ಮಂಗಳವಾರದ ಸಮಗ್ರ ಸುದ್ದಿಗಳ ಮೇಲೆ ರೌಂಡಪ್

Written By:
Subscribe to Oneindia Kannada

ನವದೆಹಲಿ, ಆಗಸ್ಟ್, 30: ಮಂಗಳವಾರ ದೇಶದಲ್ಲಿ ಸುದ್ದಿಗೇನೂ ಬರವಿಲ್ಲ. ಪ್ರಧಾನಿ ನರೇಂದ್ರ ಮೋದಿ ತಮ್ಮ ತವರು ಗುಜರಾತ್ ನ ಪ್ರವಾಸದಲ್ಲಿ ಇದ್ದರು. ಉತ್ತರ ಭಾರತದಲ್ಲಿ ಮಳೆ ಮುಂದುವರಿದಿದ್ದು ದೇಶದಲ್ಲೆಡೆ ನಿಧಾನವಾಗಿ ಗಣೇಶ ಹಬ್ಬದ ಸಂಭ್ರಮ ಮನೆ ಮಾಡುತ್ತಿದೆ.

ಗುಜರಾತ್ ನಲ್ಲಿನ ಮಹತ್ವಾಕಾಂಕ್ಷಿಯ ನೀರಾವರಿ ಯೋಜನೆಯ ಮೊದಲ ಹಂತಕ್ಕೆ ಮಂಗಳವಾರ ನರೇಂದ್ರ ಮೋದಿ ಚಾಲನೆ ನೀಡಿದರು. ಯುಎಸ್ ಸಕ್ರೆಟರಿ ಜಾನ್ ಕೆರಿ ಮತ್ತು ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ನವದೆಹಲಿಯಲ್ಲಿ ಸಮಾಲೋಚನೆ ನಡೆಸಿದರು.[ಮೈಸೂರು ದಸರಾ ಆನೆಗಳ ತಾಕತ್ತು ಚಿತ್ರಗಳಲ್ಲಿ ನೋಡಿಕೊಂಡು ಬನ್ನಿ]

ಪ್ರಪಂಚಕ್ಕೆ ಪಿಡುಗಾಗಿ ಪರಿಣಮಿಸಿರುವ ಭಯೋತ್ಪಾದನೆ ನಿಗ್ರಹಕ್ಕೆ ಅಮೆರಿಕ ಮತ್ತಷ್ಟು ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಸುಷ್ಮಾ ಸ್ವರಾಜ್ ಸಲಹೆ ನೀಡಿದ್ದಾರೆ. ಸಭೆ ಬಳಿಕ ಇಬ್ಬರು ಜಂಟಿ ಸುದ್ದಿಗೋಷ್ಠಿ ನಡೆಸಿದರು.

ಭಾರತದ ಉಪಪ್ರಧಾನಿ ಹಮೀದ್ ಅನ್ಸಾರಿ ಮತ್ತು ಪತ್ನಿ ಸಲ್ಮಾ ಅನ್ಸಾರಿ ತಿರುವನಂತಪುರದ ಶಾಂತಿಗಿರಿ ಆಶ್ರಮಕ್ಕೆ ಭೇಟಿ ನೀಡಿದ್ದರು. ಬೆಂಗಳೂರಿನಲ್ಲಿ ಗಣೇಶ ಹಬ್ಬ ಕಳೆಗಟ್ಟುತ್ತಿದ್ದು ಕುರಿಗಳ ಹಿಂಡು ಗಣೇಶ ಮೂರ್ತಿಸಾಲಿನ ಎದುರು ಹಾದು ಹೋದಾಗ ತೆಗೆದ ಚಿತ್ರ. ನರ್ಮದಾ ನದಿ ಕಣಿವೆ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು ಜಬಲ್ ಪುರದಲ್ಲಿ ಜಲಾವೃತಗೊಂಡ ದೇವಾಲಯಗಳು, ಇನ್ನಷ್ಟು ಸುದ್ದಿಗಳು ಚಿತ್ರಗಳಲ್ಲಿ...

ನರೇಂದ್ರ ಮೋದಿ ಚಾಲನೆ

ನರೇಂದ್ರ ಮೋದಿ ಚಾಲನೆ

ಗುಜರಾತ್ ನಲ್ಲಿನ ಮಹತ್ವಾಕಾಂಕ್ಷಿಯ ನೀರಾವರಿ ಯೋಜನೆಯ ಮೊದಲ ಹಂತಕ್ಕೆ ಮಂಗಳವಾರ ಮೋದಿ ಚಾಲನೆ ನೀಡಿದರು. ಗುಜರಾತ್ ಉಪ ಮುಖ್ಯಮಂತ್ರಿ ನಿತಿನ್ ಪಟೇಲ್ ಮೋದಿ ಜತೆಗಿದ್ದರು.

ಸಭೆಗೆ ಹೊರಡುವ ಮುನ್ನ

ಸಭೆಗೆ ಹೊರಡುವ ಮುನ್ನ

ಯುಎಸ್ ಸಕ್ರೆಟರಿ ಜಾನ್ ಕೆರಿ ಮತ್ತು ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ನವದೆಹಲಿಯಲ್ಲಿ ಸಮಾಲೋಚನಾ ಸಭೆ ನಡೆಸಿದರು.

ಹಮೀದ್ ಪ್ರವಾಸ

ಹಮೀದ್ ಪ್ರವಾಸ

ಭಾರತದ ಉಪಪ್ರಧಾನಿ ಹಮೀದ್ ಅನ್ಸಾರಿ ಮತ್ತು ಪತ್ನಿ ಸಲ್ಮಾ ಅನ್ಸಾರಿ ತಿರುವನಂತಪುರದ ಶಾಂತಿಗಿರಿ ಆಶ್ರಮಕ್ಕೆ ಭೇಟಿ ನೀಡಿದ್ದರು.

ನಮರ್ದಾ ಪ್ರವಾಹ

ನಮರ್ದಾ ಪ್ರವಾಹ

ನರ್ಮದಾ ನದಿ ಕಣಿವೆ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು ಜಬಲ್ ಪುರದಲ್ಲಿ ಜಲಾವೃತಗೊಂಡ ದೇವಾಲಯಗಳು.

ಗಣೇಶ ವ್ಯಾಪಾರ

ಗಣೇಶ ವ್ಯಾಪಾರ

ಬೆಂಗಳೂರಿನಲ್ಲಿ ಗಣೇಶ ಹಬ್ಬ ಕಳೆಗಟ್ಟುತ್ತಿದ್ದು ಕುರಿಗಳ ಹಿಂಡು ಗಣೇಶ ಮೂರ್ತಿಸಾಲಿನ ಎದುರು ಹಾದು ಹೋದಾಗ ತೆಗೆದ ಚಿತ್ರ.

ಬಾಯಾರಿಕೆ ಇಂಗಿತು!

ಬಾಯಾರಿಕೆ ಇಂಗಿತು!

ಪರೇಡ್ ನಂತರ ಬಾಯಾರಿಕೆ ಇಂಗಿಸಿಕೊಳ್ಳಲು ವಾಟರ್ ಕ್ಯಾನ್ ನ್ನೇ ಮೇಲೆತ್ತಿದ ಪೊಲೀಸ್ ಸಿಬ್ಬಂದಿ ಕಂಡಿದ್ದು ಹೀಗೆ. ಮೊರಾದಾಬಾದ್ ಚಿತ್ರ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
News In Pics: Prime Minister Narendra Modi during the inaugural function of the first phase of Saurashtra Narmada Avataran for Irrigation (SAUNI) project at a village in Jamnagar district on Tuesday. External Affairs Minister Sushma Swaraj shakes hands with U.S. Secretary of State John Kerry at a meeting in New Delhi on Tuesday.
Please Wait while comments are loading...