ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಕ್ಷಕ್ಕಿಂತ ದೇಶ ದೊಡ್ಡದು; ಬಿಜೆಪಿ ಸಂಸ್ಥಾಪನಾ ದಿನಕ್ಕೆ ಮೋದಿ ಮಾತು

|
Google Oneindia Kannada News

ನವದೆಹಲಿ, ಏಪ್ರಿಲ್ 6: "ದೇಶ ಮೊದಲು" ಎಂಬ ಘೋಷಣೆಯನ್ನು ಪುನರುಚ್ಚರಿಸಿರುವ ಪ್ರಧಾನಿ ನರೇಂದ್ರ ಮೋದಿ, ವ್ಯಕ್ತಿಗಿಂತ ಪಕ್ಷ ದೊಡ್ಡದು ಹಾಗೂ ಪಕ್ಷಕ್ಕಿಂತ ದೇಶವೇ ದೊಡ್ಡದು ಎಂಬ ಸಿದ್ಧಾಂತದ ಮೇಲೆ ಬಿಜೆಪಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.

ಬಿಜೆಪಿಯ 41ನೇ ಸಂಸ್ಥಾಪನಾ ದಿನದ ಸಂದರ್ಭ ಪಕ್ಷದ ಸದಸ್ಯರನ್ನುದ್ದೇಶಿಸಿ ಮಾತನಾಡಿದ ಮೋದಿ, "ಬಿಜೆಪಿ ಎಂದಿಗೂ ವ್ಯಕ್ತಿಗಿಂತ ಪಕ್ಷ ದೊಡ್ಡದು ಹಾಗೂ ಪಕ್ಷಕ್ಕಿಂತ ದೇಶ ದೊಡ್ಡದು ಎಂಬ ಸಿದ್ಧಾಂತದ ಮೇಲೆಯೇ ಕಾರ್ಯನಿರ್ವಹಿಸುತ್ತಾ ಬಂದಿದೆ. ಡಾ. ಶ್ಯಾಮಪಪ್ರಸಾದ್ ಮುಖರ್ಜಿ ಅವರಿಂದ ಆರಂಭಗೊಂಡು ಇಂದಿನವರೆಗೂ ಈ ಕಾರ್ಯವೈಖರಿಯೇ ಮುಂದುವರೆದುಕೊಂಡು ಬಂದಿದೆ. ಮುಂದೆಯೂ ಹಾಗೇ ಇರುತ್ತದೆ ಎಂದು ಹೇಳಿದರು. ಮುಂದೆ ಓದಿ...

"ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ಪಕ್ಷ ಪೂರೈಸಿದೆ"

ಪಕ್ಷವನ್ನು ಕಟ್ಟಿ ಬೆಳೆಸಿ, ವಿಸ್ತರಿಸುವಲ್ಲಿ ಲಾಲ್ ಕೃಷ್ಣ ಅಡ್ವಾಣಿ ಹಾಗೂ ಮುರಳಿ ಮನೋಹರ್ ಜೋಶಿ ಅವರ ಕೊಡುಗೆಯನ್ನು ಸ್ಮರಿಸಿದ ಮೋದಿ, ಶ್ಯಾಮ ಪ್ರಸಾದ್ ಅವರ ಈ ಪ್ರಜಾಪ್ರಭುತ್ವದ ಪರಿಕಲ್ಪನೆ, ಕನಸನ್ನು ನಮ್ಮ ಸರ್ಕಾರ ಪೂರೈಸಿದೆ. 370ರ ಕಾಯ್ದೆಯನ್ನು ರದ್ದುಪಡಿಸಿ ಜಮ್ಮು ಕಾಶ್ಮೀರಕ್ಕೆ ಸಾಂವಿಧಾನಿಕ ಹಕ್ಕುಗಳನ್ನು ನೀಡಿದೆ ಎಂದು ಹೇಳಿದರು.

475 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ: ನಾಲ್ಕು ಭಾಷೆಗಳಲ್ಲಿ ಮತದಾರರಿಗೆ ಮೋದಿ ಸಂದೇಶ475 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ: ನಾಲ್ಕು ಭಾಷೆಗಳಲ್ಲಿ ಮತದಾರರಿಗೆ ಮೋದಿ ಸಂದೇಶ

 ಪಕ್ಷದ ಬೆಳವಣಿಗೆ ಬಗ್ಗೆ ಮೋದಿ ವಿವರ

ಪಕ್ಷದ ಬೆಳವಣಿಗೆ ಬಗ್ಗೆ ಮೋದಿ ವಿವರ

1951ರಲ್ಲಿ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಭಾರತೀಯ ಜನತಾ ಸಂಘದಿಂದ ಬಿಜೆಪಿ ಬೆಳೆದು ಬಂತು. 1977ರಲ್ಲಿ ಹಲವು ಪಕ್ಷಗಳು ವಿಲೀನಗೊಂಡು ಜನತಾ ಪಕ್ಷ ಹುಟ್ಟಿಕೊಂಡಿತು. 1980ರಲ್ಲಿ ಜನತಾ ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಮಂಡಳಿ ತನ್ನ ಸದಸ್ಯರನ್ನು ಉಭಯ ಸದಸ್ಯರಂತೆ ಇರಲು ಸೂಚಿಸಿತು. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ 1980ರ ಏಪ್ರಿಲ್ 6ರಂದು ಬಿಜೆಪಿ ಅಸ್ತಿತ್ವಕ್ಕೆ ಬಂತು ಎಂದು ಪಕ್ಷದ ಬೆಳವಣಿಗೆ ಬಗ್ಗೆ ವಿವರಿಸಿದರು.

"ಬಿಜೆಪಿ ಎಲೆಕ್ಷನ್ ವಿನ್ನಿಂಗ್ ಮೆಷಿನ್ ಎನ್ನುತ್ತಾರೆ"

ರಾಷ್ಟ್ರದ ಅಭಿವೃದ್ಧಿಗೆ ಹೇಗೆ ತಮ್ಮ ಪಕ್ಷದ ನಾಯಕರು ಒಗ್ಗಟ್ಟಾಗಿ ದುಡಿದಿದ್ದಾರೆ ಎಂಬುದನ್ನು ವಿವರಿಸಿದ ಮೋದಿ, ಇದೇ ಸಂದರ್ಭ ವಿರೋಧ ಪಕ್ಷಗಳ ಮೇಲೆ ಕಿಡಿಕಾರಿದರು. ಇಂದು ದೇಶದ ನಾಲ್ಕು ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ಚುನಾವಣೆ ನಡೆಯುತ್ತಿದೆ. ಬಿಜೆಪಿ ಗೆದ್ದರೆ ಅಕ್ರಮದಿಂದ ಗೆದ್ದಿದೆ ಎನ್ನುತ್ತಾರೆ. "ಎಲೆಕ್ಷನ್ ವಿನ್ನಿಂಗ್ ಮೆಷಿನ್" ಎಂದು ಕರೆಯುತ್ತಾರೆ. ಅದೇ ವಿರೋಧ ಪಕ್ಷಗಳು ಗೆದ್ದರೆ ಅದನ್ನು ಪರಿಶ್ರಮ ಎಂದು ಕರೆದುಕೊಳ್ಳುತ್ತಾರೆ ಎಂದು ದೂರಿದರು.

ಏ.7 ರಂದು ಪರೀಕ್ಷಾ ಪೇ ಚರ್ಚಾ: ಪ್ರಧಾನಿ ಮೋದಿ ಜತೆ ಸಂವಾದದಲ್ಲಿ ಪಾಲಕರಿಗೂ ಅವಕಾಶಏ.7 ರಂದು ಪರೀಕ್ಷಾ ಪೇ ಚರ್ಚಾ: ಪ್ರಧಾನಿ ಮೋದಿ ಜತೆ ಸಂವಾದದಲ್ಲಿ ಪಾಲಕರಿಗೂ ಅವಕಾಶ

Recommended Video

#Covid19Update: 24 ಗಂಟೆಗಳಲ್ಲಿ ದೇಶದಲ್ಲಿ 96,982 ಜನರಿಗೆ ಕೊರೊನಾ ಸೋಂಕು ದೃಢ | Oneindia Kannada

"ನಮ್ಮ ದೇಶದ ಪ್ರಜಾಪ್ರಭುತ್ವವನ್ನು ಅರ್ಥ ಮಾಡಿಕೊಂಡಿಲ್ಲ"

ಬಿಜೆಪಿ ಎಲೆಕ್ಷನ್ ವಿನ್ನಿಂಗ್ ಯಂತ್ರವಲ್ಲ. ಹೀಗೆ ಹೇಳುವವರು ನಮ್ಮ ದೇಶದ ಪ್ರಜಾಪ್ರಭುತ್ವವನ್ನು, ಇಲ್ಲಿನ ಜನರ ಭರವಸೆ, ಕನಸುಗಳು, ನಿರೀಕ್ಷೆಗಳನ್ನು ಅರ್ಥ ಮಾಡಿಕೊಂಡಿಲ್ಲ ಎಂದೇ ಹೇಳಬಹುದು. ಅಂಥವರ ಕುರಿತು ಮಾತನಾಡುವುದು ವ್ಯರ್ಥ ಎಂದು ಹೇಳಿದರು.

English summary
Prime Minister Narendra Modi on BJP 41st Foundation day stated that the Bharatiya Janata Party has always worked on the idea of "the party is bigger than the individual and the nation is bigger than the party"
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X