ಕಣ್ಮರೆ ಕಡತ ಬಹಿರಂಗ ಮಾಡಲು ಮೋದಿಗೆ ಆಗ್ರಹ?

ಬರ್ಲಿನ್‌, ಏ. 12 : ವಿದೇಶ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಫ್ರಾನ್ಸ್ ನಿಂದ ಜರ್ಮನಿಗೆ ಪ್ರಯಾಣ ಬೆಳೆಸಿದ್ದಾರೆ. ಜರ್ಮನ್‌ನ ಹ್ಯಾನ್‌ವೋವರ್‌ ನಗರಕ್ಕೆ ಮೋದಿ ಭಾನುವಾರ ತೆರಳಿದ್ದು ಪ್ರಮುಖ ವಿದೇಶಿ ಸಂಬಂಧಗಳ ಕುರಿತು ಮಾತುಕತೆ ನಡೆಸಲಿದ್ದಾರೆ.

ವಿಮಾನ ನಿಲ್ದಾಣದಲ್ಲಿ ಭಾರತೀಯ ಮೂಲದವರಿಂದ ಮತ್ತು ಜರ್ಮನ್ ಹಿರಿಯ ಅಧಿಕಾರಿಗಳಿಂದ ಮೋದಿಗೆ ಭವ್ಯ ಸ್ವಾಗತ ದೊರೆಯಿತು. ಹ್ಯಾನ್‌ವೋವರ್‌ ನಲ್ಲಿ ನಡೆಯುವ ವ್ಯಾಪಾರಿ ಮೇಳದಲ್ಲೂ ಮೋದಿ ಭಾಗವಹಿಸಲಿದ್ದಾರೆ. ಸುಮಾರು 400 ಕ್ಕೂ ಅಧಿಕ ಅಂತಾರಾಷ್ಟ್ರೀಯ ಮಟ್ಟದ ಕಂಪನಿಗಳು ಈ ಮೇಳದಲ್ಲಿ ಪಾಲ್ಗೊಳ್ಳಲಿವೆ. ಮೇಕ್ ಇನ್ ಇಂಡಿಯಾ ಅಭಿಯಾನಕ್ಕೆ ಮೋದಿ ಜರ್ಮನಿ ಬೆಂಬಲವನ್ನು ಕೇಳಲಿದ್ದಾರೆ.[ಮೇಕ್ ಇನ್ ಇಂಡಿಯಾಗೆ ಜೈ ಅಂದ ಏರ್ ಬಸ್]

narendra modi

ನರೇಂದ್ರ ಮೋದಿ ಅವರನ್ನು ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಅವರ ವಂಶಜ, ಸೋದರಳಿಯ ಸೂರ್ಯ ಕುಮಾರ್‌ ಬೋಸ್‌ ಅವರು ಸೋಮವಾರ ಭೇಟಿ ಮಾಡಲಿದ್ದಾರೆ ಎಂಬ ಮಾಹಿತಿಯಿದೆ. ನೇತಾಜಿ ಕಣ್ಮರೆ ಪ್ರಕರಣದ ಮಾಹಿತಿಯನ್ನು ಹೊರಹಾಕುವಂತೆ ಸೂರ್ಯ ಕುಮಾರ್‌ ಬೋಸ್‌ ಕುಟುಂಬ ಆಗ್ರಹಿಸುವ ಸಾಧ್ಯತೆಯಿದೆ.[ನೇತಾಜಿ ಕುಟುಂಬದ ಮೇಲೆ ಗೂಢಚಾರಿಕೆ ಮಾಡಿದ್ದೇಕೆ]

ನೇತಾಜಿ ಕುಟುಂಬ ವರ್ಗದವರ ಮೇಲೆ ಕಾಂಗ್ರೆಸ್‌ ಸರ್ಕಾರ ಬೇಹುಗಾರಿಕೆ ನಡೆಸಿತ್ತು ಎಂಬ ವಿಷಯ ಬೆಳಕಿಗೆ ಬರುತ್ತಿದ್ದಂತೆ ಈ ಭೇಟಿ ಮತ್ತಷ್ಟು ಮಹತ್ವ ಪಡೆದುಕೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+