Narendra Modi: ಬೀದಿ ಬದಿ 10 ರೂಪಾಯಿಗೆ ಕಡ್ಲೆಪುರಿ ಖರೀದಿಸಿದ ಪ್ರಧಾನಿ ಮೋದಿ, ವಿಡಿಯೋ ಭಾರಿ ವೈರಲ್

Narendra Modi: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣಾ ಪ್ರಚಾರದ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ತೋರಿದ ಸರಳತೆ ಇದೀಗ ಸಖತ್ ಸದ್ದು ಮಾಡುತ್ತಿದೆ. ಸ್ಥಳೀಯರೊಂದಿಗೆ ಸೇರಿ ಅವರು ಬೀದಿ ಬದಿಯಲ್ಲಿನ ಅಂಗಡಿಯೊಂದಕ್ಕೆ ಭೇಟಿ ನೀಡಿ 10 ರೂಪಾಯಿಗೆ ಕಡ್ಲೆಪುರಿ ಖರೀದಿ ಮಾಡಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದೆ.

ಜಾರ್ಗ್ರಾಮ್ ಪ್ರವಾಸದ ವೇಳೆ ಅವರು ರಸ್ತೆ ಬದಿಯ ಗಾಡಿಯಲ್ಲಿ ಬಂಗಾಳದ ಖ್ಯಾತ ತಿನಿಸು 'ಕಡ್ಲೆಪುರಿ' ಸವಿದು ಸಾರ್ವಜನಿಕರ ಗಮನ ಸೆಳೆದಿದ್ದಾರೆ. ಪಶ್ಚಿಮ ಬಂಗಾಳದ ಬರ್ಜೋರಾ ಮತ್ತು ಬಲರಾಮ್‌ಪುರಗಳಲ್ಲಿ ಬೃಹತ್ ಚುನಾವಣಾ ಸಮಾವೇಶಗಳನ್ನು ಮುಗಿಸಿ, ಬುಡಕಟ್ಟು ಸಮುದಾಯದ ಪ್ರಾಬಲ್ಯವಿರುವ ಜಾರ್ಗ್ರಾಮ್‌ಗೆ ಪ್ರಧಾನಿ ಮೋದಿ ಆಗಮಿಸಿದ್ದರು.

Narendra Modi Eats Jhal Muri in Bengal Prime Minister s Simple Gesture Goes Viral on Social Media

ಕಡ್ಲೆಪುರಿ ಸವಿದ ಪ್ರಧಾನಿ ಮೋದಿ

ಸಮಾವೇಶ ಮುಗಿಸಿ ಹೆಲಿಪ್ಯಾಡ್‌ನತ್ತ ಮರಳುವ ವೇಳೆ, ರಸ್ತೆ ಬದಿಯಲ್ಲಿ ಸ್ಥಳೀಯ ವ್ಯಾಪಾರಿಯೊಬ್ಬರು ಸಿದ್ಧಪಡಿಸುತ್ತಿದ್ದ ತಿನಿಸುಗಳ ಸುಗಂಧಕ್ಕೆ ಮನಸೋತ ಪ್ರಧಾನಿ, ತಕ್ಷಣವೇ ತಮ್ಮ ಬೆಂಗಾವಲು ಪಡೆಯನ್ನು ನಿಲ್ಲಿಸಲು ಸೂಚಿಸಿದರು. ಯಾವುದೇ ಹಮ್ಮು-ಬಿಮ್ಮಿಲ್ಲದೆ ಕಾರಿನಿಂದ ಕೆಳಗಿಳಿದ ಪ್ರಧಾನಿ ಮೋದಿ, ನೇರವಾಗಿ ವ್ಯಾಪಾರಿಯ ಬಳಿ ತೆರಳಿ ಕಡ್ಲೆಪುರಿ ಸವಿದರು. ಬಳಿಕ ಅಲ್ಲಿನ ಮಕ್ಕಳಿಗೂ ಸಹ ಹಂಚಿದರು. ಇದನ್ನು ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಈ ವಿಡಿಯೋಗೆ ಮೆಚ್ಚುಗೆಗಳ ಸುರಿಮಳೆ ಹರಿದುಬರುತ್ತಿದೆ.

ಪಶ್ಚಿಮ ಬಂಗಾಳದ ಕಡ್ಲೆಪುರಿ ವಿಶೇಷತೆ

ಝಲ್ ಮುರಿ ಪಶ್ಚಿಮ ಬಂಗಾಳದ ಅತ್ಯಂತ ಜನಪ್ರಿಯ ಬೀದಿ ಬದಿಯ ಸಂಜೆಯ ಸ್ನ್ಯಾಕ್ ಆಗಿದ್ದು, ಇದು ಚುರುಮುರಿ ರೀತಿಯ ತಿಂಡಿಯಾಗಿದೆ. ಇದನ್ನು ಸಾಸಿವೆ ಎಣ್ಣೆ, ಕಡಲೆಕಾಯಿ, ತರಕಾರಿಗಳು ಮತ್ತು ವಿಶೇಷ ಮಸಾಲೆಗಳೊಂದಿಗೆ ತಯಾರಿಸಲಾಗುತ್ತದೆ. ಇದನ್ನು ಪ್ರಧಾನಿ ಮೋದಿಯವರು ಸವಿಯುತ್ತಾ, ಅಲ್ಲಿ ನೆರೆದಿದ್ದ ಸ್ಥಳೀಯರೊಂದಿಗೆ ಚರ್ಚೆ ನಡೆಸಿ ಗಮನ ಸೆಳೆದರು.

ಇದನ್ನು ಪ್ರಧಾನಿ ಮೋದಿ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು,"ಪಶ್ಚಿಮ ಬಂಗಾಳದ ತಿನಿಸುಗಳ ರುಚಿ ಸದ್ಭುತವಾಗಿರುತ್ತದೆ. ಜಾರ್ಗ್ರಾಮ್‌ನ ಈ ಝಲ್ ಕಡ್ಲೆಪುರಿ ಅತ್ಯಂತ ರುಚಿಕರವಾಗಿತ್ತು. ಇದು ನನ್ನ ಸುದೀರ್ಘ ಪ್ರಚಾರದ ಆಯಾಸವನ್ನು ನೀಗಿಸಿ ಹೊಸ ಚೈತನ್ಯ ನೀಡಿದೆ," ಎಂದು ಬಣ್ಣಿಸಿದ್ದಾರೆ.

ವ್ಯಾಪಾರಿಗೆ 10 ರೂಪಾಯಿ ನೀಡಿದ ಪ್ರಧಾನಿ ಮೋದಿ

ಇನ್ನೂ ಮೋದಿ ಅವರು ಝಲ್ ಮುರಿ ತಿಂದ ನಂತರ ವ್ಯಾಪಾರಿಗೆ 10 ರೂಪಾಯಿ ಹಣ ನೀಡಲು ಹೋದಾಗ, ವ್ಯಾಪಾರಿ ಹಣ ಪಡೆಯಲು ನಿರಾಕರಿಸಿದರು. ಆದರೆ ಪ್ರಧಾನಿಯವರು, "ಅರೇ ಇಲ್ಲ ಭಾಯ್, ಹಾಗೆಲ್ಲ ಮಾಡಬಾರದು" ಎಂದು ಹೇಳಿ ಪಟ್ಟು ಹಿಡಿದು ಹಣ ನೀಡಿದರು. ಈ ಭೇಟಿಯು ಕೇವಲ ತಿಂಡಿ ಸವಿಯುವುದಷ್ಟೇ ಆಗಿರಲಿಲ್ಲ. ಜಾರ್‌ಗ್ರಾಮ್ ಒಂದು ಬುಡಕಟ್ಟು ಪ್ರಾಬಲ್ಯದ ಪ್ರದೇಶವಾಗಿದ್ದು, ಅಲ್ಲಿನ ಜನರೊಂದಿಗೆ ನೇರವಾಗಿ ಸಂಪರ್ಕ ಸಾಧಿಸಲು ಮತ್ತು ಜನರೊಂದಿಗಿನ ನಂಟು ಹೆಚ್ಚಿಸಲು ಇದು ಬಹಳ ಸಹಕಾರಿಯಾಗಿದೆ ಎಂದು ಹೇಳಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+