ಮಳೆಯಿಂದ ಜರ್ಝರಿತ ತಮಿಳುನಾಡಿನ ಇತ್ತೀಚಿನ ವರದಿಗಳು
ನವದೆಹಲಿ, ಡಿ.02: ಮಳೆಯಿಂದ ನಲುಗಿರುವ ತಮಿಳುನಾಡಿಗೆ ಸಕಲ ನೆರವು ನೀಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ನೆರವು ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರು ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರ ಜೊತೆ ದೀರ್ಘ ಸಮಾಲೋಚನೆ ನಡೆಸಿದ್ದಾರೆ.
ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಮುಖ್ತಾರ್ ಅಬ್ಬಾಸ್ ನಖ್ವಿ, ವೆಂಕಯ್ಯ ನಾಯ್ಡು, ಕಿರಣ್ ರಿಜಿಜು ಹಾಗೂ ಮನೋಹರ್ ಪರಿಕ್ಕಾರ್ ಅವರು ಮಾತನಾಡಿ ತಮಿಳುನಾಡಿಗೆ ಅಗತ್ಯವಾದ ನೆರವು ಮತ್ತು ಪರಿಹಾರ, ಪರಿಕರಗಳನ್ನು ನೀಡುವುದಾಗಿ ಬುಧವಾರ ಮಧ್ಯಾಹ್ನ ನವದೆಹಲಿಯಲ್ಲಿ ತಿಳಿಸಿದ್ದಾರೆ. [ಗ್ಯಾಲರಿ: ಹಚ್ಚಿ ಹೊಡೆಯುತ್ತಿರುವ ಮಳೆಗೆ ತತ್ತರಿಸಿದ ಚೆನ್ನೈ]

ಈ ಮಧ್ಯೆ ದೆಹಲಿಯ ಹವಾಮಾನ ಇಲಾಖೆಯಿಂದ ಬಂದಿರುವ ಮಾಹಿತಿ ಪ್ರಕಾರ ಮುಂದಿನ 72 ಗಂಟೆಗಳ ಅವಧಿಯಲ್ಲಿ ಭಾರಿ ಮಳೆ ಸುರಿಯಲಿದೆ. ಮುಖ್ಯವಾಗಿ ಚೆನ್ನೈ, ತಿರುವಳ್ಳುರ್, ಕಾಂಚೀಪುರಂ ಮತ್ತು ನೆರೆಯ ಪುದುಚೇರಿಯಲ್ಲಿ ಮಳೆ ಹಾವಳಿ ವಿಪರೀತ ಇರುತ್ತದೆ.[ಜಲ ಪ್ರಳಯ: ನೀರಿನಲ್ಲಿ ಸಿಲುಕಿ ದ್ವೀಪವಾದ ಚೆನ್ನೈ]
People and Animals, rescue operation in Rain battered Chennai @Poetbala https://t.co/hlOeGhn3BK @Oneindia pic.twitter.com/GQ2bLThJD7
— Shama Sundara S K (@shamsundar_sk) December 2, 2015 ಮೈದಾನಗಳು ಕೆರೆಯಾಗಿ, ರಸ್ತೆಗಳು ಕಾಲುವೆಗಳಾಗಿ, ಕುಡಿಯುವ ನೀರಿಗೆ ತತ್ವಾರವಾಗಿ ಸಂಚಾರ ವಿಪರೀತ ಅಸ್ತವ್ಯಸ್ತವಾಗಿದೆ. ಹಲವಾರು ರೈಲುಗಳು, ವಿಮಾನ ಸಂಚಾರ ರದ್ದಾಗಿದೆ. ಶಾಲಾ, ಕಾಲೇಜುಗಳು, ಕಚೇರಿಗಳು ಅನಿರ್ಧಿಷ್ಟಕಾಲ ಮುಚ್ಚಿವೆ.
Spoke to Jayalalithaa ji on the flood situation in parts of Tamil Nadu. Assured all possible support & cooperation in this unfortunate hour.
— Narendra Modi (@narendramodi) December 1, 2015 ತಮಿಳುನಾಡಲ್ಲಿ ಪರಿಸ್ಥಿತಿ ವಿಪರೀತ ಹದಗೆಟ್ಟಿರುವುದರಿಂದ ರಾಜ್ಯದಲ್ಲಿ ಪ್ರಯಾಣ ಕೈಗೊಳ್ಳುವುದನ್ನು ತಪ್ಪಿಸುವುದು ಕ್ಷೇಮ ಎನ್ನುವುದು ನಮ್ಮ ಸಲಹೆ.
ಪ್ರಮುಖ ಐಟಿ ಕಂಪೆನಿಗಳಿರುವ ಚೆನ್ನೈನ ಮಧ್ಯ ಕೈಲಾಷ್ ಪ್ರದೇಶದಲ್ಲಿ ಹಲವಾರು ರಸ್ತೆಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿವೆ. ಐಟಿ ಬಿಟಿ ಕಂಪನಿಗಳು ಹಲವು ಖಾಸಗಿ ಕಂಪನಿಗಳು ಬಂದ್ ಆಗಿವೆ.

ಉತ್ತರ ಚೆನ್ನೈ, ಮಂಡವೇಲಿ, ಪಿ.ಎಸ್.ಶಿವಸ್ವಾಮಿ ಸಲೈ, ಮೈಲಾಪುರ, ತಾರಮಣಿ ಲಿಂಕ್ ರೋಡ್, ರಾಜೀವ್ ಗಾಂಧಿ ಸಲೈ ಸೇರಿದಂತೆ ನಗರದ ಇತರ ಹಲವಾರು ಕಡೆಗಳಲ್ಲೂ ರಸ್ತೆಗಳು ಹಾನಿಗೀಡಾಗಿವೆ.

ಕುಡಿಯುವ ನೀರಿಗೆ, ಹಾಲಿಗೆ, ಔಷಧಿಗೆ, ಟೆಲಿಫೋನಿಗೆ, ಡೇಟಾ ಕನೆಕ್ಟಿವಿಗೆ ತತ್ವಾರ ಬಂದಿರುವ ತಮಿಳುನಾಡಿನ ಜನಜೀವನದ ನೋವಿಗೆ ಜಗತ್ತಿನಾದ್ಯಂತ ಜನತೆ ಕಣ್ಣೀರು ಮಿಡಿಯುತ್ತಿದ್ದಾರೆ. ಕೈಲಾದ ಸಹಾಯವನ್ನು ಮಾಡುತ್ತಿದ್ದಾರೆ. ಅಯ್ಯಾ ಕಡವಳೆ(ದೇವರೇ), ಸಾಕು ನಿನ್ನ ಆರ್ಭಟ. ಬೇಗ ಕೀಳು ಇಲ್ಲಿಂದ ಓಟ.












Click it and Unblock the Notifications