ಶೀಘ್ರದಲ್ಲೇ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ಸಿಗಲಿದೆ

Posted By:
Subscribe to Oneindia Kannada

ನವದೆಹಲಿ, ಫೆ.19: ಕೇಂದ್ರ ಸರ್ಕಾರಿ ನೌಕರರಿಗೆ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಸದ್ಯದಲ್ಲೇ ಸಿಹಿ ಸುದ್ದಿ ನೀಡುವ ಸಾಧ್ಯತೆ ಕಂಡುಬಂದಿದೆ. ತುಟ್ಟಿಭತ್ಯೆ(ಡಿಎ) ಹೆಚ್ಚಳವನ್ನು ಶೇ 119 ರಿಂದ ಶೇ 125ಕ್ಕೆ ಏರಿಸಲಾಗುವುದು ಎಂಬ ಸುದ್ದಿ ಬಂದಿದೆ.

ಕೈಗಾರಿಕಾ ಕಾರ್ಮಿಕರಿಗೆ ಸಂಬಂಧಿಸಿದ ಅಖಿಲ ಭಾರತ ಗ್ರಾಹಕ ದರ ಸೂಚ್ಯಂಕದ (CPI-IW data) ಆಧಾರದಲ್ಲಿ ತುಟ್ಟಿ ಭತ್ಯೆಯನ್ನು ಹೆಚ್ಚಳ ಮಾಡಲಾಗುತ್ತದೆ. [ಪಿಎಫ್ ಹೊಸ ನಿಮಯ : ಟೇಕ್ ಹೋಮ್ ಸಂಬಳಕ್ಕೆ ಕುತ್ತು!]

ಜನವರಿ-ಡಿಸೆಂಬರ್ 2015 ರತನಕ ಸೂಚ್ಯಂಕ ಶೇ6.73ರಷ್ಟಿತ್ತು. ಹೀಗಾಗಿ ಶೇ 6 ಅಂಕಗಳಿಂದ 125% ತನಕ ಏರಿಕೆ ನಿರೀಕ್ಷಿಸಬಹುದು ಎಂದು ಕೇಂದ್ರ ಸರ್ಕಾರಿ ನೌಕರರು ಹಾಗೂ ಉದ್ಯೋಗಿಗಳ ಒಕ್ಕೂಟದ ಅಧ್ಯಕ್ಷ ಕೆಕೆಎನ್ ಕುಟ್ಟಿ ಹೇಳಿದ್ದಾರೆ.

NDA government likely to hike DA to 125% from existing 119%

ಆದರೆ, ಬೆಲೆ ಏರಿಕೆ ಹೆಚ್ಚುತ್ತಲೆ ಇದೆ. ಹಣದುಬ್ಬರ ದರ ಶೇ 220-240ರಷ್ಟಿದೆ ಆದರೆ, ನಮಗೆ ಶೇ125ರಷ್ಟು ಕೈಗುಟುಕಿದೆ ಎಂದು ಕುಟ್ಟಿ ಅವರು ಡಿಎ ಹೆಚ್ಚಳದ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ್ದಾರೆ. [ರಾಜ್ಯ ಸರ್ಕಾರಿ ನೌಕರರಿಗೆ ಡಿಎ ಹೆಚ್ಚಳ ಯಾವಾಗ ಆಗಿತ್ತು?]

ಪರಿಷ್ಕೃತ dearness allowance(ಡಿಎ) ದರಗಳು ಜನವರಿ 01, 2016ರಿಂದ ಜಾರಿಗೆ ಬರಲಿದ್ದು 48 ಲಕ್ಷ ಉದ್ಯೋಗಿಗಳು ಹಾಗೂ 55 ಲಕ್ಷ ಪಿಂಚಣಿದಾರರಿಗೆ ಉಪಯೋಗವಾಗಲಿದೆ.

ಕಳೆದ ಸೆಪ್ಟೆಂಬರ್ 2015ರಲ್ಲಿ ಡಿಎ ದರವನ್ನು ಶೇ 113ರಿಂದ ಶೇ 119ಕ್ಕೆ (ಜುಲೈ 1, 2015ರಿಂದ ಅನ್ವಯವಾಗುವಂತೆ) ಹೆಚ್ಚಿಸಲಾಗಿತ್ತು. [ಗೌರಿ ಹಬ್ಬಕ್ಕೂ ಮುನ್ನ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ]

ತುಟ್ಟಿ ಭತ್ಯೆ (dearness allowance): ತುಟ್ಟಿ ಭತ್ಯೆಯನ್ನು 12 ತಿಂಗಳಿನ ಗ್ರಾಹಕ ಬೆಲೆ ಸೂಚ್ಯಂಕದ ಆಧಾರದ ಮೇರೆಗೆ ನಿಗದಿಪಡಿಸಲಾಗುತ್ತದೆ. ಭಾರತದಲ್ಲಿ, ತುಟ್ಟಿಭತ್ಯೆಯು ಒಬ್ಬ ವ್ಯಕ್ತಿಯ ಸಂಬಳದ ಭಾಗವಾಗಿದೆ ತುಟ್ಟಿಭತ್ಯೆಯನ್ನು ಮೂಲ ಸಂಬಳದ ಶೇಕಡಾವಾರು ಲೆಕ್ಕವಾಗಿ ಲೆಕ್ಕಮಾಡಲಾಗುತ್ತದೆ. ನಂತರ, ಈ ಮೊತ್ತವನ್ನು ಮನೆ ಬಾಡಿಗೆ ಭತ್ಯೆಯ ಜೊತೆಗೆ ಮೂಲ ಸಂಬಳಕ್ಕೆ ಸೇರಿಸಿ ಒಟ್ಟು ಸಂಬಳವನ್ನು ಪಡೆಯಲಾಗುತ್ತದೆ. ದರಗಳು ಗ್ರಾಮೀಣ/ನಗರ ಪ್ರದೇಶಗಳ ಪ್ರಕಾರ ಬದಲಾಗುತ್ತವೆ.(ಒನ್ ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Narendra modi led NDA government is likely to hike dearness allowance (DA) to 125 per cent from existing 119 per cent, which would benefit its over 10 million employees and pensioners.
Please Wait while comments are loading...