ವಿಶ್ವದ ಅತೀ ದೊಡ್ಡ 'ಆದಿಯೋಗಿ' ಪ್ರತಿಮೆ ಅನಾವರಣ ಮಾಡಿದ ಮೋದಿ
ಆಧ್ಯಾತ್ಮ ಗುರು ಜಗ್ಗಿ ವಾಸುದೇವ್ ತಮಿಳುನಾಡಿನ ಕೊಯಮುತ್ತೂರಿನಲ್ಲಿ ನಿರ್ಮಿಸಿರುವ 112 ಎತ್ತರದ ಶಿವನ ಮುಖದ ಅನಾವರಣ ನಾಳೆ (ಫೆ.24) ಮಹಾಶಿವರಾತ್ರಿಯ ದಿನ ನಡೆಯಲಿದೆ. ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಇದನ್ನು ಅನಾವರಣ ಮಾಡಲಿದ
ಬೆಂಗಳೂರು, ಫೆಬ್ರವರಿ 24: ಆಧ್ಯಾತ್ಮ ಗುರು ಜಗ್ಗಿ ವಾಸುದೇವ್ ತಮಿಳುನಾಡಿನ ಕೊಯಮುತ್ತೂರಿನಲ್ಲಿ ಸ್ಥಾಪಿಸಿರುವ 112 ಎತ್ತರದ ಶಿವನ ಮುಖವನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಸಂಜೆ 6.30ಕ್ಕೆ ಅನಾವರಣ ಮಾಡಿದರು.
ಈಶ ಫೌಂಡೇಷನ್ ಸ್ಥಾಪಕರಾದ ಸದ್ಗುರು ಜಗ್ಗಿ ವಾಸುದೇವ್ ಕೊಯಮುತ್ತೂರಿನಲ್ಲಿ ತಮ್ಮ ಈಶ ಯೋಗ ಕೇಂದ್ರದಲ್ಲಿ ಈ ಶಿವನ ಮುಖವನ್ನು ಪ್ರತಿಷ್ಠಾಪನೆ ಮಾಡಿದ್ದಾರೆ. ಯೋಗದ ಮೂಲವಾಗಿರುವ 'ಆದಿಯೋಗಿ' ಶಿವನ ಈ ಬೃಹತ್ ಮುಖ ಪ್ರಪಂಚದಲ್ಲೇ ಅತ್ಯಂತ ದೊಡ್ಡ ಮುಖ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.[ಶನಿವಾರ ದೇವಿ ಶೆಟ್ಟಿ ಜೊತೆ ಜಗ್ಗಿ ವಾಸುದೇವ್ ಸಂವಾದ]
ಬೃಹತ್ ಕಾರ್ಯಕ್ರಮ
ಶಿವನ ಮುಖವನ್ನು ಪ್ರಧಾನಿ ನರೇಂದ್ರ ಮೋದಿ ಜ್ಯೋತಿ ಬೆಳಗುವುದರ ಮೂಲಕ ಅನಾವರಣ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಸುಮಾರು 10 ಲಕ್ಷ ಜನ ಪಾಲ್ಗೊಳ್ಳಲಿದ್ದಾರೆ. ಈ ಸಂದರ್ಭ 10 ಲಕ್ಷ ಜನ ಕನಿಷ್ಟ 100 ಜನರಿಗೆ ಯೋಗಭ್ಯಾಸ ಹೇಳಿಕೊಡುವುದಾಗಿ ಪ್ರತಿಜ್ಞೆ ಮಾಡಲಿದ್ದಾರೆ. ಹೀಗೆ 2018ರ ಶಿವರಾತ್ರಿ ಬರುವ ಹೊತ್ತಿಗೆ 1 ಕೋಟಿ ಜನರಿಗೆ ಯೋಗ ಕಲಿಸುವ ಗುರಿ ಹಾಕಿಕೊಳ್ಳಲಾಗಿದೆ.

ರಾತ್ರಿ ಜಾಗರಣೆ
ಶಿವರಾತ್ರಿಯಂದು ಅಂದರೆ ನಾಳೆ (ಫೆ. 24) ಸಂಜೆ 6 ಗಂಟೆ ಕಾರ್ಯಕ್ರಮ ಆರಂಭವಾಗಲಿದ್ದು ಜಗ್ಗಿ ವಾಸುದೇವ್ ಪ್ರವಚನ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ. ಮರುದಿನ ಬೆಳಗ್ಗೆ 6ಗಂಟೆಗೆ ಕಾರ್ಯಕ್ರಮ ಮುಕ್ತಾಯಗೊಳ್ಳಲಿದೆ.[ಶಿವನ ಸತ್ಯ ಪರಿಚಯ, ಶಿವರಾತ್ರಿಯ ಆಧ್ಯಾತ್ಮಿಕ ರಹಸ್ಯ]

ಮಯೂರಿ ನೃತ್ಯ
ಕಾರ್ಯಕ್ರಮದಲ್ಲಿ ಖ್ಯಾತ ಹಿನ್ನಲೆ ಗಾಯಕ ಕೈಲಾಶ್ ಖೇರ್, ರಾಜಸ್ಥಾನದ ಕಟ್ಲೆ ಖಾನ್ ಮತ್ತು ಇಶಾ ಕೇಂದ್ರದ ಕಲಾವಿದರು ಕಾರ್ಯಕ್ರಮಗಳನ್ನು ನೀಡಲಿದ್ದಾರೆ. ವಿಶೇಷ ಆಕರ್ಷಣೆಯಾಗಿ ರಘುದೀಕ್ಷಿತ್ ಪತ್ನಿ ಹಾಗೂ ಖ್ಯಾತ ನೃತ್ಯ ಕಲಾವಿದೆ ಮಯೂರಿಯವರ ನೃತರುತ್ಯ ತಂಡದವರೂ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. (ಚಿತ್ರ ಕೃಪೆ: ನೃತರುತ್ಯ ವೆಬ್ಸೈಟ್)

112 ದಾರಿಗಳ ರೂಪ
ತನ್ನನ್ನು ತಾನು ಮುಕ್ತಿ ಹಾಗೂ ಯೋಗವಿದ್ಯೆ ಮೂಲಕ ಅರಿತುಕೊಳ್ಳುವ 112 ದಾರಿಗಳ ಪ್ರತೀಕವಾಗಿ ಈ 112 ಅಡಿ ಎತ್ತರದ ಶಿವನ ಮುಖವನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಈಗಾಗಲೇ ಪ್ರವಾಸಿ ತಾಣವಾಗಿ ಶಿವನ ಪ್ರತಿಮೆಯನ್ನು ಪ್ರವಾಸೋದ್ಯಮ ಸಚಿವಾಲಯ 'ಇನ್ ಕ್ರೆಡಿಬಲ್ ಇಂಡಿಯಾ' ಕಾರ್ಯಕ್ರಮದಲ್ಲಿ ಸೇರಿಸಿಕೊಂಡಿದೆ.

ನೇರಪ್ರಸಾರ
ಬಹುಶಃ ಈ ವರ್ಷ ದೇಶದಲ್ಲಿ ನಡೆಯುವ ಮಹಾಶಿವರಾತ್ರಿ ಕಾರ್ಯಕ್ರಮಗಳ ಪೈಕಿ ಇದೇ ಅತೀ ದೊಡ್ಡ ಕಾರ್ಯಕ್ರಮವಾಗುವ ಸಾಧ್ಯತೆ ಇದೆ. ಮನೆಗಳಲ್ಲೇ ಇದ್ದು ಕಣ್ತುಂಬಿಕೊಳ್ಳುವವರಿಗಾಗಿ 7 ಭಾಷೆಗಳಲ್ಲಿ ಹಾಗೂ 23ಕ್ಕೂ ಹೆಚ್ಚು ಟಿವಿ ವಾಹಿನಿಗಳಲ್ಲಿ ಕಾರ್ಯಕ್ರಮ ನೇರ ಪ್ರಸಾರಗೊಳ್ಳಲಿದೆ.

ಭರ್ಜರಿ ಕಾರ್ಯಕ್ರಮ
ಫೆಬ್ರವರಿ 21, 22 ಮತ್ತು 23 ರಂದು ಈಶ ಯೋಗ ಧ್ಯಾನ ಕೇಂದ್ರ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ 'ಯಕ್ಷ 2017' ಕಾರ್ಯಕ್ರಮ ಇಂದು ಸಮಾರೋಪಗೊಳ್ಳುತ್ತಿದೆ. ಇದರಲ್ಲಿ ಭಾರತದ ಹಿರಿಯ ನೃತ್ಯ, ಸಂಗೀತ ಕಲಾವಿದರು ಪಾಲ್ಗೊಂಡಿದ್ದಾರೆ. ಕರ್ನಾಟಕದ ಮೈಸೂರಿನ ಕಲಾವಿದರಾದ ಡಾ. ಮೈಸೂರು ಮಂಜುನಾಥ್ ಮತ್ತು ಡಾ. ಮೈಸೂರು ನಾಗರಾಜ್ ಅವರೂ ಕಾರ್ಯಕ್ರಮದಲ್ಲಿ ವಯೋಲಿನ್ ವಾದನ ನಡೆಸಿಕೊಟ್ಟಿದ್ದಾರೆ.












Click it and Unblock the Notifications