'ಬರ ಪರಿಸ್ಥಿತಿಯನ್ನು ರಾಷ್ಟ್ರೀಯ ವಿಪತ್ತು ಎಂದು ಪರಿಗಣಿಸಿ'

Posted By:
Subscribe to Oneindia Kannada

ನವದೆಹಲಿ, ಏಪ್ರಿಲ್ 28 : 'ಬರ ಪರಿಸ್ಥಿತಿ ರಾಷ್ಟ್ರೀಯ ವಿಪತ್ತಾಗಿದೆ. ಕೋಟ್ಯಾಂತರ ಜನರು ಪ್ರತಿ ವರ್ಷ ಬರದಿಂದ ಸಂಕಷ್ಟಕ್ಕೆ ಸಿಲುಕುವುದನ್ನು ತಡೆಯಲು ರಾಷ್ಟ್ರೀಯ ಜಲ ನೀತಿ ರೂಪಿಸುವ ಅಗತ್ಯವಿದೆ' ಎಂದು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಹೇಳಿದರು.

ಬುಧವಾರ ರಾಜ್ಯಸಭೆಯಲ್ಲಿ ದೇಶದಲ್ಲಿನ ಬರ ಪರಿಸ್ಥಿತಿ ಕುರಿತು ನಡೆದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 'ಬರ ರಾಷ್ಟ್ರೀಯ ವಿಪತ್ತಾಗಿದೆ, ಇದನ್ನು ಪರಿಹರಿಸಲು ತುರ್ತು ಕ್ರಮಗಳ ಅಗತ್ಯವಿದೆ ಮತ್ತು ಬರ ಪರಿಸ್ಥಿತಿ ತಪ್ಪಿಸಲು ದೂರದೃಷ್ಟಿಯಿಂದ ರಾಷ್ಟ್ರೀಯ ಜಲ ನೀತಿ ರೂಪಿಸಬೇಕಾಗಿದೆ' ಎಂದರು. [ಕುಡಿಯುವ ನೀರಿನ ನಿರೀಕ್ಷೆಯಲ್ಲಿ ಖಾಲಿ ಬಿಂದಿಗೆ ಸಾಲು]

rajeev chandrasekhar

'ಬೇಸಿಗೆ, ಬರ, ಮುಂಗಾರು, ಚಳಿ ದೇಶದ ಸಾಮಾನ್ಯ ವಿದ್ಯಮಾನಗಳಾಗಿವೆ. ಬರ ಬಂದಾಗ ಮೂಕ ಪ್ರೇಕ್ಷಕರಾಗಬಾರದು. ಕೋಟ್ಯಾಂತರ ಜನರು ಬರದಿಂದ ಸಂಕಷ್ಟಕ್ಕೆ ಸಿಲುಕುತ್ತಾರೆ. ಬರದ ವಿಚಾರದಲ್ಲಿ ರಾಜಕೀಯ ಮಾಡಬಾರದು' ಎಂದು ಅವರು ಹೇಳಿದರು. ['ಜೂನ್ 15ರ ತನಕ ಬರ ಪರಿಹಾರ ಕಾಮಗಾರಿ ನಡೆಸಿ']


ರಾಜೀವ್ ಚಂದ್ರಶೇಖರ್ ಹೇಳಿದ್ದೇನು?

* ದೇಶಾದ್ಯಂತ ತೀವ್ರವಾದ ಬರ ಪರಿಸ್ಥಿತಿ ಇದೆ. ಕೇಂದ್ರ ಸರ್ಕಾರ ಇದನ್ನು ರಾಷ್ಟ್ರೀಯ ವಿಪತ್ತು ಎಂದು ಪರಿಗಣಿಸಬೇಕು. ಬರ ಪರಿಹಾರಕ್ಕೆ ತುರ್ತು ಕ್ರಮಗಳನ್ನು ಕೈಗೊಳ್ಳಲು ಅನುಕೂಲವಾಗುವಂತೆ ವಿಶೇಷ ಟಾಸ್ಕ್‌ಪೋರ್ಸ್ ರಚನೆ ಮಾಡಬೇಕು. ಇದು ರಾಜ್ಯ ಸರ್ಕಾರದ ಸಹಕಾರದೊಂದಿಗೆ ಕೆಲಸ ಮಾಡಬೇಕು.

* ಸರ್ಕಾರ ರಾಷ್ಟ್ರೀಯ ಜಲ ನೀತಿ ರೂಪಿಸಲು ಮುಂದಾಗಬೇಕು. ಆಧುನಿಕ ಸೌಲಭ್ಯಗಳನ್ನು ಒಳಗೊಂಡು ತಯಾರಿಸುವ ನೀತಿ ಭವಿಷ್ಯದಲ್ಲಿ ಸಹಾಯಕವಾಗುವಂತಿರಬೇಕು. [ಸಚಿವರ ಲೆಕ್ಕದಲ್ಲಿ ಬರಗಾಲ ಅಂದ್ರೆ ಯಾವುದು?]

* ಗ್ರಾಮೀಣಾಭಿವೃದ್ಧಿಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡಬೇಕು. ರಾಷ್ಟ್ರೀಯ ಜಲ ನೀತಿ ಹವಾಮಾನ ವೈಪರಿತ್ಯದ ಬಗ್ಗೆ ಹೆಚ್ಚು ಗಮನಹರಿಸಬೇಕು. ಆಧುನಿಕ ತಂತ್ರಜ್ಞಾನ ಉಪಯೋಗಿಸಿಕೊಂಡು ಬರ ನಿರ್ವಹಣೆ ಮಾಡುವುದು ಆದ್ಯತೆಯಾಗಬೇಕು.

* ದೇಶದಲ್ಲಿ ಈಗ ನಾಲ್ಕು ಕಾಲಗಳಾಗಿವೆ ಮಳೆಗಾಲ, ಬೇಸಿಗೆ ಕಾಲ, ಬರಗಾಲ ಮತ್ತು ಚಳಿಗಾಲ. [ಬತ್ತಿದ ನೇತ್ರಾವತಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೀರಿನ ಕೊರತೆ]

* ಬರದ ವಿಚಾರದಲ್ಲಿ ರಾಜಕೀಯ ಮಾಡಬಾರದು. ಇಂದಿನ ತುರ್ತು ಅಗತ್ಯವಾಗಿ ಬರ ಪರಿಹಾರಕ್ಕೆ ಗಮನಕೊಡಬೇಕು ಮತ್ತು ಭವಿಷ್ಯಕ್ಕಾಗಿ ಯೋಜನೆ ರೂಪಿಸಬೇಕು. ವರ್ಷದಿಂದ ವರ್ಷಕ್ಕೆ ಬರ ತೀವ್ರಗೊಳ್ಳುತ್ತಿದ್ದರೂ ಕೈ ಕಟ್ಟಿ ಕುಳಿತುಕೊಳ್ಳಬಾರದು.

* ಕರ್ನಾಟಕದಲ್ಲಿ ಜನರು ಜಾನುವಾರು ಮತ್ತು ಆಸ್ತಿಗಳನ್ನು ಸಿಕ್ಕಿದ ಬೆಲೆಗೆ ಮಾರಿ ಗುಳೆ ಹೋಗುತ್ತಿದ್ದಾರೆ. ರೈತರು ಜಮೀನನ್ನು ಬಿಟ್ಟು ಗುಳೆ ಹೋಗುತ್ತಿದ್ದಾರೆ. ಅವರ ಜಮೀನು ಕೈತಪ್ಪಿ ಹೋಗುವಂತಿದ್ದರು ಅವರು ಊರಿಗೆ ಮರಳುತ್ತಿಲ್ಲ. ಇದರ ಪರಿಣಾಮ ಆರ್ಥಿಕತೆ ಮೇಲೆ ಉಂಟಾಗುತ್ತದೆ. [ಮಳೆಯಿಲ್ಲ, ಬೆಳೆಯಿಲ್ಲ, ಉತ್ತರದ ಮಂದಿ ಹೊಂಟರು ಗುಳೆ]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Describing the drought situation in India as a national calamity Member of Parliament Rajeev Chandrasekhar called for immediate crisis and relief management and a comprehensive medium and long term National Water Management Strategy to manage drought.
Please Wait while comments are loading...