ನವಿಕಾ ಸಾಗರ್ ಪರಿಕ್ರಮಕ್ಕೆ ಮೋದಿ ಆಪ್ ಬಳಸಿ ಶುಭಹಾರೈಸಿ

Posted By:
Subscribe to Oneindia Kannada

ನವದೆಹಲಿ, ಸೆ. 11: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ತರಿಣಿ ಐ.ಎನ್.ಎಸ್.ವಿ.ಯಲ್ಲಿ ಜಗತ್ತು ಸುತ್ತಲು ಪಯಣ ಆರಂಭಿಸಿರುವ ನಾವಿಕ ಸಾಗರ ಪರಿಕ್ರಮದ ಆರು ಮಹಿಳಾ ಅಧಿಕಾರಿಗಳಿಗೆ ಶುಭ ಕೋರಿದ್ದಾರೆ.

ನರೇಂದ್ರ ಮೋದಿ ಆಪ್ ಮೂಲಕ ಪ್ರತಿಯೊಬ್ಬರೂ ನಾವಿಕ ಸಾಗರ ಪರಿಕ್ರಮದ ತಂಡಕ್ಕೆ ಶುಭಾಶಯಗಳನ್ನು ಕೋರಲು ಮತ್ತು ಪ್ರೇರಣೆಯ ಪದಗಳನ್ನು ಹಂಚಿಕೊಳ್ಳಲು ಆಗ್ರಹಿಸಿದ್ದಾರೆ.

PM wishes the women officers Navika Sagar Parikrama, urges people to share good wishes on the NM App

"ಇಂದು ವಿಶೇಷವಾದ ದಿನ! ನೌಕಾಪಡೆಯ ಆರು ಮಹಿಳಾ ಅಧಿಕಾರಿಗಳು ಐ.ಎಸ್.ಎನ್.ವಿ. ತರಿಣಿಯಲ್ಲಿ ಜಗತ್ತನ್ನು ಸುತ್ತಲು ತಮ್ಮ ಪಯಣ ಆರಂಭಿಸುತ್ತಿದ್ದಾರೆ.

ನಾವಿಕ ಸಾಗರ ಪರಿಕ್ರಮದ ಎಲ್ಲ ಮಹಿಳೆಯರಿಗೆ ಅವರ ಗಮನಾರ್ಹ ಪ್ರಯತ್ನಕ್ಕೆ ಶುಭಕೋರಲು ಇಡೀ ದೇಶವೇ ಒಗ್ಗೂಡಬೇಕು. ನಾವಿಕ ಸಾಗರ ಪರಿಕ್ರಮದ ತಂಡಕ್ಕೆ ನಿಮ್ಮ ಶುಭ ಹಾರೈಕೆಗಳನ್ನು ಎನ್.ಎಂ. ಆಪ್ ಮೂಲಕ ಹಂಚಿಕೊಳ್ಳಿ", ಎಂದು ಪ್ರಧಾನಿ ತಿಳಿಸಿದ್ದಾರೆ.

ಭಾರತದ ಸಂಪೂರ್ಣ ಮಹಿಳಾ ತಂಡ ವಿಶ್ವ ಪರಿಕ್ರಮ ಕೈಗೊಳ್ಳುತ್ತಿರುವುದು ಇದೇ ಪ್ರಥಮವಾಗಿದೆ. ಅವರು ಭಾನುವಾರಇಂದು ಗೋವಾದಿಂದ ತಮ್ಮ ಪಯಣ ಆರಂಭಿಸುತ್ತಿದ್ದು, ಜಗತ್ಪರ್ಯಟನೆಯ ನಂತರ 2018ರ ಮಾರ್ಚ್ ನಲ್ಲಿ ಗೋವಾಗೆ ಮರಳಲಿದ್ದಾರೆ. ಈ ಪಯಣಕ್ಕೆ ನಾವಿಕ ಸಾಗರ ಪರಿಕ್ರಮ ಎಂದು ಹೆಸರಿಸಲಾಗಿದೆ. ಈ ಪರಿಕ್ರಮವು ಐದು ಚರಣಗಳಲ್ಲಿ ನಡೆಯಲಿದ್ದು, ಫ್ರೆಮಾಂಟಲ್ (ಆಸ್ಟ್ರೇಲಿಯಾ), ಲಿಟ್ಟೆಲ್ಟನ್ (ನ್ಯೂಜಿಲೆಂಡ್), ಪೋರ್ಟ್ ಸ್ಟಾನ್ಲಿ (ಫಾಕ್ಲೆಂಡ್ಸ್) ಮತ್ತು ಕೇಪ್ ಟೌನ್ (ದಕ್ಷಿಣ ಆಫ್ರಿಕಾ) ನಾಲ್ಕು ಬಂದರುಗಳಲ್ಲಿ ನಿಲುಗಡೆಯಿರುತ್ತದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
PM Narendra Modi, has conveyed his best wishes to the 6 women officers of the Navika Sagar Parikrama, who will begin their journey of circumnavigating the globe on board INSV Tarini.PM has also urged everyone to share their good wishes and words of encouragement for the team of Navika Sagar Parikrama, on the Narendra Modi App.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ