ಇಫ್ತಾರ್ ಕೂಟದಲ್ಲಿ ಸಿದ್ರಾಮಣ್ಣ, ಗಂಗಾ ನದಿಯಲ್ಲಿ ಪೌರ್ಣಮಿ ಸ್ನಾನ...

ಬೆಂಗಳೂರಿನ ಅರಮನೆ ಮೈದಾನದಲ್ಲಿ ಗುರುವಾರ ನಡೆದ ಇಫ್ತಾರ್ ಕೂಟದಲ್ಲಿ ಸಿದ್ದರಾಮಯ್ಯ ಪಾಲ್ಗೊಂಡಿದ್ದಾರೆ. ಪೌರ್ಣಮಿ ಅಂಗವಾಗಿ ಶುಕ್ರವಾರ ಅಲಹಾಬಾದ್ ನಲ್ಲಿ ಗಂಗಾನದಿಯ ಪವಿತ್ರ ಸ್ನಾನ ಮಾಡಿದ್ದಾರೆ ಹಿಂದೂ ಭಕ್ತರು. ಬ್ರಿಟನ್ ನಲ್ಲಿ ನಡೆದ ಸಂಸತ್ ಚುನಾವಣೆಯಲ್ಲಿ ಕನ್ಸರ್ವೇಟಿವ್ ಪಕ್ಷದ ತೆರೆಸಾ ಮೇ ಅವರಿಗೆ ಹಿನ್ನಡೆಯಾಗಿದೆ.

ಏನೇನು ಸುದ್ದಿ-ಎಷ್ಟೆಲ್ಲ ವಿಚಾರ ಬಹಳ ಮುಖ್ಯ ಎನ್ಸಿಸಿದ ಆಯ್ದ-ಕೆಲವು ಫೋಟೊ-ಸುದ್ದಿಯನ್ನು ನಿಮ್ಮೆದುರು ತರಲಾಗಿದೆ. ಇನ್ನು ರಾಜಸ್ತಾನದ ಬಿಕಾನೇರ್ ನಲ್ಲಿರುವ ಸಂಶೋಧನಾ ಕೇಂದ್ರದಲ್ಲಿ ಕತ್ತೆಯನ್ನು ಕಟ್ಟಿ ಉಳುಮೆ ಮಾಡಿದ ಫೋಟೊ ನಿಮ್ಮ ಗಮನಕ್ಕೆ ಬಂತಾ? ಅಹ್ಮದಾಬಾದ್ ನಲ್ಲಿ ಅದ್ಧೂರಿಯಾಗಿ ಜೈ ಯಾತ್ರೆ ನಡೆದಿದೆ.

ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಿವಾಸದ ಎದುರು ಆಮ್ ಆದ್ಮಿ ಪಕ್ಷದಿಂದ ಅಮಾನತಾದ ಕಪಿಲ್ ಇಶ್ರಾ ಪ್ರತಿಭಟನೆ ನಡೆಸಿದ್ದಾರೆ. ಜನತಾ ದರ್ಬಾರ್ ನಡೆಸುತ್ತಿದ್ದ ವೇಳೆ ಒಳನುಗ್ಗುವುದಕ್ಕೆ ಪ್ರಯತ್ನಿಸಿದ್ದಾರೆ. ಇಷ್ಟು, ಇಷ್ಟಿಷ್ಟೇ ಸುದ್ದಿಯ ವಿವರಗಳನ್ನು ನಿಮ್ಮೆದುರು ತರಲಾಗಿದೆ.[ಕೇರಳದಲ್ಲೊಂದು ಮಾದರಿ ದೇವಾಲಯ, ಇಲ್ಲಿ ಮುಸ್ಲಿಮರಿಗೂ ಇಫ್ತಾರ್ ಕೂಟ!]

ಫೋಟೊ-ಘಟನೆಯ ವಿವರಗಳು ಆಸಕ್ತಿ ಮೂಡಿಸುವಂತಿದೆ. ಈ ಬಗ್ಗೆ ನಿಮಗನಿಸಿದ ಅಭಿಪ್ರಾಯವನ್ನು ಕನಿಷ್ಠ ಎರಡು ಸಾಲಿನಲ್ಲಾದರೂ ನಮಗೆ ತಿಳಿಸಿ.

ವೋ ಬಹುತ್ ಅಚ್ಛಾ ಹೇ ಸಿದ್ರಾಮಯ್ಯ ಜೀ

ವೋ ಬಹುತ್ ಅಚ್ಛಾ ಹೇ ಸಿದ್ರಾಮಯ್ಯ ಜೀ

ರಂಜಾನ್ ಪ್ರಯುಕ್ತ ಗುರುವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಫ್ತಾರ್ ಕೂಟ ಆಯೋಜಿಸಲಾಗಿತ್ತು. ಚಿತ್ರದಲ್ಲಿ ಸಚಿವ ರೋಷನ್ ಬೇಗ್ ಕೂಡ ಇದ್ದಾರೆ. 'ಅಲ್ಲಿದೆ ನೋಡಿ, ಅದನ್ನು ತಿನ್ನಿ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹೇಳುತ್ತಿರುವಂತಿದೆ.

ಕತ್ತೆ ಕಟ್ಟಿ ಉಳುಮೆ

ಕತ್ತೆ ಕಟ್ಟಿ ಉಳುಮೆ

ರಾಜಸ್ತಾನದ ಬಿಕಾನೇರ್ ನಲ್ಲಿರುವ ರಾಷ್ಟ್ರೀಯ ಸಂಶೋಧನಾ ಕೇಂದ್ರದಲ್ಲಿ ಕತ್ತೆಯ ಸಹಾಯದಿಂದ ಭೂಮಿ ಉಳುವ ದೃಶ್ಯ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದ್ದು ಹೀಗೆ.

ಜೈ ಯಾತ್ರಾ ಸಂಭ್ರಮ

ಜೈ ಯಾತ್ರಾ ಸಂಭ್ರಮ

ರಥ ಯಾತ್ರಾ ನೂರಾನಲವತ್ತನೇ ವರ್ಷಾಚರಣೆಯ ಮುನ್ನ ಜೈ ಯಾತ್ರಾವನ್ನು ಅಹ್ಮದಾಬಾದ್ ನಲ್ಲಿ ಶುಕ್ರವಾರ ಹಿಂದೂ ಭಕ್ತರು ಕೈಗೊಂಡರು. ಆಗ ಕಂಡುಬಂದ ದೃಶ್ಯವಿದು.

ಕಪಿಲ್ ಮಿಶ್ರಾ ಪ್ರತಿಭಟನೆ

ಕಪಿಲ್ ಮಿಶ್ರಾ ಪ್ರತಿಭಟನೆ

ಆಮ್ ಆದ್ಮಿ ಪಕ್ಷದಿಂದ ಅಮಾನತಾದ ಕಪಿಲ್ ಮಿಶ್ರಾ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಿವಾಸದ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು. ಈ ವೇಳೆ ಜನತಾ ದರ್ಬಾರ್ ನಡೆಸುತ್ತಿದ್ದರು ಕೇಜ್ರಿವಾಲ್. ಆಗ ಒಳನುಗ್ಗಲು ಯತ್ನಿಸಲಾಯಿತು.

ಗಂಗಾ ನದಿ ಪವಿತ್ರ ಸ್ನಾನ

ಗಂಗಾ ನದಿ ಪವಿತ್ರ ಸ್ನಾನ

ಪೌರ್ಣಮಿ ಅಂಗವಾಗಿ ಶುಕ್ರವಾರ ಅಲಹಾಬಾದ್ ನಲ್ಲಿ ಹರಿಯುವ ಗಂಗಾ ನದಿಯಲ್ಲಿ ಹಿಂದೂ ಭಕ್ತರು ಸ್ನಾನ ಮಾಡಿದರು.

ಬಹುಮತ ಕಳೆದುಕೊಳ್ಳಲಿದ್ದಾರಂತೆ ತೆರೆಸಾ ಮೇ

ಬಹುಮತ ಕಳೆದುಕೊಳ್ಳಲಿದ್ದಾರಂತೆ ತೆರೆಸಾ ಮೇ

ಬ್ರಿಟನ್ ಪ್ರಧಾನಿ ತೆರೆಸಾ ಮೇಗೆ ಚುನಾವಣೆಯಲ್ಲಿ ಹಿನ್ನಡೆಯಾಗಲಿದೆ ಎಂಬ ಅಂಶವನ್ನು ಚುನಾವಣೋತ್ತರ ಸಮೀಕ್ಷೆ ಬಯಲು ಮಾಡಿದೆ. ಆಕೆ ಪ್ರತಿನಿಧಿಸುವ ಕರ್ಸರ್ವೇಟಿವ್ ಪಕ್ಷ ಬಹುಮತವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ.

ಸುನೀಲ್ ಛೆಟ್ರಿ ಲುಕ್

ಸುನೀಲ್ ಛೆಟ್ರಿ ಲುಕ್

ಆಲ್ ಇಂಡಿಯಾ ಫುಟ್ ಬಾಲ್ ಫೆಡರೇಷನ್ ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಗುರುವಾರ ಮುಂಬೈನಲ್ಲಿ ನಡೆದಾಗ ಆಟಗಾರ ಸುನೀಲ್ ಛೆಟ್ರಿ ಕಂಡುಬಂದಿದ್ದು ಹೀಗೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+