ನೇತಾಜಿ 125ನೇ ಜನ್ಮ ದಿನಾಚರಣೆ: ಯುವಕರ ಪಾಲಿನ ಸ್ಪೂರ್ತಿ ಚಿಲುಮೆ ಸುಭಾಷ್ ಚಂದ್ರ ಬೋಸ್
ನವದೆಹಲಿ, ಆಗಸ್ಟ್ 16: ಭಾರತವು ನೇತಾಜಿ ಸುಭಾಷ್ ಚಂದ್ರ ಬೋಸ್ 125ನೇ ಜನ್ಮ ದಿನಾಚರಣೆಯನ್ನು ವಿಭಿನ್ನ ಹಾಗೂ ವಿಶೇಷವಾಗಿ ಆಚರಿಸುತ್ತಿದೆ. ಒಡಿಶಾದ ಕಟಕ್ ಪ್ರದೇಶದಲ್ಲಿ 1897ರ ಜನವರಿ 23ರಂದು ವಕೀಲ ಜಾನಕಿನಾಥ್ ಪುತ್ರರಾಗಿ ಜನಿಸಿದ ಸುಭಾಷ್ ಚಂದ್ರ ಬೋಸ್, ಭಾರತದ ಸ್ವಾಂತತ್ರ್ಯಕ್ಕಾಗಿ ಹೋರಾಡಿದ ಧೀಮಂತ ನಾಯಕರ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದಾರೆ. ಆಜಾದ್ ಹಿಂದ್ ಫೌಜ್ ಸ್ಥಾಪನೆಯಿಂದ ಸಹ ಹೆಸರುವಾಸಿ ಆಗಿದ್ದಾರೆ.
ವಿಶ್ವದ ಎರಡನೇ ಮಹಾಯುದ್ಧದ ಸಮಯದಲ್ಲಿ ಆಜಾದ್ ಹಿಂದ್ ಫೌಜ್ ನಾಯಕತ್ವ ಸ್ವತಃ ನೇತಾಜಿ ಸುಭಾಷ್ ಚಂದ್ರ ಬೋಸ್ ವಹಿಸಿಕೊಡಿದ್ದರು. ಅಲ್ಲದೇ ಸ್ವತಂತ್ರ ಭಾರತದ ಮೊದಲ ಸರ್ಕಾರವು ಅವರ ನಾಯಕತ್ವದಲ್ಲಿ ರಚನೆಯಾಗಿತ್ತು. ಆದರೆ ಇದರ ಜೊತೆಗೆ ಆಜಾದ್ ಹಿಂದ್ ಫೌಜ್ ಈಶಾನ್ಯ ಭಾರತದ ಕೆಲವು ಭಾಗಗಳನ್ನು ವಿಮೋಚಿಸುವಲ್ಲಿ ಯಶಸ್ವಿಯಾಗಿತ್ತು.
ಭಾರತದ ಪಾಲಿಗೆ ನೇತಾಜಿಯವರ ಅದಮ್ಯ ಚೇತನ. ಅವರ ನಿಸ್ವಾರ್ಥ ಸೇವೆಯನ್ನು ಗೌರವಿಸಲು ಮತ್ತು ನೆನಪಿಸಿಕೊಳ್ಳುವ ಉದ್ದೇಶದಿಂದ ಐಎನ್ಎ ಟ್ರಸ್ಟ್ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ವೇಳೆ ಪ್ರತಿಕೂಲ ಪರಿಸ್ಥಿತಿಯಲ್ಲೂ ಯಾವ ರೀತಿ ಧೈರ್ಯದಿಂದ ಮುನ್ನುಗ್ಗಬೇಕು ಎಂಬುದರ ಬಗ್ಗೆ ವಿಶೇಷವಾಗಿ ಯುವಕರು ಸೇರಿದಂತೆ ಎಲ್ಲರಲ್ಲೂ ದೇಶಭಕ್ತಿಯ ಉತ್ಸಾಹವನ್ನು ತುಂಬಲಾಯಿತು.

ನೇತಾಜಿ ಕೊಡುಗೆ ದೇಶದ ಜನರಿಗೆ ಸರಿಯಾಗಿ ತಿಳಿದಿಲ್ಲ:
ಪಶ್ಚಿಮ ಬಂಗಾಳದ ಕ್ರಾಂತಿಕಾರಿಗಳನ್ನು ಸನ್ಮಾನಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ನೇತಾಜಿ ಸುಭಾಷ್ ಬೋಸ್ - ಐಎನ್ಎ ಟ್ರಸ್ಟ್ ನ ಟ್ರಸ್ಟಿ ಮತ್ತು ನೇತಾಜಿಯ ಮೊಮ್ಮಗಳು ಡಾ.ಜೆ.ಎಸ್. ರಜಪೂತ್, ಭಾರತದ ಸ್ವಾತಂತ್ರ್ಯೋತ್ಸವದ ಹೋರಾಟದಲ್ಲಿ ನೇತಾಜಿ ಕೊಡುಗೆ ದೇಶದ ಜನರಿಗೆ ತಿಳಿದಿಲ್ಲ ಎಂದರು. ಭಾರತದಲ್ಲಿ ಹೊಸ ತೆಲಮಾರಿನ ಜನರು ಈ ಅಪ್ರತಿಮ ವ್ಯಕ್ತಿತ್ವದ ಬಗ್ಗೆ ತಿಳಿದುಕೊಳ್ಳುವ ನಿಟ್ಟಿನಲ್ಲಿ ಸಂಶೋಧನೆಗಳನ್ನು ನಡೆಸುವುದು ಹೇಗೆ ಎಂಬ ಉಪನ್ಯಾಸದೊಂದಿಗೆ ಕಾರ್ಯಕ್ರಮ ಆರಂಭಿಸಲಾಗಿತ್ತು. ಈ ಕಾರ್ಯಕ್ರಮವನ್ನು ಆಯೋಜಿಸುವುದರ ಹಿಂದೆ ಬೋಸ್ ಮಾಡಿರುವ ಸಾಧನೆಗಳನ್ನು ಸಾರುವುದರ ಜೊತೆ ಯುವಕರಲ್ಲಿ ಸ್ಪೂರ್ತಿ ತುಂಬುವ ಉದ್ದೇಶವಿದೆ. ದೇಶದ ಯುವಕರು ನಿಜವಾದ ಪಕ್ಷಪಾತದ ಬಗ್ಗೆ ಅರ್ಥಮಾಡಿಕೊಳ್ಳಬೇಕಾದರೆ ನೇತಾಜಿ ಸುಭಾಷ್ ಚಂದ್ರ ಬೋಸ್ ಬಗ್ಗೆ ತಿಳಿದುಕೊಳ್ಳಬೇಕು ಎಂದು ಹೇಳಿದರು. ಟ್ರಸ್ಟ್ ಆಯೋಜಿಸಿದ್ದ ಕಾರ್ಯಕ್ರಮ ಮತ್ತು ಗಣ್ಯರ ನುಡಿಯನ್ನು ಈ ವಿಡಿಯೋದಲ್ಲಿ ನೋಡಿ.
ಯುವಕರಲ್ಲಿ ದೇಶಭಕ್ತಿ ತತ್ವಗಳ ಉತ್ತೇಜನ:
ಭಾರತದಲ್ಲಿ ಇಂದಿನ ಯುವಕರಲ್ಲಿ ದೇಶಭಕ್ತಿ, ರಾಷ್ಟ್ರೀಯತೆ, ಸ್ವಯಂ-ಶಿಸ್ತು ಮತ್ತು ಸಾಮಾಜಿಕ ಸೇವೆಯಂತಹ ನೇತಾಜಿಯವರ ಮೂಲಭೂತ ತತ್ವಗಳನ್ನು ಉತ್ತೇಜಿಸುವುದು ಐಎನ್‌ಎ ಟ್ರಸ್ಟ್‌ನ ಮುಖ್ಯ ಉದ್ದೇಶವಾಗಿದೆ. ಆ ಮೂಲಕ, INA ಟ್ರಸ್ಟ್ ಮುಂದಿನ ಪೀಳಿಗೆಗೆ ಅಧಿಕಾರ ನೀಡುವ ಗುರಿ ಹೊಂದಿದೆ. ಅದರಿಂದ ಸುಭಾಷ್ ಚಂದ್ರ ಬೋಸ್ ದೂರದೃಷ್ಟಿಗೆ ಅನುಗುಣವಾಗಿ ಸ್ವತಂತ್ರ ಭಾರತ ನಿರ್ಮಾಣ ಕಾರ್ಯವನ್ನು ಯಶಸ್ವಿಗೊಳಿಸಬಹುದು," ಎಂದರು.
ಈ ಸಮಾರಂಭದಲ್ಲಿ ಆಹ್ವಾನಿತರಾದ ಪತ್ರಕರ್ತ, ಪ್ರಶಸ್ತಿ ವಿಜೇತ ಬರಹಗಾರ, ಸಾರ್ವಜನಿಕ ಭಾಷಣಕಾರ ಮತ್ತು ಸಾಮಾಜಿಕ ಉದ್ಯಮಿ ಹಿಂದುಲ್ ಸೇನ್‌ಗುಪ್ತಾ ಮಾತನಾಡಿದರು. ಸ್ವಾಮಿ ವಿವೇಕಾನಂದರ ಬಗ್ಗೆ ನೇತಾಜಿ ಆಡಿರುವ ಅಚ್ಚುಮೆಚ್ಚಿನ ಮಾತುಗಳ ಬಗ್ಗೆ ಉಲ್ಲೇಖಿಸಿದರು. ಕ್ರಾಂತಿಕಾರಿ ನೆಲದಲ್ಲಿ 34 ವರ್ಷಗಳ ಅಂತರದಲ್ಲಿ ಈ ಇಬ್ಬರು ನಾಯಕರು ಜನಿಸಿದ್ದರು. ಭಾರತೀಯ ಇತಿಹಾಸದಲ್ಲಿ ಈ ಇಬ್ಬರು ನಾಯಕರು ಪರಸ್ಪರ ಹೇಗೆ ನಂಟು ಬೆಸೆದುಕೊಂಡಿದ್ದಾರೆ ಎಂಬುದರ ಬಗ್ಗೆ ಮಾತನಾಡಿದರು.












Click it and Unblock the Notifications