Get Updates
Get notified of breaking news, exclusive insights, and must-see stories!

ಕೆನಡಾ ಪಾಸ್‌ಪೋರ್ಟ್ ಇದೆ, ಆದರೆ ತೆರಿಗೆ ಕಟ್ಟುವುದು ಭಾರತಕ್ಕೆ: ಅಕ್ಷಯ್ ಕುಮಾರ್

ನವದೆಹಲಿ, ಮೇ 3: ಲೋಕಸಭೆ ಚುನಾವಣೆಯಲ್ಲಿ ಮತದಾನ ಮಾಡದೆ ಇರುವುದಕ್ಕೆ ತೀವ್ರ ಟೀಕೆಗೆ ಗುರಿಯಾಗಿದ್ದ ನಟ ಅಕ್ಷಯ್ ಕುಮಾರ್ ಅವರ ಪೌರತ್ವದ ಬಗ್ಗೆ ಪ್ರಶ್ನೆಗಳು ವ್ಯಕ್ತವಾಗಿದ್ದವು. ಅವುಗಳಿಗೆ ಅಕ್ಷಯ್ ಕುಮಾರ್ ಸ್ಪಷ್ಟೀಕರಣ ನೀಡಿದ್ದಾರೆ.

'ನಾನು ಕೆನಡಾ ಪಾಸ್‌ಪೋರ್ಟ್ ಹೊಂದಿರುವುದನ್ನು ಬಚ್ಚಿಟ್ಟಿಲ್ಲ ಅಥವಾ ನಿರಾಕರಿಸಿಲ್ಲ. ನಾನು ಭಾರತದಲ್ಲಿ ಕೆಲಸ ಮಾಡುತ್ತಿದ್ದೇನೆ. ನನ್ನ ಎಲ್ಲ ತೆರಿಗೆಗಳನ್ನೂ ಭಾರತದಲ್ಲಿ ಕಟ್ಟುತ್ತೇನೆ' ಎಂದು ಅಕ್ಷಯ್ ಕುಮಾರ್ ಹೇಳಿಕೆ ನೀಡಿದ್ದಾರೆ.

ಅಕ್ಷಯ್ ಕುಮಾರ್ ಅವರ ಪತ್ನಿ ಟ್ವಿಂಕಲ್ ಖನ್ನಾ, ಮುಂಬೈನಲ್ಲಿ ಮತದಾನ ಮಾಡಿದ ಬಳಿಕ ಅದರ ಸೆಲ್ಫಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಕೊಂಡಿದ್ದರು. ಆದರೆ ಅಕ್ಷಯ್ ಕುಮಾರ್ ಹೆಸರು ಮತಗಟ್ಟೆಗಳಲ್ಲಿ ಕಾಣಿಸಿರಲಿಲ್ಲ. ದೇಶಭಕ್ತಿಯ ಬಗ್ಗೆ ಸಿನಿಮಾಗಳನ್ನು ಮಾಡುವ ಅಕ್ಷಯ್ ಮತದಾನವನ್ನೇ ಮಾಡಿಲ್ಲ ಎಂದು ಟ್ರೋಲ್ ಮಾಡಲಾಗಿತ್ತು.

never denied or hide canadian passport i work and pay taxes in India akshay kumar

ಈಗ ತಮ್ಮ ಕೆನಡಾ ಪೌರತ್ವದ ಬಗ್ಗೆ ಅಕ್ಷಯ್ ಅಧಿಕೃತ ಸ್ಪಷ್ಟೀಕರಣ ನೀಡಿದ್ದಾರೆ. 'ನನ್ನ ನಾಗರಿಕತ್ವದ ಕುರಿತು ಅನಗತ್ಯ ಆಸಕ್ತಿ ಮತ್ತು ನಕಾರಾತ್ಮಕ ವಿಚಾರ ಹರಡುತ್ತಿರುವುದು ಏಕೆಂದು ನನಗೆ ನಿಜಕ್ಕೂ ಅರ್ಥವಾಗುತ್ತಿಲ್ಲ. ನಾನು ಕೆನಡಾ ಪಾಸ್‌ಪೋರ್ಟ್ ಹೊಂದಿದ್ದೇನೆ ಎಂಬುದನ್ನು ಬಚ್ಚಿಟ್ಟಿಲ್ಲ, ನಿರಾಕರಿಸಿಯೂ ಇಲ್ಲ. ಕಳೆದ ಏಳು ವರ್ಷಗಳಿಂದ ಕೆನಡಾಕ್ಕೆ ನಾನು ಭೇಟಿ ನೀಡಿಲ್ಲ ಎನ್ನುವುದೂ ಅಷ್ಟೇ ಸತ್ಯ. ನಾನು ಭಾರತದಲ್ಲಿ ಕೆಲಸ ಮಾಡುತ್ತಿದ್ದೇನೆ. ನನ್ನ ಎಲ್ಲ ತೆರಿಗೆಗಳನ್ನೂ ಭಾರತದಲ್ಲಿಯೇ ಪಾವತಿಸುತ್ತಿದ್ದೇನೆ' ಎಂದು ಹೇಳಿದ್ದಾರೆ.

'ಇಷ್ಟು ವರ್ಷಗಳಲ್ಲಿ ನಾನು ಭಾರತದೆಡೆಗಿನ ನನ್ನ ಪ್ರೀತಿಯನ್ನು ಯಾರಿಗೂ ಸಾಬೀತುಪಡಿಸಬೇಕಿರಲಿಲ್ಲ. ಅನಗತ್ಯವಾದ ವಿವಾದಕ್ಕೆ ನನ್ನ ಪೌರತ್ವದ ವಿಚಾರವನ್ನು ನಿರಂತರವಾಗಿ ಎಳೆದು ತರುತ್ತಿರುವುದಕ್ಕೆ ನನಗೆ ಬೇಸರವಾಗಿದೆ. ಇದು ವೈಯಕ್ತಿಕ, ಕಾನೂನಾತ್ಮಕ ಮತ್ತು ರಾಜಕೀಯೇತರ ವಿಚಾರ. ಮತ್ತು ಬೇರೆಯವರಿಗೆ ಸಂಬಂಧಿಸಿದ್ದೂ ಅಲ್ಲ. ಕೊನೆಯದಾಗಿ, ನಾನು ಭಾರತವನ್ನು ಹೆಚ್ಚು ಹೆಚ್ಚು ಬಲಗೊಳಿಸುವ ಕಾರ್ಯಗಳನ್ನು ನಂಬಿರುವ ನನ್ನ ಸಣ್ಣ ಕೊಡುಗೆಯನ್ನು ಮುಂದುವರಿಸಲು ಬಯಸುತ್ತೇನೆ' ಎಂದು ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+