'ನಾನಲ್ಲ, ನಾವು': ಐಟಿ ಜನರ ಜೊತೆ ನರೇಂದ್ರ ಮೋದಿ ಸಂವಾದ
ನವದೆಹಲಿ, ಅಕ್ಟೋಬರ್ 24: 'ನಾನಲ್ಲ ನಾವು' (ಮೇ ನಹಿಂ ಹಮ್) ಪೋರ್ಟಲ್ ಮತ್ತು ಆಪ್ ಅನ್ನು ಇಂದು ದೆಹಲಿಯಲ್ಲಿ ಲೋಕಾರ್ಪಣೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಐಟಿ ಕ್ಷೇತ್ರದ ಯುವಜನರ ಜೊತೆ ಸಂವಾದ ನಡೆಸಿದರು.
ತಂತ್ರಜ್ಞಾನವು ಭಾರತವನ್ನು ಇನ್ನಷ್ಟು ಭವ್ಯ ವಾಗಿಸುತ್ತದೆ, ತಂತ್ರಜ್ಞಾನವು ಜನರ ಜೀವನವನ್ನು ಇನ್ನಷ್ಟು ಸುಲಭ ಮಾಡುತ್ತದೆ ಎಂದು ಮೋದಿ ಅವರು ಇದೇ ಸಮಯದಲ್ಲಿ ಹೇಳಿದರು.
ಸರ್ಕಾರವು ಯೋಜನೆಗಳು, ಬಜೆಟ್‌ಗಳನ್ನು ಮಂಡಿಸಬಹುದು ಆದರೆ ಸಾರ್ವಜನಿಕ ಪಾಲ್ಗೊಳ್ಳುವಿಕೆ ಸಾಧ್ಯವಾಗದೇ ಹೋದರೆ ಅವೆಲ್ಲವೂ ವ್ಯರ್ಥವಾಗುತ್ತವೆ ಎಂದು ಮೋದಿ ಅಭಿಪ್ರಾಯಪಟ್ಟರು.

ಯುವಕರು ತಮ್ಮ ಸೌಕರ್ಯ ವಲಯವನ್ನು ಬಿಟ್ಟು ಹೊರಗೆ ಬಂದು, ಸಾರ್ವಜನಿಕರ ಉದ್ದಾರಕ್ಕಾಗಿ ಶ್ರಮಪಡಬೇಕಾಗಿದೆ. ಆಗ ಮಾತ್ರವೇ ದೇಶದ ಮತ್ತು ಅದರ ಜನರ ಅಭಿವೃದ್ಧಿ ಸಾಧ್ಯ ಎಂದು ಮೋದಿ ಹೇಳಿದರು.
ಸ್ವಯಂ ಸೇವಕರ ಪಾಲ್ಗೊಳ್ಳುವಿಕೆಯಿಂದ ಕೃಷಿ ಕ್ಷೇತ್ರ, ಸ್ವಚ್ಛತಾ ಕ್ಷೇತ್ರ, ಮೂಲಭೂತ ಅಭಿವೃದ್ಧಿ, ವೈದ್ಯಕೀಯ ಕ್ಷೇತ್ರ ಹೀಗೆ ಎಲ್ಲ ಕ್ಷೇತ್ರಗಳಲ್ಲಿ ಬೃಹತ್ ಆದುದ್ದನ್ನು ಸಾಧಿಸಲು ಸಾಧ್ಯ ಎಂದು ಮೋದಿ ಯುವಕರನ್ನು ಹುರಿದುಂಬಿಸಿದರು.
ಮೋದಿ ಅವರು ಇದೇ ಸಮಯ ದೇಶದ ವಿವಿದೆಡೆಗಳ ಯುವ ಜನರೊಂದಿಗೆ ಸಂವಾದ ನಡೆಸಿದರು. ಮೋದಿ ಅವರೊಂದಿಗೆ ಇನ್ಫೋಸಿಸ್ ಫೌಂಡೇಶನ್‌ನ ಮುಖ್ಯಸ್ಥೆ ಕನ್ನಡತಿ ಸುಧಾ ಮೂರ್ತಿ ಅವರು ಸಹ ಸಂವಾದ ನಡೆಸಿದರು.












Click it and Unblock the Notifications