ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಿಂದೆ 'ಸಾಲ್ವರ್ ಗ್ಯಾಂಗ್'!
ನವದೆಹಲಿ, ಜೂನ್ 24: ನೀಟ್ ಪರೀಕ್ಷೆ ಮತ್ತೆ ಸುದ್ದಿಯಾಗಿದೆ. ಒಂದು ದೇಶ, ಒಂದು ಪರೀಕ್ಷೆ ಹೆಸರಿನಲ್ಲಿ ವೈದ್ಯಕೀಯ ಸೀಟುಗಳ ಪ್ರವೇಶಾತಿಗಾಗಿ ಪರಿಚಯಿಸಲಾದ 'ನೀಟ್' ಪರೀಕ್ಷೆ ಬಗ್ಗೆ ಪ್ರತಿವರ್ಷವೂ ಒಂದಲ್ಲ ಒಂದು ಅಪಸ್ವರ ಕೇಳಿ ಬರುತ್ತಿದೆ. ಈ ಬಾರಿ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ.
ಕೇಂದ್ರ ಸರ್ಕಾರ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದ ತನಿಖೆಯನ್ನು ಸಿಬಿಐಗೆ ನೀಡಿದೆ. ಎಫ್‌ಐಆರ್ ದಾಖಲು ಮಾಡಿಕೊಂಡು ಸಿಬಿಐ ತನಿಖೆ ಆರಂಭಿಸಿದೆ. ಆದರೆ ಬಿಹಾರ ಪೊಲೀಸರು ಕೇಂದ್ರ ಸರ್ಕಾರಕ್ಕೆ ಸಲ್ಲಿಕೆ ಮಾಡಿರುವ ವರದಿಯಲ್ಲಿ ಸೋರಿಕೆ ಹಗರಣದಲ್ಲಿ 'ಸಾಲ್ವರ್ ಗ್ಯಾಂಗ್' ಕೈವಾಡವಿದೆ ಎಂದು ಹೇಳಿದೆ.

ವಿವಿಧ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಯನ್ನು ಸೋರಿಕೆ ಮಾಡುವ ಬಹುದೊಡ್ಡ ಜಾಲವೇ 'ಸಾಲ್ವರ್ ಗ್ಯಾಂಗ್'. ಹಲವು ರಾಜ್ಯಗಳಲ್ಲಿ ಗ್ಯಾಂಹ್ ಕಾರ್ಯಜಾಲವನ್ನು ಹೊಂದಿದ್ದು, ಸಾಮಾಜಿಕ ಜಾಲತಾಣದ ಮೂಲಕವೇ ಪ್ರಶ್ನೆ ಪತ್ರಿಕೆಯನ್ನು ಮಾರಾಟ ಮಾಡುತ್ತದೆ. ರವಿ ಅತ್ರಿಯ, ಸಂಜೀವ್ ಮುಖಿಯಾ ಈ ಗ್ಯಾಂಗ್‌ನ ಪ್ರಮುಖರು.
ಸಿಬಿಐ ತನಿಖೆ ಆರಂಭ: ನೀಟ್ ಪ್ರಶ್ನೆ ಪತ್ರಿಕೆ ಹಗರಣದ ಕುರಿತು ಸಿಬಿಐ ವಂಚನೆ, ಕ್ರಿಮಿನಲ್ ಪಿತೂರಿ ಸೆಕ್ಷನ್‌ಗಳಡಿ ಎಫ್ಐಆರ್ ದಾಖಲು ಮಾಡಿಕೊಂಡು ತನಿಖೆ ಆರಂಭಿಸಿದೆ. ಬಿಹಾರದಲ್ಲಿ ಮೊದಲು ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ಮಾಹಿತಿ ಇದೆ. ಬಿಹಾರ ಪೊಲೀಸರು ಪ್ರಕರಣದಲ್ಲಿ 'ಸಾಲ್ವರ್ ಗ್ಯಾಂಗ್' ಕೈವಾಡ ಇರುವ ಕುರಿತು ಈಗಾಗಲೇ ಕೇಂದ್ರಕ್ಕೆ ಸಮಗ್ರ ವರದಿ ಸಲ್ಲಿಕೆ ಮಾಡಿದ್ದಾರೆ.
ಮಹಾರಾಷ್ಟ್ರ ರಾಜ್ಯಕ್ಕೆ ಸಹ ಈಗ ಜಾಲ ವಿಸ್ತರಣೆಯಾಗಿರುವ ಅನುಮಾನ ವ್ಯಕ್ತವಾಗಿದ್ದು, ಲಾತೂರ್‌ನಲ್ಲಿನ ಎಟಿಎಂ ಕೇಂದ್ರದಲ್ಲಿ ಪತ್ರಿಕೆ ಅಭ್ಯರ್ಥಿಗಳ ಕೈ ಸೇರಿತ್ತು ಎಂದು ಆರೋಪಿಸಲಾಗಿದ್ದು, ತನಿಖೆ ನಡೆಯುತ್ತಿದೆ. ಸಾಮಾಜಿಕ ಜಾಲತಾಣದ ಮೂಲಕವೇ ಪತ್ರಿಕೆ ಮಾರಾಟ ಮಾಡಿ, ಆನ್‌ಲೈನ್ ಮೂಲಕವೇ ಹಣವನ್ನು ಸಂಗ್ರಹ ಮಾಡುವುದು ಈ ಗ್ಯಾಂಗ್‌ನ ಕಾರ್ಯತಂತ್ರವಾಗಿದೆ.
ರವಿ ಅತ್ರಿಯ 2007ರಲ್ಲಿ ವೈದ್ಯಕೀಯ ಪ್ರವೇಶ ಪರೀಕ್ಷೆ ಬರೆದಿದ್ದ. ಕೋಟಾದಲ್ಲಿ ಖಾಸಗಿ ಕಾಲೇಜಿಗೆ ಸೇರಿದ್ದ ಆತ ಪರೀಕ್ಷಾ ಅಕ್ರಮ ನಡೆಸುವ ಗ್ಯಾಂಗ್ ಸಂಪರ್ಕಕ್ಕೆ ಬಂದ. ಕೋರ್ಸ್ ಪೂರ್ಣಗೊಳಿಸದೇ ಪರೀಕ್ಷೆಗಳ ಪತ್ರಿಕೆಗಳನ್ನು ಮಾರಾಟ ಮಾಡುವ ಕೆಲಸ ಆರಂಭಿಸಿದ.
'ಸಾಲ್ವರ್ ಗ್ಯಾಂಗ್' ಪ್ರಶ್ನೆ ಪತ್ರಿಕೆ ಸೋರಿಕೆ ಮಾಡುವುದು ಮಾತ್ರವಲ್ಲ. ಪರೀಕ್ಷೆ ಬರೆಯುವ ಅಭ್ಯರ್ಥಿಗಳ ಬದಲು ಬೇರೆ ಅಭ್ಯರ್ಥಿಗಳನ್ನು ಕಳಿಸುವ ಕೃತ್ಯಗಳಲ್ಲೂ ಭಾಗಿಯಾಗಿದೆ. ರವಿ ಅತ್ರಿಯನನ್ನು ಉತ್ತರ ಪ್ರದೇಶದಲ್ಲಿ ಈಗ ಪೊಲೀಸರು ಬಂಧಿಸಿದ್ದಾರೆ. ಪರೀಕ್ಷೆಯ ಪ್ರಶ್ನೆ ಪತ್ರಿಕೆ ಹಲವು ದಿನಗಳ ಹಿಂದೆ ಈ ಗ್ಯಾಂಗ್ ಕೈ ಸೇರುತ್ತಿತ್ತು. ಪ್ರಶ್ನೆ, ಸಿದ್ದ ಉತ್ತರಗಳಿರುವ ಪತ್ರಿಕೆಗಳನ್ನು ಗ್ಯಾಂಗ್ ಮಾರಾಟ ಮಾಡಿ ಹಣಗಳಿಸುತ್ತಿತ್ತು.
ಹಣ ಕೊಟ್ಟು ಪತ್ರಿಕೆ ಖರೀದಿ ಮಾಡುವ ಅಭ್ಯರ್ಥಿಗಳನ್ನು ಗುರುತಿಸಿ ಈ ಗ್ಯಾಂಗ್ ಸಂಪರ್ಕ ಮಾಡುತ್ತಿತ್ತು. ಯಾರನ್ನೂ ಖುದ್ದಾಗಿ ಭೇಟಿಯಾಗದ ಗ್ಯಾಂಗ್ ಸಾಮಾಜಿಕ ಜಾಲತಾಣಗಳನ್ನು ಬಳಕೆ ಮಾಡಿಕೊಂಡು, ಆ ಮೂಲಕವೇ ತಮ್ಮ ಕಾರ್ಯಾಚರಣೆಯನ್ನು ನಡೆಸುತ್ತಿತ್ತು.
ಈ ಗ್ಯಾಂಗ್‌ನ ಮತ್ತೊಬ್ಬ ಪ್ರಮುಖ ಸಂಜೀವ್ ಮುಖಿಯಾ. ಈತ ತನ್ನ ಪುತ್ರನೊಂದಿಗೆ ಸೇರಿಕೊಂಡು ಪ್ರಶ್ನೆ ಪತ್ರಿಕೆ ಸೋರಿಕೆ ಮಾಡುತ್ತಿದ್ದ. ನೀಟ್ ಪತ್ರಿಕೆ ಸೋರಿಕೆಯಲ್ಲಿ ಈತನ ಪಾತ್ರ ಬಹಳ ಮುಖ್ಯವಾಗಿದೆ ಎಂಬ ಆರೋಪವಿದ್ದು, ಅಪ್ಪ, ಮಗ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ವಿವಿಧ ರಾಜ್ಯಗಳಲ್ಲಿ 'ಸಾಲ್ವರ್ ಗ್ಯಾಂಗ್' ಜಾಲ ವಿಸ್ತರಣೆ ಮಾಡುವಲ್ಲಿ ಸಂಜೀವ್ ಮುಖಿಯಾ ಕಾರ್ಯಚರಣೆ ಕೈಗೊಳ್ಳುತ್ತಿದ್ದ. ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿಯಿಂದ ಹಿಡಿದು ವಿವಿಧ ಪರೀಕ್ಷೆಗಳ ಪತ್ರಿಕೆಗಳನ್ನು ಈ ಗ್ಯಾಂಗ್‌ನ ಸೋರಿಕೆ ಮಾಡಿ, ಹಣ ಮಾಡುತ್ತಿದ್ದರು.
ಕಾಂಗ್ರೆಸ್ ಪಕ್ಷ ಒಂದು ದೇಶ, ಒಂದು ಪರೀಕ್ಷೆ ಹೆಸರಿನಲ್ಲಿ ವೈದ್ಯಕೀಯ ಸೀಟುಗಳ ಪ್ರವೇಶಾತಿಗಾಗಿ ಪರಿಚಯಿಸಲಾಗಿರುವ 'ನೀಟ್' ಪರೀಕ್ಷೆ ಬಗ್ಗೆ ಮೊದಲಿನಿಂದಲೂ ಆಕ್ಷೇಪ ಎತ್ತಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುವ ರಾಜ್ಯಗಳು ಪರೀಕ್ಷೆಯನ್ನು ವಿರೋಧಿಸುತ್ತವೇ ಇವೆ. ನೀಟ್ ಪರೀಕ್ಷೆ ಬಡವರು ಮತ್ತು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್ ಹೇಳಿದ್ದಾರೆ.
ಈಗ ಲೋಕಸಭೆ ಚುನಾವಣೆ ಮುಗಿದು ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ ಬೆಳಕಿಗೆ ಬಂದಿದೆ. ಇದನ್ನು ಮುಂದಿಟ್ಟುಕೊಂಡು ಪ್ರತಿಪ್ಷಕ ಕಾಂಗ್ರೆಸ್ ಕೇಂದ್ರ ಸರ್ಕಾರದ ವಿರುದ್ಧ ಟೀಕೆಗಳನ್ನು ಮಾಡುತ್ತಿದೆ. ಅಕ್ರಮ ತಡೆಯುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸುತ್ತಿದೆ.
-
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ -
Prakash Raj: ನಾಸ್ತಿಕನಾದರೂ ತಾಯಿಯ ನಂಬಿಕೆಗೆ ಗೌರವ ಕೊಟ್ಟು; ಕ್ರೈಸ್ತ ಧರ್ಮದ ಸಂಪ್ರದಾಯ ಪಾಲನೆ: ನಟ ಪ್ರಕಾಶ್ ರಾಜ್ -
Education: CBSE 9 ಮತ್ತು 10ನೇ ತರಗತಿಯ ಹೊಸ ಪಠ್ಯಕ್ರಮ ಇಂದು ಬಿಡುಗಡೆ -
ಮುಂದಿನ 2 ರಿಂದ 3 ವಾರಗಳಲ್ಲಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ: ಟ್ರಂಪ್ ಎಚ್ಚರಿಕೆ -
ವಿದ್ಯಾರ್ಥಿಗಳ ಮೊಬೈಲ್ ಗೀಳಿಗೆ ಬ್ರೇಕ್: ಹೊಸ 'ಡಿಜಿಟಲ್ ನೀತಿ' ಪ್ರಕಟಿಸಿದ ಆರೋಗ್ಯ ಇಲಾಖೆ












Click it and Unblock the Notifications