ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜೀವ್ ಗಾಂಧಿಗೆ ಗೌರವ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ

|
Google Oneindia Kannada News

ನವದೆಹಲಿ, ಮೇ 21: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ 28ನೆಯ ಪುಣ್ಯತಿಥಿಯ ದಿನವಾದ ಮಂಗಳವಾರ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗೌರವ ಸಲ್ಲಿಸಿದ್ದಾರೆ.

ಭಯೋತ್ಪಾದನಾ ದಾಳಿಯಲ್ಲಿ ರಾಜೀವ್ ಗಾಂಧಿ ಮೃತಪಟ್ಟು 28 ವರ್ಷಗಳಾದ ಸಂದರ್ಭದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ದೆಹಲಿಯ ವೀರ ಭೂಮಿಯಲ್ಲಿರುವ ರಾಜೀವ್ ಅವರ ಸ್ಮಾರಕಕ್ಕೆ ತೆರಳಿ ಗೌರವ ಸಮರ್ಪಿಸಿದರು.

ತಂದೆ ರಾಜೀವ್ ರನ್ನು ನೆನೆದು ಕಂಬನಿ ಮಿಡಿದ ಪ್ರಿಯಾಂಕಾ, ರಾಹುಲ್ತಂದೆ ರಾಜೀವ್ ರನ್ನು ನೆನೆದು ಕಂಬನಿ ಮಿಡಿದ ಪ್ರಿಯಾಂಕಾ, ರಾಹುಲ್

ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಮತ್ತು ಕಾಂಗ್ರೆಸ್‌ನ ಅನೇಕ ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

1991ರಲ್ಲಿ ತಮಿಳುನಾಡಿನ ಶ್ರೀಪೆರಂಬದೂರು ಪಟ್ಟಣದಲ್ಲಿ ಸಮಾವೇಶದಲ್ಲಿ ಭಾಗಿಯಾಗಿದ್ದ ರಾಜೀವ್ ಗಾಂಧಿ ಅವರನ್ನು ಅಭಿನಂದಿಸಲು ಬಂದಿದ್ದ ಎಲ್‌ಟಿಟಿಇ ಸಂಘಟನೆಯ ಮಾನವ ಬಾಂಬ್ ಮಹಿಳೆ, ತನ್ನನ್ನು ಸ್ಫೋಟಿಸಿಕೊಳ್ಳುವ ಮೂಲಕ ರಾಜೀವ್ ಅವರನ್ನು ಹತ್ಯೆ ಮಾಡಿದ್ದರು. ರಾಜೀವ್ ಗಾಂಧಿ ಅವರ ಪುಣ್ಯತಿಥಿಯ ಈ ದಿನವನ್ನು ಭಯೋತ್ಪಾದನಾ ವಿರೋಧಿ ದಿನವನ್ನಾಗಿ ಕೂಡ ಆಚರಣೆ ಮಾಡಲಾಗುತ್ತಿದೆ.

ರಾಜೀವ್ ನೆನೆದ ಮೋದಿ

ಇತ್ತೀಚೆಗೆ ಚುನಾವಣಾ ಪ್ರಚಾರದ ವೇಳೆ ರಾಜೀವ್ ಗಾಂಧಿ ಅವರನ್ನು ನಂಬರ್ ಒನ್ ಭ್ರಷ್ಟಾಚಾರಿ ಎಂದು ಟೀಕಿಸಿದ್ದ ಪ್ರಧಾನಿ ನರೇಂದ್ರ ಮೋದಿ ಕೂಡ, ರಾಜೀವ್ ಅವರನ್ನು ಸ್ಮರಿಸಿದ್ದಾರೆ. ರಾಜೀವ್ ಗಾಂಧಿ ಅವರು ಕುಟುಂಬದೊಂದಿಗೆ ದ್ವೀಪಕ್ಕೆ ತೆರಳಿ ಮಜಾ ಮಾಡಲು ಐಎನ್‌ಎಸ್ ವಿರಾಟ್ ಯುದ್ಧನೌಕೆಯನ್ನು ಬಳಸಿಕೊಂಡಿದ್ದರು ಎಂದು ಮೋದಿ ಆರೋಪಿಸಿದ್ದರು.

ಮಮತಾ ಬ್ಯಾನರ್ಜಿ ಗೌರವ

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಅವರ ಪುಣ್ಯ ತಿಥಿಯ ದಿನದಂದು ಅತ್ಯಂತ ಪ್ರೀತಿಯಿಂದ ಹೃದಯಪೂರ್ವಕವಾಗಿ ನೆನೆಯುತ್ತಿರುವುದಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟ್ವೀಟ್ ಮಾಡಿದ್ದಾರೆ.

ರಾಜೀವ್ ಗಾಂಧಿ ಹಂತಕರ ಬಿಡುಗಡೆಗೆ ಸರ್ಕಾರ ಬದ್ಧ : ಒಪಿಎಸ್ ರಾಜೀವ್ ಗಾಂಧಿ ಹಂತಕರ ಬಿಡುಗಡೆಗೆ ಸರ್ಕಾರ ಬದ್ಧ : ಒಪಿಎಸ್

ಎಲ್ಲರಿಗೂ ದಾರಿದೀಪವಾಗಲಿ

ದೇಶದ ರಾಜಕಾರಣದಲ್ಲಿ ಮರೆಯಲಾಗದ ಹೆಸರು ರಾಜೀವ್ ಗಾಂಧಿ ಅವರದ್ದು. ದೇಶವನ್ನು ಮನ್ನಡೆಸುವ ಹಾದಿಯಲ್ಲಿ ಹುತಾತ್ಮರಾದ ರಾಜೀವ್ ಗಾಂಧಿ ಅವರ ಬಲಿದಾನವನ್ನು ಪ್ರತಿಯೊಬ್ಬರೂ ಸ್ಮರಿಸಿಕೊಳ್ಳಬೇಕು ಅವರ ಚಿಂತನೆ ಎಲ್ಲರಿಗೂ ದಾರಿದೀಪವಾಗಲಿ ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

Array

21ನೇ ಶತಮಾನಕ್ಕೆ ಕೊಂಡೊಯ್ದವರು

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ತಮ್ಮ ದೃಷ್ಟಿಕೋನದೆಡೆಗಿನ ಬದ್ಧತೆಯು ಲಕ್ಷಾಂತರ ಯುವಜನರಿಗೆ ದಾರಿದೀಪವಾಗಿದೆ. ತಂತ್ರಜ್ಞಾನವನ್ನು ಬಳಸಿಕೊಂಡು ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡ ಅವರು ಕೊನೆಗೂ ಭಾರತವನ್ನು 21ನೇ ಶತಮಾನದ ದೇಶವನ್ನಾಗಿ ಮಾಡಿದರು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೆನಪಿಸಿಕೊಂಡಿದ್ದಾರೆ.

1984ರ ಸಿಖ್ ಹತ್ಯಾಕಾಂಡ : ರಾಜೀವ್ ಗಾಂಧಿ ನಿಜಕ್ಕೂ ಆದೇಶ ನೀಡಿದ್ರಾ?1984ರ ಸಿಖ್ ಹತ್ಯಾಕಾಂಡ : ರಾಜೀವ್ ಗಾಂಧಿ ನಿಜಕ್ಕೂ ಆದೇಶ ನೀಡಿದ್ರಾ?

ಕನಸುಗಾರ ರಾಜೀವ್

ರಾಜೀವ್ ಗಾಂಧಿ ಅವರನ್ನು ಭಯೋತ್ಪಾದನಾ ದಾಳಿ ಚಿಕ್ಕ ವಯಸ್ಸಿನಲ್ಲಿಯೇ ಬಲಿ ತೆಗೆದುಕೊಂಡಿತು. ಅವರ ಸಾವು ರಾಜಕೀಯ, ನಾಯಕತ್ವ ಮತ್ತು ಭಾರತದ ಅಭಿವೃದ್ಧಿಯಲ್ಲಿ ಬಹುದೊಡ್ಡ ನಿರ್ವಾತವನ್ನು ಸೃಷ್ಟಿಸಿತು. ಇಂದು 21ನೆಯ ಶತಮಾನದಲ್ಲಿ ಭಾರತದ ಕನಸು ಕಂಡ ಮಹಾನ್ ನಾಯಕನಿಗೆ ಗೌರವ ಸಲ್ಲಿಸುವ ದಿನ. ಇದೇ ವೇಳೆ ಅವರು ದೇಶಕ್ಕಾಗಿ ನೀಡಿದ ಕೊಡುಗೆಯನ್ನು ನೆನಪಿಸಿಕೊಳ್ಳುವ ದಿನ ಎಂದು ರಾಜೀವ್ ಗಾಂಧಿ ಅವರಿಗೆ ಆಪ್ತರಾಗಿದ್ದ ಸ್ಯಾಮ್ ಪಿತ್ರೋಡಾ ಟ್ವೀಟ್ ಮಾಡಿದ್ದಾರೆ.

English summary
Prime Minister Narendra Modi, Chief Minister HD Kumaraswamy, former Chief Minister Siddaramaiah and many more leaders remembered and pays tribute to former Prime Minister Rajiv Gandhi on his 28th death anniversary.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X