ಹಿಂದಿ ಹೇರಿಕೆ ವಿರುದ್ಧ ಹೊಸ ಅಭಿಯಾನ: ನಟ ಪ್ರಕಾಶ್ ರಾಜ್ ಟ್ವೀಟ್ ವೈರಲ್!
ನಟ ಪ್ರಕಾಶ್ ರಾಜ್ ಅವರು ಸಾಮಾಜಿಕ ಜವಾಬ್ದಾರಿಯಿಂದ ಕೆಲವೊಂದು ಪ್ರಮುಖ ಅಭಿಯಾನಗಳನ್ನು ನಡೆಸುವುದು ಇದೆ. ಅದರಲ್ಲೂ ಪ್ರಮುಖವಾಗಿ ಹಿಂದಿ ಹೇರಿಕೆಯನ್ನು ವಿರೋಧಿಸಿ ಅವರು ಈ ಹಿಂದೆಯೂ ಕೆಲವೊಂದು ಅಭಿಯಾನಗಳನ್ನು ನಡೆಸಿದ್ದಾರೆ. ಕರ್ನಾಟಕದಲ್ಲಿ ಮೊಸರು ಪ್ಯಾಕೆಟ್‌ಗಳ ಮೇಲೆ ದಹಿ ಎಂದು ಪ್ರಕಟಿಸಿ ಹಿಂದಿ ಪ್ರಚಾರಕ್ಕೆ ಮುಂದಾದ ಸಂದರ್ಭದಲ್ಲಿ ಅವರು ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸಿದ್ದರು. ಇದೀಗ ಹಿಂದಿ ಹೇರಿಕೆಯನ್ನು ವಿರೋಧಿಸಿ ಮತ್ತೊಂದು ಅಭಿಯಾನಕ್ಕೆ ನಟ ಪ್ರಕಾಶ್ ರಾಜ್ ಅವರು ಕರೆ ನೀಡಿದ್ದಾರೆ. ಅದೇನು ಎನ್ನುವ ವಿವರ ನೋಡೋಣ.
ದೇಶದಲ್ಲಿ ಒಂದಿಲ್ಲೊಂದು ಮಾರ್ಗದಲ್ಲಿ ಹಿಂದಿ ಹೇರಿಕೆ ಆಗುತ್ತಲ್ಲೇ ಇದೆ. ರಾಜ್ಯ ಕಾಂಗ್ರೆಸ್ ಸರ್ಕಾರವೂ ಸಹ ದ್ವಿಭಾಷಾ ನೀತಿಯನ್ನು ಅಳವಡಿಸಿಕೊಳ್ಳುವುದಾಗಿ ಒಪ್ಪಿಕೊಂಡಿದೆಯಾದರೂ ದ್ವಿಭಾಷಾ ನೀತಿ ಸೂತ್ರ ಅಳವಡಿಸಿಕೊಳ್ಳುವುದಕ್ಕೆ ಬೇಕಾದ ಕೆಲಸವನ್ನು ಮಾಡುತ್ತಿಲ್ಲ. ಕೇವಲ ಕನ್ನಡಿಗರ ಕಣ್ಣೊರೆಸುವ ತಂತ್ರವನ್ನು ಅನುಸರಿಸುತ್ತಿದೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಈ ನಡುವೆ ಹಿಂದಿ ಹೇರಿಕೆ ವಿಚಾರ ಪದೇ ಪದೇ ಚರ್ಚೆ ಆಗುತ್ತಿದೆ.

ಇದರ ನಡುವೆ ಸೋಷಿಯಲ್ ಮೀಡಿಯಾದಲ್ಲಿ ಹಿಂದಿ ಹೇರಿಕೆಯ ವಿರುದ್ಧ ಹೊಸ ಅಭಿಯಾನ ಶುರುವಾಗಿದೆ. ಬುಡಕಟ್ಟು ಮಕ್ಕಳ ಮೇಲೆ ಹಿಂದಿ ಹೇರಿಕೆ ಮಾಡಲಾಗುತ್ತಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ಈ ವಿಷಯದ ಬಗ್ಗೆ ಪ್ರಕಾಶ್ ರಾಜ್ ಅವರು ಟ್ವೀಟ್ ಮಾಡಿದ್ದಾರೆ. Emrs (EMRS stands for Eklavya Model Residential Schools)ನ ಉಪ ಆಯುಕ್ತರು ಹಿಂದಿ ನಮ್ಮ ರಾಷ್ಟ್ರೀಯ ಭಾಷೆ ಎಂದು ಹೇಳಿದ್ದಾರೆ ಎಂದು ಹೇಳಲಾಗಿದ್ದು, ಇದು ಹೊಸ ವಿವಾದ ಹಾಗೂ ವಿರೋಧಕ್ಕೂ ಕಾರಣವಾಗಿದೆ. ಇಎಂಆರ್ಎಸ್ ಶಾಲೆಗಳಲ್ಲಿ ಬುಡಕಟ್ಟು ಮಕ್ಕಳ ಮೇಲೆ ಹಿಂದಿ ಹೇರಿಕೆ ನಡೆಯುತ್ತಿದೆ ಎಂದು ಪ್ರಶ್ನೆ ಕೇಳಲಾಗಿದ್ದು, ಬುಡಕಟ್ಟು ಶಿಕ್ಷಣದ ಉಪ ಆಯುಕ್ತರು "ರಾಷ್ಟ್ರೀಯ ಭಾಷೆಯಾಗಿ ಹಿಂದಿ ಅತ್ಯಗತ್ಯ." ಎಂದು ಉತ್ತರಿಸಿದ್ದಾರೆ ಎಂದು ಹೇಳಲಾಗಿದೆ.
Requesting everyone to please go through this thread and share it around. #MustRead #justasking https://t.co/PfQ6cwnCQ5
— Prakash Raj (@prakashraaj) July 20, 2025
ಶಿಕ್ಷಣದ ಪ್ರಮುಖ ಹುದ್ದೆಯಲ್ಲಿ ಇರುವವರು ಹಿಂದಿ ರಾಷ್ಟ್ರೀಯ ಭಾಷೆ ಎಂದು ಕರೆದರೆ ಪರಿಸ್ಥಿತಿ ಏನು. ಈ ವ್ಯವಸ್ಥೆಯಡಿ ಬುಡಕಟ್ಟು ವಿದ್ಯಾರ್ಥಿಗಳ ದುಃಸ್ಥಿತಿಯನ್ನು ಊಹಿಸಿ. ಇದು ಆಕಸ್ಮಿಕವಲ್ಲ, ಉದ್ದೇಶ ಪೂರ್ವಕವಾಗಿ ಹಿಂದಿ ಹೇರಿಕೆಯ ವಿಧಾನವಾಗಿದೆ ಎಂದು ನಯನಿ ಅನುರಾಗ್ ರೆಡ್ಡಿ ಎನ್ನುವವರು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಅನ್ನು ನಟ ಪ್ರಕಾಶ್ ರಾಜ್ ಅವರು ರೀ ಟ್ವೀಟ್ ಮಾಡಿದ್ದಾರೆ. ಆದರೆ ಇದು ಹಳೆಯ ಟ್ವೀಟ್ ಆಗಿದ್ದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ವೈರಲ್ ಆಗುತ್ತಿದೆ.












Click it and Unblock the Notifications