ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದ್ಯಾರ್ಥಿಗಳಿಗೆ ಸಿಹಿಸುದ್ದಿ: ಈ ವರ್ಷ ನೀಟ್ ಇಲ್ಲ

By Madhusoodhan
|
Google Oneindia Kannada News

ನವದೆಹಲಿ, ಮೇ. 20: ಮೆಡಿಕಲ್ [ಡೆಂಟಲ್ ]ಪ್ರವೇಶಕ್ಕೆ ಸಂಬಂಧಿಸಿದ ನೀಟ್(ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ) ಪರೀಕ್ಷೆ ಕುರಿತಾಗಿ ಸುಗ್ರಿವಾಜ್ಞೆ ಹೊರಡಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದ್ದು ಈ ವರ್ಷ ನೀಟ್ ಪರೀಕ್ಷೆಗೆ ವಿನಾಯಿತಿ ನೀಡಬೇಕು ಎಂದು ಕೇಂದ್ರ ಸರ್ಕಾರ ಇಂಗಿತ ಮುಂದಿಟ್ಟಿದೆ.[ಮೇ 25ರಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ]

examination

ವೈದ್ಯಕೀಯ ವಿಭಾಗಗಕ್ಕೆ ಪ್ರವೇಶ ಪಡೆಯುವವರು ನೀಟ್ ಬರೆಯುವುದು ಕಡ್ಡಾಯ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಪರಿಣಾಮ ವಿದ್ಯಾರ್ಥಿಗಳಿಗೆ ನೀಟ್ ಮತ್ತು ಸಿಇಟಿ ಎರಡನ್ನೂ ಬರೆಯಬೇಕಾದ ಅನಿವಾರ್ಯತೆ ಎದುರಾಗಿತ್ತು.

ಕೇಂದ್ರ ಸರ್ಕಾರದ ತೀರ್ಮಾನ ಲಕ್ಷಾಂತರ ವಿದ್ಯಾರ್ಥಿಗಳಿಗೆ ರಿಲೀಫ್ ನೀಡಿದ್ದು ಮುಂದಿನ ವರ್ಷದಿಂದ ದೇಶದಾದ್ಯಂತ ಏಕರೂಪದ ಪರೀಕ್ಷಾ ಪದ್ಧತಿ ಜಾರಿಯಾಗುವುದು ಪಕ್ಕಾ ಆಗಿದೆ. [ವೈದ್ಯಕೀಯ ಪ್ರವೇಶಕ್ಕೆ ನೀಟ್ ಪರೀಕ್ಷೆ ಮಾತ್ರ]

ಕರ್ನಾಟಕ ಸಿಇಟಿ ಫಲಿತಾಂಶವನ್ನು ರಾಜ್ಯ ಸರ್ಕಾರ ಮೇ 25 ರಂದು ಪ್ರಕಟ ಮಾಡುತ್ತೇನೆ ಎಂದು ಹೇಳಿದೆ. ವಿದ್ಯಾರ್ಥಿಗಳು ಮೊದಲ ಹಂತದ ನೀಟ್ ಪರೀಕ್ಷೆಯನ್ನು ಮೇ. 1 ರಂದು ಬರೆದಿದ್ದರು. ನಿಗದಿಯಂತೆ ಜುಲೈ 24 ರಂದು ಎರಡನೇ ಹಂತದ ನೀಟ್ ನಡೆಯುವುದಿತ್ತು.

ಸುಪ್ರೀಂ ಕೋರ್ಟ್ ನೀಟ್ ನಡೆಸುವಂತೆ ಹೇಳಿದೆ ಆದರೆ ಕೇಂದ್ರ ಸರ್ಕಾರ ಇದೀಗ ಸುಗ್ರಿವಾಜ್ಞೆಗೆ ಮುಂದಾಗಿದೆ. ಸ್ಪಷ್ಟ ಚಿತ್ರಣ ಸಿಗಲು ಇನ್ನು ಒಂದೆರಡು ದಿನ ಕಾಯಬೇಕಾದದ್ದು ಅನಿವಾರ್ಯ. ಇನ್ನೊಂದೆಡೆ ನೀಟ್ ಬೇಡ ಎಂದು ಕರ್ನಾಟಕ, ಜಮ್ಮು ಕಾಶ್ಮೀರ, ತಮಿಳುನಾಡು ಮತ್ತು ಕೇರಳ ರಾಜ್ಯಗಳು ಒತ್ತಾಯ ಮಾಡುತ್ತ ಬಂದಿವೆ.

English summary
The government on Friday (May 20) cleared an ordinance to defer the implementation of NEET, the common entrance test for under-graduate medical courses in India. The ordinance, which puts on hold a Supreme Court May 9 ruling ordering the implementation of National Eligibility cum Entrance Test (NEET) from this year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X