Hindenburg: ಅದಾನಿ ಕುರಿತು ವರದಿ ಪ್ರಕಟಿಸಿದ್ದ ಹಿಂಡೆನ್‌ಬರ್ಗ್ ರಿಸರ್ಚ್‌ ವಿಸರ್ಜನೆಗೆ ನಿರ್ಧಾರ: ಸಂಸ್ಥಾಪಕ

ಬೆಂಗಳೂರು, ಜನವರಿ 16: ಹಿಂಡೆನ್‌ಬರ್ಗ್ ರಿಸರ್ಚ್‌ ಸಂಸ್ಥೆಯು ನಾನಾ ಉದ್ಯಮಿಗಳು, ಸಂಸ್ಥೆಗಳ ಕುರಿತು ನಡೆಸಿದ ಸಂಶೋಧನಾ ವರದಿಗಳು ಸಾಕಷ್ಟು ಚರ್ಚೆ ಆಗಿವೆ. ಕೆಲವು ಖ್ಯಾತ ಉದ್ಯಮಿಗಳು, ಶೇರು ಮಾರುಕಟ್ಟೆ ಮೇಲೆ ವರದಿಗಳು ಪ್ರಭಾವ ಭೀರಿವೆ. ಇದೀಗ ಹಿಂಡೆನ್‌ಬರ್ಗ್ ರಿಸರ್ಚ್ ಸಂಸ್ಥಾಪಕ ನಾಥನ್ ಆಂಡರ್ಸನ್ ಸಂಸ್ಥೆ ವಿಸರ್ಜನೆ ಮಾಡುವುದಾಗಿ ಘೋಷಿಸಿದ್ದಾರೆ.

ಹಿಂಡೆನ್‌ಬರ್ಗ್ ರಿಸರ್ಚ್‌ನ ವರದಿಗಳ ಬಿತ್ತರ ಬಳಿಕ ಹೂಡಿಕೆದಾರರಿಂದ ಭಾರೀ ಶಾರ್ಟ್‌ ಸೆಲ್ಲಿಂಗ್ ಆಗಿತ್ತು. ಅಧಿಕಾರಿಗಳ ವಿವಿಧ ತನಿಖೆಗಳು ನಡೆಯಲು ಕಾರಣವಾಗಿತ್ತು. ಮುಖ್ಯವಾಗಿ ದೇಶದ ಶ್ರೀಮಂತ ಉದ್ಯಮಿ ಅದಾನಿ ಗ್ರೂಪ್ ಹಾಗೂ ಯುಎಸ್ ಮೂಲದ ನಿಕೋಲಾ ಹತ್ತಾರು ಕಂಪನಿಗಳ ಕುರಿತು ಹಿಂಡೆನ್‌ಬರ್ಗ್ ವರದಿ ಬಿಡುಗಡೆ ಮಾಡಿತ್ತು. ಕೆಲವು ವರದಿಗಳು ವ್ಯಾಪಕ ಚರ್ಚೆಗೆ, ಟೀಕೆಗೂ ಒಳಗಾಗಿವೆ.

Nathan Anderson Announces Disbanded of Hindenburg Research After Adani Report

ಹಿಂಡೆನ್‌ಬರ್ಗ್ ವರದಿ ಬಿಡುಗಡೆ ಆದ ಬಳಿಕ ಮಾರುಕಟ್ಟೆ ಮೌಲ್ಯಗಳು ಕುಸಿತಗೊಳ್ಳುತ್ತಿದ್ದವು. ಶೇರ್‌ಗಳಲ್ಲಿ ಕುಸಿತ, ಆರ್ಥಿಕ ಹೊಡೆತ ನೀಡಿದ್ದ ಈ ಸಂಸ್ಥೆಯಿಂದ ವಿಸರ್ಜನೆ ಮಾಡುವುದಾಗಿ ಸಂಸ್ಥಾಪಕ ನಾಥನ್ ಆಂಡರ್ಸನ್ ಅವರು ಹೇಳಿದ್ದಾರೆ. ಈ ಕುರಿತು ಅವರು ಕಾರಣ ನೀಡಿ ಪೋಸ್ಟ್ ಮಾಡಿದ್ದಾರೆ.

2017ರಲ್ಲಿ ಹಿಂಡೆನ್‌ಬರ್ಗ್ ಸ್ಥಾಪಿಸಿದ್ದ ನಾಥನ್ ಆಂಡರ್ಸನ್ ಅವರು, ತೀವ್ರ ಸ್ವರೂಪದ ವರದಿ, ಕೆಲವು ಬಾರಿ ಅತ್ಯಧಿಕ ಹಾನಿ ಉಂಟು ಮಾಡಬಹುದಾದ ವರದಿ ಹಿನ್ನೆಲೆಯಲ್ಲಿ ತಾವು ವಿಸರ್ಜನೆಯ ನಿರ್ಧಾರಕ್ಕೆ ಬಂದಿದ್ದೇವೆ ಎಂದು ತಿಳಿಸಿ ಅವರು ಪತ್ರವೊಂದನ್ನು ಬರೆದಿದ್ದಾರೆ.

ಸಂಸ್ಥೆ ವಿಸರ್ಜನೆಗೆ ಅವರು ಉದ್ಯಮಿಗಳಿಂದ ಬೆದರಿಕೆ ಆಗಲಿ, ಅನಾರೋಗ್ಯ ಸಮಸ್ಯೆ, ಯಾವುದೇ ದೊಡ್ಡ ವೈಯಕ್ತಿಕ ಸಮಸ್ಯೆಗಳು ಹಾಗೂ ಇನ್ನಿತರ ನಿರ್ದಿಷ್ಟ ಕಾರಣ ತಿಳಿಸಿಲ್ಲ. ಕೇವಲ ವರದಿಯ ಹಾನಿ ವಿಚಾರವನ್ನು ಅವರು ಪತ್ರದಲ್ಲಿ ಪ್ರಸ್ತಾಪಿಸಿದ್ದು, ಗೊತ್ತಾಗಿದೆ.

ಸಂಸ್ಥೆ ಉದ್ಯಮ, ಕಂಪನಿಗಳು ಇನ್ನಿತರ ಕ್ಷೇತ್ರದವರ ಮೇಲೆ ಸಂಶೋಧನೆ ನಡೆಸಿ ಬಿಡುಗಡೆ ಮಾಡುವ ವರದಿಯ ತೀವ್ರತೆ ಬಗ್ಗೆ ಅವರು ಮಾತನಾಡಿದ್ದಾರೆ. ಅದರಿಂದ ಉಂಟಾಗುವ ಹಾನಿ, ದೇಶದಲ್ಲಿ ಇಂತಹ ಹಾನಿ, ನಕಾರಾತ್ಮಕ ಬದಲಾವಣೆಗೆ ಕಾರಣವಾಗಬಾರದೆಂದು ಕಾಳಜಿ ದೃಷ್ಟಿಯಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದಿದ್ದಾರೆ.

ಹಿಂಡೆನ್‌ಬರ್ಗ್ ಎನ್ನವುದು ನನ್ನ ಜೀವನದ ಅಧ್ಯಾಯವಾಗಿದೆ. ಅದನ್ನು ಕೇವಲ ಒಂದು ಅಧ್ಯಾಯದಂತೆ ಕಾಣಲು ಬಯಸುತ್ತೇನೆ. ಭವಿಷ್ಯದ ಕಾಳಜಿಯಿಂದ ಹೀಗೆ ಮಾಡಿದ್ದೇನೆ. ಈ ಬಗ್ಗೆ ಇಂತದ್ದೇ ಕಾರಣ ಎಂದು ವ್ಯಾಖ್ಯಾನಿಸುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ವಿಸರ್ಜನೆ ಬಳಿಕ ನಾಥನ್ ಆಂಡರ್ಸನ್‌ಗೆ ಮುಂದೇನು?

ಹಿಂಡೆನ್‌ಬರ್ಗ್ ಸಂಸ್ಥೆಯ ಕೆಲವು ಯೋಜನೆಗಳ ಮಾಹಿತಿ ನಿಯಂತ್ರಿಕರಿಗೆ ಹಸ್ತಾಂತರಿಸಿದ್ದೇನೆ. ಕೆಲವು ಸಲಹೆಗಳನ್ನು ನೀಡಲಾಗಿದ್ದು, ಬುಧವಾರ ತಮ್ಮ ಕಾರ್ಯ ಮುಕ್ತಾಯಗೊಳಿಸಲಾಗಿದೆ.

ಮುಂದಿನ ಆರು ತಿಂಗಳುಗಳಲ್ಲಿ ಹಿಂಡೆನ್‌ಬರ್ಗ್ ಮಾದರಿಯ ವೀಡಿಯೋ ಬಿಡುಗಡೆ ಆಗಲಿವೆ. ಸರಣಿ ರೀತಿಯ ವಿಡಿಯೋಗಳು, ಸಂಸ್ಥೆಯ ತನಿಖೆಯ ಹಾದಿ, ಅಧ್ಯಯ, ಸಂಶೋಧನೆ ನಡೆಸಿದ್ದರ ಕುರಿತು ಮಾಹಿತಿ ಇದರಲ್ಲಿ ಸಿಗಲಿವೆ ಎಂದು ಅವರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+