Vehicle Sales: ನವರಾತ್ರಿ ವಾಹನಗಳ ಮಾರಾಟದಲ್ಲಿ ಹೊಸ ದಾಖಲೆ: ಈ ವಾಹನಗಳಿಗೆ ಮಿಡಲ್‌ಕ್ಲಾಸ್‌ನಿಂದ ಭರ್ಜರಿ ಡಿಮ್ಯಾಂಡ್!

Vehicle Sales: ದಸರಾ; ನವರಾತ್ರಿ ಸಮಯದಲ್ಲಿ ಭರ್ಜರಿ ವಾಹನಗಳ ಮಾರಾಟವಾಗಿದೆ. 2026ರ ನವರಾತ್ರಿಯ 10 ದಿನಗಳಲ್ಲಿ ಕರ್ನಾಟಕವೂ ಸೇರಿದಂತೆ ಭಾರತದಾದ್ಯಂತ ಬರೋಬ್ಬರಿ 11.23 ಲಕ್ಷಕ್ಕೂ ಹೆಚ್ಚು ವಾಹನಗಳ ಮಾರಾಟವಾಗಿದ್ದು ಹೊಸ ದಾಖಲೆ ಸೃಷ್ಟಿಯಾಗಿದೆ. ಇದರಲ್ಲಿ ದ್ವಿಚಕ್ರ ವಾಹನಗಳು ಮುನ್ನಡೆ ಸಾಧಿಸಿವೆ ಎಂದು ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್‌ಗಳ ಒಕ್ಕೂಟ (FADA) ಹೇಳಿದೆ. ಹಣದುಬ್ಬರ ಹಾಗೂ ಮಾರುಕಟ್ಟೆಯಲ್ಲಿ ಏರುಪೇರಿನ ನಡುವೆಯೂ ಸಹ ಬೈಕ್ ಸೇರಿದಂತೆ ವಿವಿಧ ವಾಹನಗಳು ಭರ್ಜರಿ ಸೇಲ್ ಆಗಿವೆ.

2026ರ ನವರಾತ್ರಿಯ 10 ದಿನಗಳಲ್ಲಿ ಭಾರತ 11.23 ಲಕ್ಷ ವಾಹನ ಚಿಲ್ಲರೆ ನೋಂದಣಿಗಳನ್ನು ದಾಖಲಿಸಿದೆ ಎಂದು ಫೆಡರೇಶನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ಸ್ (FADA) ಮಾಹಿತಿ ನೀಡಿದೆ. ಹಬ್ಬದ ಅವಧಿಯಲ್ಲಿ 8.34 ಲಕ್ಷ ಬೈಕ್‌ಗಳು ನೋಂದಣಿಯಾಗಿದ್ದು, ವಾಹನ ನೋಂದಣಿಯಲ್ಲಿ ದ್ವಿಚಕ್ರ ವಾಹನಗಳು ಅತಿ ಹೆಚ್ಚು ಪಾಲು ಹೊಂದಿವೆ.

Navratri 2026 Vehicle Sales Soar to Record High Two-Wheelers Lead the Demand

2025ರ ನವರಾತ್ರಿಗೆ ಹೋಲಿಸಿದರೆ ಒಟ್ಟಾರೆ ವಾಹನ ನೋಂದಣಿಗಳು 6.52% ರಷ್ಟು ಕುಸಿದಿವೆ, 11 ದಿನಗಳಲ್ಲಿ 12.01 ಲಕ್ಷ ವಾಹನಗಳು ನೋಂದಾಯಿಸಲ್ಪಟ್ಟಿವೆ.ಆದಾಗ್ಯೂ, 2024 ರ ನವರಾತ್ರಿಗೆ ಹೋಲಿಸಿದರೆ ನೋಂದಣಿಗಳು 26.76% ಹೆಚ್ಚಾಗಿದೆ. ಕಾರ್, ಜೀಪ್ ಹಾಗೂ ವ್ಯಾನ್‌ಗಳ ವಾಹನ ನೋಂದಣಿಗಳು ವರ್ಷದಿಂದ ವರ್ಷಕ್ಕೆ 21.91% ಕಡಿಮೆಯಾಗಿ 1.83 ಲಕ್ಷ ಯೂನಿಟ್‌ಗಳಾಗಿವೆ. ವಾಣಿಜ್ಯ ವಾಹನ ನೋಂದಣಿಗಳು 1.12% ಹೆಚ್ಚಾಗಿ 35,618 ಯೂನಿಟ್‌ಗಳಿಗೆ ತಲುಪಿವೆ.

ಎಲೆಕ್ಟ್ರಿಕ್ ವಾಹನಗಳ ಚಿಲ್ಲರೆ ನೋಂದಣಿಗಳಲ್ಲಿ FADA ಮಹತ್ವದ ಬೆಳವಣಿಗೆ ಆಗಿದೆ. ಮುಂದುವರಿದು ಒಟ್ಟು EV ನೋಂದಣಿಗಳು ವರ್ಷದಿಂದ ವರ್ಷಕ್ಕೆ 26.78% ರಷ್ಟು ಏರಿಕೆಯಾಗಿ 1,17,437 ಯೂನಿಟ್‌ಗಳಿಗೆ ತಲುಪಿದೆ. ಇದು 2026ರ ನವರಾತ್ರಿಯ ಸಮಯದಲ್ಲಿ ಒಟ್ಟು ವಾಹನ ಚಿಲ್ಲರೆ ಮಾರಾಟದ ಸರಿಸುಮಾರು 10.5% ರಷ್ಟಿದೆ.

ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್‌ಗಳ ಒಕ್ಕೂಟ (FADA) ನವರಾತ್ರಿ 2026ರ ಅವಧಿಯ ವಾಹನ ಮಾರಾಟದ ತಾತ್ಕಾಲಿಕ ಅಂಕಿ - ಅಂಶಗಳನ್ನು ಬಿಡುಗಡೆ ಮಾಡಿದೆ. ನವರಾತ್ರಿ 2026ರ ವಾಹನ ಮಾರಾಟದ ಕುರಿತು ಎಫ್‌ಎಡಿಎ ಅಧ್ಯಕ್ಷ ಸಾಯಿ ಗಿರಿಧರ್ ಅವರು ಮಾತನಾಡಿ, ನವರಾತ್ರಿ 2026ರ ವಾಹನ ಮಾರಾಟದ ಅಂಕಿ - ಅಂಶಗಳು ಉತ್ತಮ ಬೆಳವಣಿಗೆ ಆಗಿದೆ.

ಕಳೆದ ಹತ್ತು ದಿನಗಳಲ್ಲಿ ಸುಮಾರು 11.23 ಲಕ್ಷ ವಾಹನಗಳು ಮಾರಾಟವಾಗಿವೆ. ನವರಾತ್ರಿ 2024ಕ್ಕೆ ಹೋಲಿಸಿದರೆ ವಾಹನ ಮಾರಾಟದಲ್ಲಿ ಶೇ.27ರಷ್ಟು ಏರಿಕೆಯಾಗಿದೆ. ಈ ಹಿಂದಿನ ಹೋಲಿಕೆಗೆ ಸೂಕ್ತವಾದ ಹಬ್ಬದ ಅವಧಿ ನವರಾತ್ರಿ 2024 ಆಗಿತ್ತು. ಪ್ರಯಾಣಿಕರ ವಾಹನಗಳ ಮಾರಾಟದಲ್ಲಿ ಶೇ.10ಕ್ಕಿಂತ ಹೆಚ್ಚು ಮತ್ತು ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಶೇ.32ಕ್ಕಿಂತ ಹೆಚ್ಚು ಬೆಳವಣಿಗೆ ಕಂಡುಬಂದಿದೆ.

ನವರಾತ್ರಿ 2025ಕ್ಕೆ ಹೋಲಿಸಿದರೆ ಈ ಬಾರಿ ವಾಹನ ಮಾರಾಟದಲ್ಲಿ ಶೇ.6.52ರಷ್ಟು ಇಳಿಕೆಯಾಗಿದೆ. ಆದರೆ, ಇದನ್ನು ನಿಜವಾದ ಕುಸಿತವೆಂದು ಪರಿಗಣಿಸಲು ಸಾಧ್ಯವಿಲ್ಲ. ಕಳೆದ ವರ್ಷ ನವರಾತ್ರಿ 10 ದಿನಗಳ ಬದಲಿಗೆ 11 ದಿನಗಳ ಕಾಲ ನಡೆದಿತ್ತು. ಅಲ್ಲದೆ, ಜಿಎಸ್‌ಟಿ 2.0 ಜಾರಿಯೂ ಅದೇ ಸಮಯದಲ್ಲಿ ನಡೆದಿದ್ದರಿಂದ ವಾಹನಗಳ ಖರೀದಿ ಹೆಚ್ಚಾಗಿತ್ತು. ಹೀಗಾಗಿ, ಕಳೆದ ವರ್ಷದ ಮಾರಾಟದ ಅಂಕಿಅಂಶಗಳು ಸಾಮಾನ್ಯಕ್ಕಿಂತ ಹೆಚ್ಚಾಗಿದ್ದವು.

ಎಲೆಕ್ಟ್ರಾನಿಕ್ ವಾಹನಗಳ ಭರ್ಜರಿ ಮಾರಾಟ

ಇನ್ನು ದೇಶದಲ್ಲಿ ಎಲೆಕ್ಟ್ರಾನಿಕ್ ವಾಹನಗಳು ಭರ್ಜರಿ ಮಾರಾಟವಾಗಿದೆ. ಈ ಬಾರಿ ಎಲೆಕ್ಟ್ರಾನಿಕ್ ವಾಹನಗಳ ಮಾರಾಟದಲ್ಲಿ ಗಮನಾರ್ಹ ಬೆಳವಣಿಗೆ ಕಂಡುಬಂದಿದೆ. ಎಲೆಕ್ಟ್ರಾನಿಕ್ ವಾಹನಗಳ ಮಾರಾಟ ಶೇ.26.78ರಷ್ಟು ಹೆಚ್ಚಾಗಿದೆ. ಹಬ್ಬದ ಅವಧಿಯ ಒಟ್ಟು ವಾಹನ ಮಾರಾಟದಲ್ಲಿ ಎಲೆಕ್ಟ್ರಾನಿಕ್ ವಾಹನಗಳ ಪಾಲು ಶೇ.10.5ರಷ್ಟಿದೆ. ಕಳೆದ ವರ್ಷ ಇದು ಸುಮಾರು ಶೇ.7.7ರಷ್ಟಿತ್ತು. ಇದರಿಂದ ಭಾರತದಲ್ಲಿ ಎಲೆಕ್ಟ್ರಾನಿಕ್ ವಾಹನಗಳ ಬಳಕೆ ಹೆಚ್ಚುತ್ತಿರುವುದು ಸ್ಪಷ್ಟವಾಗಿದೆ.

ಧನ್ತೇರಸ್‌ನಿಂದ ದೀಪಾವಳಿವರೆಗಿನ ಹಬ್ಬದ ಖರೀದಿಯ ಅವಧಿ ಆರಂಭವಾಗುತ್ತಿರುವುದರಿಂದ ವಾಹನ ಮಾರಾಟದ ಬಗ್ಗೆ ನಾವು ಆಶಾವಾದ ಹೊಂದಿದ್ದೇವೆ. ಜನರ ಖರೀದಿ ಸಾಮರ್ಥ್ಯ ಉತ್ತಮವಾಗಿರುವುದು, ಹೊಸ ವಾಹನಗಳನ್ನು ಖರೀದಿಸುವ ಆಸಕ್ತಿ ಹೆಚ್ಚುತ್ತಿರುವುದು ಮತ್ತು ದೇಶದ ಆರ್ಥಿಕ ಬೆಳವಣಿಗೆ ವಾಹನ ಮಾರುಕಟ್ಟೆಯ ಮೇಲೂ ಸಕಾರಾತ್ಮಕ ಪರಿಣಾಮ ಬೀರುತ್ತಿವೆ ಎಂದು ಎಫ್‌ಎಡಿಎ ಅಧ್ಯಕ್ಷ ಸಾಯಿ ಗಿರಿಧರ್ ಅವರು ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+