Get Updates
Get notified of breaking news, exclusive insights, and must-see stories!

ಚಿತ್ರಗಳಲ್ಲಿ ಸಂಸತ್ ದಾಳಿ ಹುತಾತ್ಮರಿಗೆ ನಮನ

ನವದೆಹಲಿ, ಡಿ.13 : 2001 ರಲ್ಲಿ ಸಂಸತ್‌ ಭವನದ ಮೇಲೆ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದವರಿಗೆ ಶನಿವಾರ ಪಕ್ಷಭೇದ ಮರೆತು ವಿವಿಧ ಪಕ್ಷಗಳ ನಾಯಕರು ಗೌರವ ಸಲ್ಲಿಸಿದರು. ಪ್ರಜಾಪ್ರಭುತ್ವದ ದೇಗುಲದ ರಕ್ಷಣೆಗಾಗಿ ಪ್ರಾಣ ತ್ಯಾಗ ಮಾಡಿದ ವೀರರಿಗೆ ನನ್ನದೊಂದು ಸೆಲ್ಯೂಟ್‌ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್‌ ಮಾಡಿದ್ದಾರೆ.

ದೆಹಲಿಯ ಸಂಸತ್ ಭವನದಲ್ಲಿ ಶನಿವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ, ಸ್ಪೀಕರ್‌ ಸುಮಿತ್ರಾ ಮಹಾಜನ್‌, ಮಾಜಿ ಪ್ರಧಾನಿ ಮನಮೋಹನ್‌ಸಿಂಗ್‌, ಬಿಜೆಪಿ ಹಿರಿಯ ನಾಯಕ ಎಲ್‌.ಕೆ .ಅಡ್ವಾಣಿ ಸೇರಿದಂತೆ ಹಲವು ನಾಯಕರು ಹುತಾತ್ಮರಿಗೆ ಪುಷ್ಟ ನಮನ ಸಲ್ಲಿಸಿದರು. [ಡಿ.13ರ ಸಂಸತ್ ದಾಳಿಯನ್ನು ಮರೆಯಲು ಸಾಧ್ಯವೇ?]

2001ರ ಡಿಸೆಂಬರ್‌ 13 ರಂದು ಐವರು ಉಗ್ರರು ಸಂಸತ್‌ ಆವರಣ ಪ್ರವೇಶಿಸಿ ಗುಂಡಿನ ದಾಳಿ ನಡೆಸಿದ್ದರು. ಐವರು ದೆಹಲಿ ಪೊಲೀಸರು, ಮೂವರು ಪಾರ್ಲಿಮೆಂಟ್‌ ಸಿಬ್ಬಂದಿ ಸೇರಿದಂತೆ ಒಟ್ಟು ಒಂಭತ್ತು ಮಂದಿ ಉಗ್ರರ ಗುಂಡಿಗೆ ಬಲಿಯಾಗಿದ್ದರು. ಚಿತ್ರಗಳಲ್ಲಿ ಹುತಾತ್ಮರಿಗೆ ನಮನ [ಪಿಟಿಐ ಚಿತ್ರಗಳು]

ಹುತಾತ್ಮರಿಗೆ ಪ್ರಧಾನಿ ಮೋದಿ ನಮನ

ಹುತಾತ್ಮರಿಗೆ ಪ್ರಧಾನಿ ಮೋದಿ ನಮನ

2001 ರಲ್ಲಿ ಸಂಸತ್‌ ಭವನದ ಮೇಲೆ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದವರಿಗೆ ಪ್ರಧಾನಿ ನರೇಂದ್ರ ಮೋದಿ ನಮನ ಸಲ್ಲಿಸಿದರು.

ಯೋಧರಿಗೆ ನಮನ ಸಲ್ಲಿಸಿದ ಸ್ಪೀಕರ್

ಯೋಧರಿಗೆ ನಮನ ಸಲ್ಲಿಸಿದ ಸ್ಪೀಕರ್

ಸಂಸತ್ ದಾಳಿಗೆ ಇಂದು 13 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ವೀರ ಯೋಧರಿಗೆ ಸರ್ಕಾರಿ ಗೌರವ ಸಲ್ಲಿಸಲಾಯಿತು. ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್ ಯೋಧರಿಗೆ ನಮನ ಸಲ್ಲಿಸಿದರು.

ಮಾಜಿ ಪ್ರಧಾನಿ ಸಿಂಗ್‌ರಿಂದ ನಮನ

ಮಾಜಿ ಪ್ರಧಾನಿ ಸಿಂಗ್‌ರಿಂದ ನಮನ

2001 ರಲ್ಲಿ ಸಂಸತ್‌ ಭವನದ ಮೇಲೆ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದವರಿಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಮನ ಸಲ್ಲಿಸಿದರು.

ಸೋನಿಯಾ ಗಾಂಧಿ ಅವರಿಂದ ನಮನ

ಸೋನಿಯಾ ಗಾಂಧಿ ಅವರಿಂದ ನಮನ

ಪ್ರಜಾಪ್ರಭುತ್ವದ ದೇಗುಲದ ರಕ್ಷಣೆಗಾಗಿ ಪ್ರಾಣ ತ್ಯಾಗ ಮಾಡಿದ ವೀರರಿಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನಮನ ಸಲ್ಲಿಸಿದರು.

ಯೋಧರಿಗೆ ಪೊಲೀಸ್ ಸಿಬ್ಬಂದಿ

ಯೋಧರಿಗೆ ಪೊಲೀಸ್ ಸಿಬ್ಬಂದಿ

2001ರ ಡಿಸೆಂಬರ್‌ 13 ರಂದು ಐವರು ಉಗ್ರರು ಸಂಸತ್‌ ಆವರಣ ಪ್ರವೇಶಿಸಿ ಗುಂಡಿನ ದಾಳಿ ನಡೆಸಿದ್ದರು. ಐವರು ದೆಹಲಿ ಪೊಲೀಸರು, ಮೂವರು ಪಾರ್ಲಿಮೆಂಟ್‌ ಸಿಬ್ಬಂದಿ ಸೇರಿದಂತೆ ಒಟ್ಟು ಒಂಭತ್ತು ಮಂದಿ ಉಗ್ರರ ಗುಂಡಿಗೆ ಬಲಿಯಾಗಿದ್ದರು. ಹುತಾತ್ಮರಾಧ ಯೋಧರಿಗೆ ಇಂದು ಪೊಲೀಸರು ನಮನ ಸಲ್ಲಿಸಿದರು.

ಯೋಧನಿಗೆ ಕುಟುಂಬದವರ ನಮನ

ಯೋಧನಿಗೆ ಕುಟುಂಬದವರ ನಮನ

2001ರ ಸಂಸತ್ ದಾಳಿಯಲ್ಲಿ ಮೃತಪಟ್ಟ ಯೋಧ ಜೆ.ಪಿ.ಯಾದವ್ ಅವರಿಗೆ ಅವರ ಕುಟುಂಬದವರು ಶನಿವಾರ ನಮನ ಸಲ್ಲಿಸಿದರು.

ಯೋಧರಿಗೆ ನಮನ ಸಲ್ಲಿಸಲು ಬಂದ ಗಣ್ಯರು

ಯೋಧರಿಗೆ ನಮನ ಸಲ್ಲಿಸಲು ಬಂದ ಗಣ್ಯರು

ಪ್ರಜಾಪ್ರಭುತ್ವದ ದೇಗುಲದ ರಕ್ಷಣೆಗಾಗಿ ಪ್ರಾಣ ತ್ಯಾಗ ಮಾಡಿದ ವೀರರಿಗೆ ನಮನ ಸಲ್ಲಿಸಲು ಆಗಮಿಸಿದ ಉಪರಾಷ್ಟ್ರಪತಿ, ಪ್ರಧಾನಿ, ಸ್ಪೀಕರ್ ಮತ್ತು ಮಾಜಿ ಪ್ರಧಾನಿ ಮನಮೋಹನ್ ಸಿಂಗ್.

ಅಡ್ವಾಣಿ ಅವರಿಂದ ನಮನ ಸಲ್ಲಿಕೆ

ಅಡ್ವಾಣಿ ಅವರಿಂದ ನಮನ ಸಲ್ಲಿಕೆ

2001 ರಲ್ಲಿ ಸಂಸತ್‌ ಭವನದ ಮೇಲೆ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದವರಿಗೆ ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ನಮನ ಸಲ್ಲಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+