ನೇತಾಜಿ ಕುಟುಂಬದವರನ್ನು ಭೇಟಿ ಮಾಡುವೆ: ಮೋದಿ
ನವದೆಹಲಿ, ಸೆಪ್ಟೆಂಬರ್. 20: ಪ್ರಧಾನಮಂತ್ರಿ ನರೇಂದ್ರ ಮೋದಿ ಭಾನುವಾರ ತಮ್ಮ 'ಮನ್ ಕಿ ಬಾತ್ ' ನಲ್ಲಿ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದರು. ಶೀಘ್ರವೇ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಕುಟುಂಬದ 50 ಜನ ಸದಸ್ಯರನ್ನು ಭೇಟಿಯಾಗಯತ್ತೇನೆ ಎಂದು ಹೇಳಿದರು.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತಾಜಿಗೆ ಸಂಬಂಧಿಸಿದ ಕಡತಗಳನ್ನು ಬಹಿರಂಗ ಮಾಡಿದ ನಂತರ ಮೋದಿ ಈ ಹೇಳಿಕೆ ನೀಡಿರುವುದು ಕುತೂಹಲ ಕೆರಳಿಸಿದೆ.[ಕಡತದೊಳಗಿನ ಸತ್ಯ: ನೇತಾಜಿ 1945ರ ನಂತರವೂ ಬದುಕಿದ್ದರು]

ಕಾಂಗ್ರೆಸ್ ಮೋದಿ ಅವರ ಮನ್ ಕೀ ಬಾತ್ ಕಾರ್ಯಕ್ರಮದ ಬಗ್ಗೆ ಟೀಕೆ ಮಾಡಿತ್ತು. ಆದರೆ ಮೋದಿ ತಮ್ಮ ಎಂದಿನ ನಡೆಯನ್ನು ಮುಂದುವರಿಸಿಕೊಂಡು ಹೋಗಿದ್ದಾರೆ. ಸ್ವಚ್ಛ ಭಾರತದ ಬಗ್ಗೆ ಮತ್ತೆ ಮಾತನಾಡಿದ ಮೋದಿ ಎಲ್ಲ ಗ್ರಾಮಗಳಲ್ಲೂ ಕಸದ ತೊಟ್ಟಿ ಇಡಬೇಕು ಎಂದು ಹೇಳಿದರು.
ಮೋದಿ ಮಾತಿನ ಹೈಲೈಟ್ಸ್ ಇಲ್ಲಿದೆ
* 30 ಲಕ್ಷ ಜನ ಗ್ಯಾಸ್ ಸಬ್ಸಿಡಿ ತ್ಯಜಿಸಿದ್ದೀರಿ, ಇದು ನಿಜವಾಗಿಯೂ ಸದ್ದಿಲ್ಲದೇ ನಡೆಯುತ್ತಿರುವ ಕ್ರಾಂತಿ.[ನೇತಾಜಿಗೆ ಸಂಬಂಧಿಸಿದ ಬಹಿರಂಗ]
* ಸಮಾಜ ಮತ್ತು ಸಾಮಾಜಿಕ ಚಿಂತನೆಯನ್ನು ಮುಕ್ತವಾಗಿ ಹಂಚಿಕೊಳ್ಳಲು ಇದಕ್ಕಿಂತ ಉತ್ತಮ ವೇದಿಕೆ ಮತ್ತೊಂದಿಲ್ಲ.
* ಖಾದಿ ಪಾರ್ ನೇಶನ್ ಎಂಬುದನ್ನು ಖಾದಿ ಫಾರ್ ಫ್ಯಾಷನ್ ಎಂದು ಬದಲಾಯಿಸಿಕೊಳ್ಳಬೇಕಿದೆ.
* ಸ್ವಾತಂತ್ರ್ಯ ಮತ್ತು ಸ್ವಚ್ಛತೆಯಲ್ಲಿ ನನ್ನ ಆಯ್ಕೆ ಸ್ವಚ್ಛತೆಗೆ.
* ಮಕ್ಕಳಲ್ಲಿ ಪ್ರಶ್ನೆ ಮಾಡುವ ಗುಣ ಬೆಳೆಸುವ ಜವಾಬ್ದಾರಿ ನಮ್ಮ ಎಲ್ಲರ ಮೇಲಿದೆ.
* ಚುನಾವಣಾ ಆಯೋಗ ಉತ್ತಮ ಕಾರ್ಯ ನಿರ್ವಹಿಸುತ್ತಿದೆ ಮತ್ತು ಮತದಾರ ಸ್ನೇಹಿಯಾಗಿದೆ.












Click it and Unblock the Notifications