೆ. ಮಕ್ಕಳ ಲೇಖಕರ ಭೇಟಿ, ಮಾಸ್ಕಾಟ್ ಸಂವಹನ ಮತ್ತು ಮಕ್ಕಳ ಚಲನಚಿತ್ರ ಪ್ರದರ್ಶನಗಳು ಕೂಡ ಆಯೋಜಿಸಲಾಗಿದೆ. ಸಂಜೆ ವೇಳೆಯಲ್ಲಿ ನಡೆಯುವ ಟ್ರೈನಿಂಗ್ ದ ಟ್ರೈನರ್ಸ್ ಕಾರ್ಯಕ್ರಮದಲ್ಲಿ ಶಿಕ್ಷಕರು, ಶಿಕ್ಷಣ ತಜ್ಞರು ಮತ್ತು ಪೋಷಕರಿಗಾಗಿ ಟಾಯ್-ಬೇಸ್‌ಡ್ ಪೆಡಗೋಜಿ, ನಾಟಕ ಆಧಾರಿತ ಕಲಿಕೆ, ಆಟದ ಮೂಲಕ ಗಣಿತ, ತರಗತಿಗಳಲ್ಲಿನ ಮಾನಸಿಕ ಆರೋಗ್ಯ ಹಾಗೂ ಸೃಜನಶೀಲ ಬೋಧನಾ ಸಾಧನಗಳ ಕುರಿತು ಕಾರ್ಯಾಗಾರಗಳು ಮತ್ತು ಪ್ಯಾನಲ್ ಚರ್ಚೆಗಳು ನಡೆಯುತ್ತಿವೆ. ಜೊತೆಗೆ ಲೈಬ್ರೇರಿಯನ್ ಮೀಟ್ ಕೂಡ ಆಯೋಜಿಸಲಾಗಿದೆ.
ಲೌರಾ ಎಸ್ಕುಯೆಲಾ, ಅನಿತಾ ಸಿನ್ಹಾ, ರಾಜೀವ್ ತಾಂಬೆ, ಜನಕಿ ಸಾಬೇಶ್, ಐರಿಸ್ ಅರ್ಗಮನ್, ಐರಿಸ್ ಮಾಟ್ಟಾ, ಇರಿನಾ ಕ್ರೇವಾ, ಶರಣ್ಯ ಶ್ರೀರಾಮ್, ನಾಮಿಕ್ ಶೆರ್ಪಾ ಮತ್ತು ರಾಮೇಂದ್ರ ಕುಮಾರ್ ಸೇರಿದಂತೆ ಹಲವರು ನಡೆಸಿದ ಸೆಷನ್‌ಗಳು ಕಿಡ್ಸ್ ಎಕ್ಸ್‌ಪ್ರೆಸ್‌ಗೆ ವಿಶೇಷ ಕಳೆ ತಂದಿವೆ. ಒಟ್ಟಾರೆ ಈ ಕಿಡ್ಸ್ ಎಕ್ಸ್‌ಪ್ರೆಸ್ ಮಕ್ಕಳಿಗೆ ಪುಸ್ತಕ ಓದುವುದನ್ನು ಮಾತ್ರವಲ್ಲ, ಕಥೆಗಳನ್ನು ಬದುಕುವ ಅನುಭವವನ್ನೇ ನೀಡುತ್ತಿದೆ. ಕಲಿಕೆ, ಆಟ ಮತ್ತು ಕಲ್ಪನೆಯ ಸಂಗಮವಾಗಿ ಮೂಡಿಬಂದ ಈ ಪೆವಿಲಿಯನ್, ನವದೆಹಲಿಯ ವಿಶ್ವ ಪುಸ್ತಕ ಮೇಳದ ಪ್ರಮುಖ ಆಕರ್ಷಣೆಯಾಗಿ ಹೊರಹೊಮ್ಮಿದೆ.
-
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
ಭಾರತದ ಏಕೈಕ ರೈಲು ಸಂಪರ್ಕವಿಲ್ಲದ ರಾಜ್ಯ ಸಿಕ್ಕಿಂ: ಕಾರಣ ಮತ್ತು ಪ್ರಯಾಣ ಮಾರ್ಗಗಳ ವಿವರ -
Train Delay: ರೈಲು ಪ್ರಯಾಣಿಕರೇ ಎಚ್ಚರ! ನಾಳೆ ಬೆಂಗಳೂರು-ಚೆನ್ನೈ ನಡುವಿನ ಸಂಚಾರದಲ್ಲಿ ಭಾರಿ ವ್ಯತ್ಯಯ -
Vande Bharat Sleeper: ಉತ್ಪಾದನೆ ಗುರಿ ತಲುಪದ ಬೆಂಗಳೂರು-ಚೆನ್ನೈ ಕಂಪನಿಗಳು, ಸ್ಲೀಪರ್ ರೈಲು ವಿತರಣೆ ವಿಳಂಬ -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ರೈಲಿನಲ್ಲಿ ಆಹಾರ ಗುಣಮಟ್ಟ, ಅಧಿಕೃತ ವೆಂಡರ್ ಮಾಹಿತಿ ತಿಳಿಯಲು QR ಕೋಡ್ ವ್ಯವಸ್ಥೆ, ಏನಿದು? -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ












Click it and Unblock the Notifications