NDTV Survey: ಭ್ರಷ್ಟಾಚಾರ ಕರ್ನಾಟಕದಲ್ಲಿ ಅತಿ ದೊಡ್ಡ ಚುನಾವಣಾ ಸಮಸ್ಯೆಯಲ್ಲವೇ?
ನವದೆಹಲಿ, ಮೇ. 01: ಮುಂದಿನ ವಾರ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ಕರ್ನಾಟಕದಲ್ಲಿ ನಿರುದ್ಯೋಗ ಸಮಸ್ಯೆಯು ಅತ್ಯಂತ ಪ್ರಮುಖ ಚುನಾವಣಾ ಸಮಸ್ಯೆಯಾಗಿ ಹೊರಹೊಮ್ಮುತ್ತಿದೆ ಎಂದು ಎನ್‌ಡಿಟಿವಿ ನಡೆಸಿದ ಸಮೀಕ್ಷೆ ಬಹಿರಂಗಪಡಿಸಿದೆ. ಲೋಕನೀತಿ - ಸೆಂಟರ್ ಫಾರ್ ದಿ ಸ್ಟಡಿ ಆಫ್ ಡೆವಲಪಿಂಗ್ ಸೊಸೈಟೀಸ್ (ಸಿಎಸ್‌ಡಿಎಸ್) ಸಹಭಾಗಿತ್ವದಲ್ಲಿ ಎನ್‌ಡಿಟಿವಿ ಜನರ ಅಭಿಪ್ರಾಯ ಸಂಗ್ರಹ ಮಾಡಿದೆ.
ಬಡತನವು ಎರಡನೆಯ ಸಮಸ್ಯೆಯಾಗಿದೆ. ಇದರ ಜೊತೆಗೆ ಅಭಿವೃದ್ಧಿಯ ಕೊರತೆ, ಬೆಲೆ ಏರಿಕೆ, ಶಿಕ್ಷಣ ಮತ್ತು ಭ್ರಷ್ಟಾಚಾರವು ಮತ ಚಲಾಯಿಸಲು ತಯಾರಾಗುತ್ತಿರು ಜನರ ಮನಸ್ಸಿನ ಮೇಲೆ ಪರಿಣಾಮ ಬೀರಿರುವ ಇತರೆ ವಿಷಯಗಳು ಎಂದಿದೆ. ಶೇಕಡಾ 28 ರಷ್ಟು ಜನರು ನಿರುದ್ಯೋಗವು ಅವರಿಗೆ ದೊಡ್ಡ ಸಮಸ್ಯೆ ಎಂದು ಹೇಳಿದರೆ, ಶೇಕಡಾ 25 ರಷ್ಟು ಜನರು ಬಡತನ ಎಂದು ಹೇಳಿದ್ದಾರೆ. ಶೇಕಡಾ ಏಳುರಷ್ಟು ಜನರು ಅಭಿವೃದ್ಧಿ ಕೊರತೆ, ಬೆಲೆ ಏರಿಕೆ ಮತ್ತು ಶಿಕ್ಷಣದ ಕೊರತೆಯನ್ನು ಸಮಸ್ಯೆ ಎಂದು ಹೇಳಿದ್ದಾರೆ.

ಕೇವಲ 6% ಜನರು ಕಾಂಗ್ರೆಸ್‌ನ "40 ಪರ್ಸೆಂಟ್ ಕಮಿಷನ್" ಆರೋಪವನ್ನು ಒಪ್ಪಿಕೊಂಡಿದ್ದಾರೆ. ಆದರೆ, ಕಳೆದ ಐದು ವರ್ಷಗಳಲ್ಲಿ (ಬಿಜೆಪಿ ಅಧಿಕಾರದಲ್ಲಿದ್ದಾಗ) ಭ್ರಷ್ಟಾಚಾರ ಹೆಚ್ಚಿದೆಯೇ ಎಂಬ ತೀಕ್ಷ್ಣವಾದ ಪ್ರಶ್ನೆಗೆ ಪ್ರತಿಕ್ರಿಯಿಸಿದವರಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ಹೌದು ಎಂದು ಉತ್ತರಿಸಿದ್ದಾರೆ. ಶೇ.51ರಷ್ಟು ಮಂದಿ ಭ್ರಷ್ಟಾಚಾರ ಹೆಚ್ಚಿದೆ ಎಂದಿದ್ದಾರೆ. ಶೇ.35ರಷ್ಟು ಮಂದಿ ಹಾಗೆಯೇ ಇದೆ ಎಂದು ಹೇಳಿದರೆ, ಶೇ.11ರಷ್ಟು ಮಂದಿ ಕಡಿಮೆಯಾಗಿದೆ ಎಂದಿದ್ದಾರೆ.
ಗಮನಾರ್ಹವಾಗಿ, ಕಳೆದ ಐದು ವರ್ಷಗಳಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ಬಿಜೆಪಿಯ ಸಾಂಪ್ರದಾಯಿಕ ಬೆಂಬಲಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಬೆಂಬಲಿಗರಲ್ಲಿ, 50 ಪ್ರತಿಶತದಷ್ಟು ಜನರು ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ಹೇಳಿದ್ದಾರೆ. 41 ಪ್ರತಿಶತ ಬಿಜೆಪಿ ಬೆಂಬಲಿಗರು ಸಹ ಭ್ರಷ್ಟಾಚಾರ ಹೆಚ್ಚಿದೆ ಎಂದು ಪ್ರತಿಕ್ರಿಯಿಸಿದ್ದಾರೆ. 73% ಜೆಡಿಎಸ್ ಬೆಂಬಲಿಗರು ಅದೇ ರೀತಿ ಹೇಳಿದ್ದಾರೆ.

*ಬೆಲೆಏರಿಕೆ ಬಗ್ಗೆ ಜನರ ಕಿಡಿ*
ಹಣದುಬ್ಬರದ ಬಗ್ಗೆ ಶೇ 67 ರಷ್ಟು ಜನರು ಬೆಲೆಗಳು ಹೆಚ್ಚಿವೆ ಎಂದು ಹೇಳಿದ್ದಾರೆ. ಶೇಕಡಾ 23 ರಷ್ಟು ಮಂದಿ ಬೆಲೆಗಳು ಹಾಗೆ ಇರುವುದಾಗಿ ಹೇಳಿದರು ಮತ್ತು ಶೇಕಡಾ 9 ರಷ್ಟು ಮಂದಿ ಬೆಲೆಗಳು ಕಡಿಮೆಯಾಗಿವೆ ಎಂದು ಹೇಳಿದ್ದಾರೆ. ಇವರಿಗೆ ಕಳೆದ ಐದು ವರ್ಷಗಳಲ್ಲಿ ತಮ್ಮ ಪ್ರದೇಶಗಳಲ್ಲಿ ವಸ್ತುಗಳ ಬೆಲೆಗಳು ಹೆಚ್ಚಾಗಿದೆಯೇ ಅಥವಾ ಕಡಿಮೆಯಾಗಿದೆಯೇ ಎಂದು ಪ್ರಶ್ನಿಸಲಾಗಿತ್ತು.
*ನಿರುದ್ಯೋಗ ಮತ್ತು ಬಡತನ*
ಯುವ ಮತದಾರರಿಗೆ ನಿರುದ್ಯೋಗ ಮತ್ತು ಗ್ರಾಮೀಣ ಕರ್ನಾಟಕದವರಿಗೆ ಬಡತನ ದೊಡ್ಡ ಸಮಸ್ಯೆಯಾಗಿದೆ ಎಂದು ಸಮೀಕ್ಷೆಯು ಕಂಡುಹಿಡಿದಿದೆ. ನಿರುದ್ಯೋಗವು ತಮ್ಮ ಏಕೈಕ ದೊಡ್ಡ ಸಮಸ್ಯೆ ಎಂದು ಹೇಳಿದ 28 ಪ್ರತಿಶತದಷ್ಟು ಜನರಲ್ಲಿ, 38% 18 ರಿಂದ 25 ವರ್ಷ ವಯಸ್ಸಿನವರು. ಬಡತನವೇ ದೊಡ್ಡ ಸಮಸ್ಯೆ ಎಂದು ಹೇಳಿದ ಶೇ.25 ಮಂದಿಯಲ್ಲಿ ಶೇ.30ರಷ್ಟು ಮಂದಿ ರಾಜ್ಯದ ಗ್ರಾಮೀಣ ಭಾಗದವರಾಗಿದ್ದರೆ, ಶೇ.19ರಷ್ಟು ಮಂದಿ ನಗರ ಪ್ರದೇಶದವರು.
ಈ ಸಮೀಕ್ಷೆಯನ್ನು ಏಪ್ರಿಲ್ 20 ಮತ್ತು 28 ರ ನಡುವೆ ನಡೆಸಲಾಗಿದೆ. ಯಾದೃಚ್ಛಿಕವಾಗಿ ಆಯ್ಕೆಮಾಡಿದ 21 ವಿಧಾನಸಭಾ ಕ್ಷೇತ್ರಗಳಲ್ಲಿ 82 ಮತಗಟ್ಟೆಗಳಲ್ಲಿ ನೋಂದಾಯಿಸಲಾದ ಒಟ್ಟು 2,143 ಮತದಾರರನ್ನು ಸಮೀಕ್ಷೆಗಾಗಿ ಸಂದರ್ಶಿಸಲಾಗಿದೆ. ಈ ಪ್ರತಿಯೊಬ್ಬ ಮತದಾರರೊಂದಿಗೆ ಸುಮಾರು 15 ರಿಂದ 20 ನಿಮಿಷಗಳ ಕಾಲ ಮಾತನಾಡಿಸಲಾಗಿದೆ.
ಪ್ರತಿ ಮತಗಟ್ಟೆಯಲ್ಲಿ, ಎಸ್‌ಆರ್‌ಎಸ್ (ವ್ಯವಸ್ಥಿತ ಯಾದೃಚ್ಛಿಕ ಮಾದರಿ) ವಿಧಾನವನ್ನು ಬಳಸಿಕೊಂಡು ಮತದಾರರ ಪಟ್ಟಿಯಿಂದ 40 ಮತದಾರರನ್ನು ಆಯ್ಕೆ ಮಾಡಲಾಗಿದೆ. ವಿಶೇಷ ತರಬೇತಿ ಪಡೆದ ಕ್ಷೇತ್ರ ತನಿಖಾಧಿಕಾರಿಗಳು, ಹೆಚ್ಚಾಗಿ ಕರ್ನಾಟಕದ ವಿವಿಧ ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿಗಳು ಮತದಾರರ ಮನೆಗಳಲ್ಲಿ ಸಂದರ್ಶನಗಳನ್ನು ನಡೆಸಿದ್ದಾರೆ.
ಮಾದರಿಯು ತುಲನಾತ್ಮಕವಾಗಿ ಚಿಕ್ಕದಾಗಿದ್ದರೂ, ಸಂದರ್ಶಿಸಿದ ಒಟ್ಟು ಮತದಾರರ ಸಂಖ್ಯೆಯು ಕರ್ನಾಟಕದ ಮತದಾರರ ಸಾಮಾಜಿಕ ವಾಸ್ತವತೆಯನ್ನು ಪ್ರತಿನಿಧಿಸುತ್ತದೆ. ಅಂದರೆ ಮಾದರಿಯು ಸಾಮಾಜಿಕ ಸಂಯೋಜನೆಗೆ ಸಂಬಂಧಿಸಿದಂತೆ ಕರ್ನಾಟಕದ ಮತದಾರರನ್ನು ನಿಜವಾಗಿಯೂ ಪ್ರತಿನಿಧಿಸುತ್ತದೆ. ಕರ್ನಾಟಕದಲ್ಲಿ ಮೇ 10 ರಂದು ಮತದಾನ ನಡೆಯಲಿದ್ದು, ಮೇ 13 ರಂದು ಫಲಿತಾಂಶ ಪ್ರಕಟವಾಗಲಿದೆ.
-
RCB vs CSK: ಆರ್ಸಿಬಿ ಕಡೆಯಿಂದ ಅಭಿಮಾನಿಗಳಿಗೆ ವಿಶೇಷ ಸಂದೇಶ: ಇಂದಿನ ಪಂದ್ಯಕ್ಕೂ ಮುನ್ನ ಇದು ಗಮನದಲ್ಲಿರಲಿ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್












Click it and Unblock the Notifications