ಹೆರಾಲ್ಡ್: ಪಿತ್ರೋಡಾಗೆ ಜಾಮೀನು, ಸೋನಿಯಾ-ರಾಹುಲ್‌ಗೆ ವಿನಾಯಿತಿ
ನವದೆಹಲಿ, ಫೆಬ್ರವರಿ, 20: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್ ಗಾಂಧಿಗೆ ನ್ಯಾಶನಲ್ ಹೆರಾಲ್ಡ್ ಪ್ರಕರಣದ ವಿಚಾರಣೆ ಖುದ್ದು ಹಾಜರಾತಿಯಿಂದ ಶನಿವಾರ ವಿನಾಯಿತಿ ನೀಡಲಾಗಿತ್ತು.
ವಿನಾಯಿತಿ ನೀಡಿದ ವಿಚಾರಣಾ ನ್ಯಾಯಾಲಯವು, ಆರೋಪಿ ಸ್ಯಾಮ್ ಪಿತ್ರೋಡಾ ಅವರಿಗೆ ಜಾಮೀನು ಮಂಜೂರು ಮಾಡಿತು. 50,000 ರೂಪಾಯಿಗಳ ವೈಯಕ್ತಿಕ ಬಾಂಡ್ ಮತ್ತು ಅಷ್ಟೇ ಮೊತ್ತದ ಭದ್ರತಾ ಖಾತರಿ ನೀಡುವಂತೆ ನ್ಯಾಯಾಲಯವು ಪಿತ್ರೋಡಾ ಅವರಿಗೆ ಸೂಚಿಸಿದೆ.[ಏನಿದು ನ್ಯಾಶನಲ್ ಹೆರಾಲ್ಡ್ ಕೇಸ್]

ಕಾಂಗ್ರೆಸ್ ಖಜಾಂಚಿ ಮೋತಿಲಾಲ್ ವೋರಾ, ಸೋನಿಯಾ ಕುಟುಂಬದ ಒಡನಾಡಿ ಸುಮನ್ ದುಬೆ ಮತ್ತು ಕಾಂಗ್ರೆಸ್ ನಾಯಕ ಆಸ್ಕರ್ ಫರ್ನಾಂಡಿಸ್ ಅವರಿಗೂ ನ್ಯಾಯಾಲಯ ಖುದ್ದು ಹಾಜರಾತಿಯಿಂದ ವಿನಾಯಿತಿ ನೀಡಿತು. ನ್ಯಾಶನಲ್ ಹೆರಾಲ್ಡ್ ಪ್ರಕರಣದ ವಿಚಾರಣೆ ಶನಿವಾರ ನಡೆಯಿತು.[ಹೆರಾಲ್ಡ್ : ಒಂದಿಷ್ಟು ತಮಾಷೆಯ, ಕೆಣಕುವ ಟ್ವೀಟುಗಳು]
ಮಾರ್ಚ್ 21ಕ್ಕೆ ಮುಂದಿನ ವಿಚಾರಣೆಯನ್ನು ಮುಂದೂಡಲಾಗಿದೆ. ಆರೋಪಿಗಳು ಖುದ್ದು ಹಾಜರಾಗುವ ಅಗತ್ಯವಿಲ್ಲ. ಅಗತ್ಯವಿದ್ದರೆ ನ್ಯಾಯಾಲಯವೇ ಅವರನ್ನು ಕರೆಸಿಕೊಳ್ಳಲಿದೆ ಎಂದು ಕೋರ್ಟ್ ಹೇಳಿದೆ. ಬಿಜೆಪಿ ಧುರೀಣ ಸುಬ್ರಮಣಿಯನ್ ಸ್ವಾಮಿ ಸಲ್ಲಿಸಿರುವ ದೂರಿನ ಹಿನ್ನಲೆಯಲ್ಲಿ ರಾಹುಲ್ ಸೋನಿಯಾ ಸೇರಿದಂತೆ ಅನೇಕರು ಹೆರಾಲ್ಡ್ ಪ್ರಕರಣದ ವಿಚಾರಣೆಯನ್ನು ಎದುರಿಸುತ್ತಿದ್ದಾರೆ.











Click it and Unblock the Notifications