ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಬಾಮಾಗೆ ವಿಶ್ ಮಾಡಿದ ನರೇಂದ್ರ ಮೋದಿ

By Mahesh
|
Google Oneindia Kannada News

ನವದೆಹಲಿ, ಆಗಸ್ಟ್ 04: ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿ ಹುಟ್ಟುಹಬ್ಬದ ಶುಭ ಹಾರೈಕೆ ಸಲ್ಲಿಸಿದ್ದಾರೆ.

ವಿಶೇಷವೆಂದರೆ ಅಮೆರಿಕ ಅಧ್ಯಕ್ಷರ ಅಧಿಕೃತ ಟ್ವಿಟ್ಟರ್ ಖಾತೆ ಬದಲಿಗೆ ಬರಾಕ್ ಒಬಾಮಾ ಅವರು ಇತ್ತೀಚೆಗೆ ಆರಂಭಿಸಿದ ಖಾಸಗಿ ಟ್ವೀಟ್ ಖಾತೆ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿದ್ದಾರೆ.

ನಿಮ್ಮ ಹುಟ್ಟುಹುಬ್ಬಕ್ಕೆ ಶುಭ ಹಾರೈಕೆಗಳು, ನಿಮ್ಮ ಆರೋಗ್ಯ ಹಾಗೂ ಆಯುಷ್ಯ ವೃದ್ಧಿಗಾಗಿ ನಾನು ಪ್ರಾರ್ಥಿಸುತ್ತೇನೆ @POTUS ಎಂದು ಮೋದಿ ಅವರು ಟ್ವೀಟ್ ಮಾಡಿದ್ದಾರೆ.

ಹವಾಯಿ ದ್ವೀಪದಲ್ಲಿ 1961ರ ಆಗಸ್ಟ್ 4ರಂದು ಜನಿಸಿದ ಒಬಾಮಾ ಯುಎಸ್ ನ 44ನೇ ಅಧ್ಯಕ್ಷರಾಗಿ ಹೊಸ ಯೋಜನೆಯನ್ನು ಘೋಷಿಸಿದ್ದಾರೆ.

ಸ್ಪೈಡರ್ ಮ್ಯಾನ್ ಹಾಗೂ ಕಾನನ್ ದಿ ಬರ್ಬಾರಿಯನ್ ಕಾಮಿಕ್ ಗಳನ್ನು ಸಂಗ್ರಹಿಸುವ ಒಬಾಮಾ ಅವರನ್ನು ಶಾಲಾ ದಿನಗಳಲ್ಲಿ ಬಾಸ್ಕೆಟ್ ಬಾಲ್ ಕೌಶಲ್ಯಕ್ಕಾಗಿ ಓ-ಬಾಂಬರ್ ಎಂದು ಕರೆಸಿಕೊಳ್ಳುತ್ತಿದ್ದರು.

2009ರಲ್ಲಿ ನೊಬೆಲ್ ಶಾಂತಿ ಪಾರಿತೋಷಕ ಪಡೆದ ಒಬಾಮಾ ಅವರು ಮಾರ್ಚ್ 28, 2010ರಂದು ಅಫ್ಘಾನಿಸ್ತಾನಕ್ಕೆ ಅಚ್ಚರಿಯ ಭೇಟಿ ನೀಡಿದ್ದರು.

ಹಲವು ಯೋಜನೆಗಳ ಹರಿಕಾರ ಒಬಾಮಾ

ಹಲವು ಯೋಜನೆಗಳ ಹರಿಕಾರ ಒಬಾಮಾ

ಹಲವು ಯೋಜನೆಗಳ ಹರಿಕಾರ ಒಬಾಮಾ ಅವರು ಟೈಮ್ ಮ್ಯಾಗಜೀನ್ ನಲ್ಲಿ ಎರಡು ಬಾರಿ ವರ್ಷದ ವ್ಯಕ್ತಿಯಾಗಿ ಆಯ್ಕೆಯಾದವರು. ಗೇ ಮದುವೆಗೆ ಅನುಮತಿ ನೀಡಿ ಕ್ರಾಂತಿಗೆ ನಾಂದಿ ಹಾಡಿದರು. ಈಗ ಹುಟ್ಟುಹಬ್ಬದ ಸಂದರ್ಭದಲ್ಲಿ ಹೊಸ ಯೋಜನೆ ಘೋಷಿಸಿದ್ದಾರೆ.

ವಿಶ್ ಮಾಡಿದ ನರೇಂದ್ರ ಮೋದಿ

ನಿಮ್ಮ ಹುಟ್ಟುಹುಬ್ಬಕ್ಕೆ ಶುಭ ಹಾರೈಕೆಗಳು, ನಿಮ್ಮ ಆರೋಗ್ಯ ಹಾಗೂ ಆಯುಷ್ಯ ವೃದ್ಧಿಗಾಗಿ ನಾನು ಪ್ರಾರ್ಥಿಸುತ್ತೇನೆ ಎಂದ ಮೋದಿ.

ಇಂಗಾಲದ ಮಾಲಿನ್ಯ ತಡೆಗಟ್ಟಲು ಯೋಜನೆ

ಇಂಗಾಲದ ಮಾಲಿನ್ಯ ತಡೆಗಟ್ಟಲು ಯೋಜನೆ ಹಾಕಿಕೊಂಡಿರುವ ಯುಎಸ್ಎ 2030ರೊಳಗೆ ಯೋಜನೆ ಫಲ ಸಿಗಲಿದೆ ಎಂದಿದ್ದಾರೆ.

ಯುಎಸ್ ಅಧ್ಯಕ್ಷರ ಅಧಿಕೃತ ಖಾತೆಯಿಂದ ವಿಶ್

ಯುಎಸ್ ಅಧ್ಯಕ್ಷರ ಅಧಿಕೃತ ಖಾತೆಯಿಂದ ಬರಾಕ್ ಒಬಾಮಾ ಅವರಿಗೆ ಶುಭ ಹಾರೈಕೆ.

ಕ್ಲೀನ್ ಪವರ್ ಪ್ಲ್ಯಾನ್ ಬಗ್ಗೆ ಮೋದಿ ಟ್ವೀಟ್

ಕ್ಲೀನ್ ಪವರ್ ಪ್ಲ್ಯಾನ್ ಬಗ್ಗೆ ಒಬಾಮಾರಿಂದ ಸರಣಿ ಟ್ವೀಟ್.

English summary
Prime Minister Narendra Modi on Tuesday wished US President Barack Obama on his birthday. The current and 44th president of United States Barack Obama turned 54 today. Obama was born in 1961 in Honolulu, and at age of 47 he became president of the United States.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X