National Highway: ರಾಷ್ಟ್ರೀಯ ಹೆದ್ದಾರಿ ಹಾಗೂ ಎಕ್ಸ್‌ಪ್ರೆಸ್ ವಾಹನ ಸವಾರರಿಗೆ NHAI ನೆಮ್ಮದಿ ಸುದ್ದಿ
National Highway And Expressway: ಎನ್‌ಎಚ್‌ಎಐ ರಾಷ್ಟ್ರೀಯ ಹೆದ್ದಾರಿ ಹಾಗೂ ಎಕ್ಸ್‌ಪ್ರೆಸ್ ವಾಹನ ಸವಾರರಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ. ಹಾಗಾದ್ರೆ ಅದೇನು ಎನ್ನುವ ಪ್ರಶ್ನೆ ಬಹುತೇಕ ಮಂದಿ ತಲೆಯಲ್ಲಿರುತ್ತದೆ. ಅದೆಲ್ಲದಕ್ಕೂ ಉತ್ತರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ರಾಷ್ಟ್ರೀಯ ಹೆದ್ದಾರಿ ಹಾಗೂ ಎಕ್ಸ್‌ಪ್ರೆಸ್‌ವೇಗಳಲ್ಲಿ ವಾಹನ ಚಲಾಯಿಸುವ ವಾಹನ ಸವಾರರಿಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ನೆಮ್ಮದಿಯ ಸುದ್ದಿಯೊಂದನ್ನು ನೀಡಿದ್ದಾರೆ. ಇನ್ಮುಂದೆ ಹೆದ್ದಾರಿಗಳಲ್ಲಿ ಸಣ್ಣಪುಟ್ಟ ವೇಗದ ವ್ಯತ್ಯಾಸಗಳಿಗೆ ಆಟೋಮ್ಯಾಟಿಕ್ ಸ್ಪೀಡ್ ಕ್ಯಾಮೆರಾಗಳ ಮೂಲಕ ವಿಧಿಸಲಾಗುತ್ತಿದ್ದ ದಂಡದ ಭಯದಿಂದ ಸವಾರರಿಗೆ ಮುಕ್ತಿ ಸಿಗಲಿದೆ.

ಸಂಚಾರ ಪೊಲೀಸ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ
ಇಷ್ಟು ದಿನ ಹೆದ್ದಾರಿಗಳಲ್ಲಿ ನಿಗದಿತ ವೇಗಕ್ಕಿಂತ ಕೇವಲ 1-2 ಕಿಲೋ ಮೀಟರ್ ಹೆಚ್ಚಾದರೂ ಸ್ಪೀಡ್ ಕ್ಯಾಮೆರಾಗಳು ಇ-ಚಲನ್ ರವಾನಿಸುತ್ತಿದ್ದವು. ಆದರೆ ಕೇಂದ್ರ ಸರ್ಕಾರದ ಹೊಸ ಮಾರ್ಗಸೂಚಿಯ ಪ್ರಕಾರ, ರಸ್ತೆಯಲ್ಲಿ ನಿಗದಿಪಡಿಸಿರುವ ಗರಿಷ್ಠ ವೇಗದ ಮಿತಿಗಿಂತ ಶೇಕಡಾ 20ರಷ್ಟು ಹೆಚ್ಚು ವೇಗದಲ್ಲಿ ವಾಹನ ಚಲಾಯಿಸಿದರೂ ದಂಡ ವಿಧಿಸದಂತೆ ಸಂಚಾರ ಪೊಲೀಸ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ವೇಗದ ಮಿತಿಯ ವಿವರ
* 100 ಕಿಲೋ ಮೀಟರ್ ಮಿತಿ ಇರುವ ರಸ್ತೆ: ಇಲ್ಲಿ ವಾಹನ ಸವಾರರು ಗಂಟೆಗೆ 120 ಕಿಲೋ ಮೀಟರ್ ವೇಗದವರೆಗೆ ಚಲಾಯಿಸಿದರೆ ಯಾವುದೇ ದಂಡ ಬೀಳುವುದಿಲ್ಲ.
* 120 ಕಿ.ಮೀ ಮಿತಿ ಇರುವ ಎಕ್ಸ್‌ಪ್ರೆಸ್‌ವೇ: ಇಲ್ಲಿ 120 ಕಿಲೋ ಮೀಟರ್‌ವರೆಗಿನ ವೇಗಕ್ಕೆ ಯಾವುದೇ ಚಲನ್ ಜಾರಿ ಆಗುವುದಿಲ್ಲ.
ಅತಿ ವೇಗಕ್ಕೆ ಬೀಳಲಿದೆ ಬ್ರೇಕ್
ಶೇಕಡಾ 20ರಷ್ಟು ವಿನಾಯಿತಿ ಮಿತಿಯನ್ನು ಮೀರಿದರೆ ಮಾತ್ರ ಕಠಿಣ ನಿಯಮಗಳು ಅನ್ವಯ ಆಗಲಿವೆ. ಒಂದು ವೇಳೆ 120 ಕಿ.ಮೀ. ಮಿತಿ ಇರುವ ಎಕ್ಸ್‌ಪ್ರೆಸ್‌ವೇನಲ್ಲಿ 20% ಕ್ಕಿಂತ ಹೆಚ್ಚು, ಅಂದರೆ ಗಂಟೆಗೆ 144 ಕಿಲೋ ಮೀಟರ್ ಅಥವಾ ಅದಕ್ಕಿಂತ ಹೆಚ್ಚಿನ ವೇಗದಲ್ಲಿ ವಾಹನ ಚಲಾಯಿಸಿದರೆ ನೇರವಾಗಿ ಇ-ಚಲನ್ ಮನೆಗೆ ತಲುಪಲಿದೆ. ಹೆದ್ದಾರಿಗಳಲ್ಲಿ ನಿಯಮ ಪಾಲನೆಯನ್ನು ಕಟ್ಟುನಿಟ್ಟಾಗಿ ಮೇಲ್ವಿಚಾರಣೆ ಮಾಡಲು ಸ್ವಯಂಚಾಲಿತ ಸಂಚಾರ ನಿರ್ವಹಣಾ ವ್ಯವಸ್ಥೆಯನ್ನು ಅಳವಡಿಕೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ವಾಹನ ಸವಾರರಿಗೆ ಪ್ರಮುಖ ಸೂಚನೆಗಳು
* ವೇಗದ ಮಿತಿ ಖಚಿತಪಡಿಸಿಕೊಳ್ಳಿ: ಪ್ರತಿಯೊಂದು ಹೆದ್ದಾರಿ ಅಥವಾ ಎಕ್ಸ್‌ಪ್ರೆಸ್‌ವೇಗೆ ಕಾರುಗಳು ಹಾಗೂ ಭಾರಿ ವಾಹನಗಳಿಗೆ ಬೇರೆ ಬೇರೆಯಾದ ನಿರ್ದಿಷ್ಟ ವೇಗದ ಮಿತಿ ಇರುತ್ತದೆ. ಪ್ರಯಾಣಿಸುವ ಮುನ್ನ ಅದನ್ನು ಪರಿಶೀಲಿಸುವುದು ಕಡ್ಡಾಯ.
* ಸುರಕ್ಷಿತ ಪ್ರಯಾಣದ ಸಿದ್ಧತೆ: ಟೋಲ್ ಪ್ಲಾಜಾಗಳಲ್ಲಿ ವಿಳಂಬ ತಪ್ಪಿಸಲು ಫಾಸ್ಟ್‌ಟ್ಯಾಗ್‌ನಲ್ಲಿ ಸೂಕ್ತ ಬ್ಯಾಲೆನ್ಸ್ ಇರಿಸಿಕೊಳ್ಳಿ. ಹೊರಡುವ ಮುನ್ನ ವಾಹನದ ಟೈರ್ ಮತ್ತು ಇಂಧನದ ಮಟ್ಟವನ್ನು ಸರಿಯಾಗಿ ಪರೀಕ್ಷಿಸಿಕೊಳ್ಳುವುದು ಅವಶ್ಯಕ.
* ಕೇಂದ್ರ ಸರ್ಕಾರದ ಈ ನಿರ್ಧಾರವು ನಿತ್ಯ ಪ್ರಯಾಣಿಸುವ ಸವಾರರ ದಂಡದ ಒತ್ತಡವನ್ನು ಕಡಿಮೆ ಮಾಡಲಿದ್ದು, ಲಾಂಗ್ ಡ್ರೈವ್ ಹೋಗುವವರಿಗೆ ದೊಡ್ಡ ಮಟ್ಟದ ನೆಮ್ಮದಿ ನೀಡಿದೆ.
ರಾಷ್ಟ್ರೀಯ ಹೆದ್ದಾರಿ ಬಗ್ಗೆ ತಿಳಿದುಕೊಳ್ಳಬೇಕಾದ ಮಾಹಿತಿ
ರಾಷ್ಟ್ರೀಯ ಹೆದ್ದಾರಿ ಹಾಗೂ ಎಕ್ಸ್‌ಪ್ರೆಸ್ ವೇ ಇವೆರಡಕ್ಕೂ ಬಹಳ ಅಲ್ಲದಿದ್ದರೂ ತುಸು ವ್ಯತ್ಯಾಸ ಇದೆ. ಸಾಮಾನ್ಯವಾಗಿ ಎಕ್ಸ್‌ಪ್ರೆಸ್ ವೇಗಳ ನಿರ್ವಹಣೆ ಜವಾಬ್ದಾರಿ ಆಯಾ ರಾಜ್ಯಗಳ ಮೇಲೆ ಇರುತ್ತಾರೆ. ರಾಷ್ಟ್ರೀಯ ಹೆದ್ದಾರಿಯ ನಿರ್ವಹಣೆಯನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ನೋಡಿಕೊಳ್ಳುತ್ತದೆ. ರಾಷ್ಟ್ರೀಯ ಹೆದ್ದಾರಿ ಇನ್ನೂ ಹಲವು ಪ್ರಮುಖ ಅಂಶಗಳು ಒಳಗೊಂಡಿದೆ.
ರಾಷ್ಟ್ರೀಯ ಹೆದ್ದಾರಿ ಎಂದರೆ ದೇಶದ ಪ್ರಮುಖ ನಗರಗಳನ್ನು ಮತ್ತು ರಾಜ್ಯಗಳನ್ನು ಸಂಪರ್ಕಿಸುವ ಒಂದು ದೊಡ್ಡ ರಸ್ತೆ ಜಾಲವಾಗಿದೆ. ಭಾರತದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ನಿರ್ವಹಣೆ ಮತ್ತು ಅಭಿವೃದ್ಧಿಯ ಜವಾಬ್ದಾರಿಯನ್ನು ಭಾರತ ಸರ್ಕಾರದ ಸ್ವಾಯತ್ತ ಸಂಸ್ಥೆಯಾದ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ನೋಡಿಕೊಳ್ಳುತ್ತದೆ. ಈ ಹೆದ್ದಾರಿಗಳು ಆರ್ಥಿಕ ಅಭಿವೃದ್ಧಿ, ಪ್ರವಾಸೋದ್ಯಮ ಮತ್ತು ದೇಶದ ಅಭಿವೃದ್ಧಿಗೆ ಪ್ರಮುಖ ಪಾತ್ರವಹಿಸಲಿವೆ.
ರಾಷ್ಟ್ರೀಯ ಹೆದ್ದಾರಿಯ ಪ್ರಮುಖ ಅಂಶಗಳು
* ರಾಷ್ಟ್ರೀಯ ಹೆದ್ದಾರಿಯನ್ನು ಭಾರತ ಸರ್ಕಾರದ ಉಸ್ತುವಾರಿಯಲ್ಲಿ ಮತ್ತು ಕೆಲವೊಮ್ಮೆ ಸಾರ್ವಜನಿಕ-ಖಾಸಗಿ ಪಾಲುದಾರಿಕೆಯಲ್ಲಿ ನಿರ್ವಹಿಸಲಾಗುತ್ತದೆ.
* ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) 1995ರಲ್ಲಿ ಸ್ಥಾಪಿತವಾದ ಸ್ವಾಯತ್ತ ಸಂಸ್ಥೆಯಾಗಿದ್ದು, 50 ಕಿಲೋ ಮೀಟರ್‌ಗಿಂತ ಹೆಚ್ಚಿನ ಉದ್ದದ ರಾಷ್ಟ್ರೀಯ ಹೆದ್ದಾರಿಗಳ ನಿರ್ವಹಣೆಯನ್ನು ಇದು ಮಾಡುತ್ತದೆ.
* ದೇಶದ ವಿವಿಧ ರಾಜ್ಯಗಳ ಮತ್ತು ಪ್ರಮುಖ ನಗರಗಳ ನಡುವೆ ಸಂಚಾರವನ್ನು ಸುಗಮಗೊಳಿಸುವುದು ಇದರ ಮುಖ್ಯ ಉದ್ದೇಶ.
* ಹೆದ್ದಾರಿಗಳ ನಿರ್ಮಾಣದ ವೇಗ ಹೆಚ್ಚಿದ್ದು, ಇದೀಗ ಇದರ ನಿರ್ಮಾಣದ ದೂರ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲಿದೆ.
* ಎನ್‌ಎಚ್‌ಎಐ ಪ್ರಯಾಣಿಕರಿಗೆ ಮಾಹಿತಿ ಮತ್ತು ತುರ್ತು ಸಹಾಯ ಒದಗಿಸಲು ಹೆದ್ದಾರಿಗಳಲ್ಲಿ ಕ್ಯೂಆರ್ ಕೋಡ್ ಫಲಕಗಳನ್ನು ಅಳವಡಿಸಿದೆ.


Click it and Unblock the Notifications
