ವೈರಲ್: ಬಾಲಿವುಡ್ ಸ್ಟಾರ್‌ಗಳ ಜೊತೆ ಸೆಲ್ಫಿಗೆ ಫೋಸು ನೀಡಿದ ಮೋದಿ
ನವದೆಹಲಿ, ಜನವರಿ 10: ಬಾಲಿವುಡ್‌ನ ರಂಗು-ರಂಗು ಸ್ಟಾರ್‌ಗಳ ಮಧ್ಯ ನಿಂತು ನರೇಂದ್ರ ಮೋದಿ ಅವರು ಸೆಲ್ಫಿಗೆ ಫೋಸು ನೀಡಿದ್ದಾರೆ. ಈ ಸೆಲ್ಫಿ ಕೆಲವೇ ನಿಮಿಷಗಳಲ್ಲಿ ವೈರಲ್ ಆಗಿದೆ.
ಹೌದು, ರಣವೀರ್ ಸಿಂಗ್, ರಣಬೀರ್ ಕಪೂರ್, ವರುಣ್ ಧವನ್, ರೋಹಿತ್ ಶೆಟ್ಟಿ, ವಿಕ್ಕಿ ಕೌಶನ್, ಆಲಿಯಾ ಭಟ್, ಕರಣ್ ಜೋಹರ್ ಅಂತಹಾ ಯಂಗ್ ಆಂಡ್ ಬಿಗ್ ಸ್ಟಾರ್‌ಗಳ ನಡುವೆ ನಿಂತಿರುವ ಮೋದಿ ಸೆಲ್ಫಿಗೆ ಮುಖವೊಡ್ಡಿದ್ದಾರೆ, ಬಾಲಿವುಡ್ ಮಂದಿಯ ಮಧ್ಯದಲ್ಲೂ ಪ್ರಧಾನಿ ಹುದ್ದೆಯ ಗಂಭಿರ ನಗುವನ್ನೇ ಸೂಸಿದ್ದಾರೆ.
ಬಾಲಿವುಡ್‌ನ ಖ್ಯಾತ ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್ ಅವರು ನಿನ್ನೆ ಸಂಜೆ ಮೋದಿ ಅವರ ಬಳಿಗೆ ಬಾಲಿವುಡ್ ಯುವ ಸ್ಟಾರ್‌ಗಳ ನಿಯೋಗವೊಂದನ್ನು ಕೊಂಡೊಯ್ದಿದ್ದರು. ಆಗಲೇ ಈ ಸೆಲ್ಫಿಯನ್ನು ನಟ ರಣವೀರ್ ಸಿಂಗ್ ತೆಗೆದಿದ್ದಾರೆ.

ಕರಣ್ ಜೋಹರ್ ಅವರು ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ಚಿತ್ರವನ್ನು ಪ್ರಕಟಿಸಿದ್ದು, ಕೆಲವೇ ನಿಮಿಷಗಳಲ್ಲಿ ಭಾರಿ ವೈರಲ್ ಆಗಿದೆ. ಲಕ್ಷಾಂತರ ಜನ ಈ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಚಿತ್ರದಲ್ಲಿ ಬಾಲಿವುಡ್ ಮಂದಿ ತಮ್ಮ ಎಂದಿನ ಮಸ್ತಿಯಲ್ಲಿರುವಂತೆ ಕಾಣುತ್ತಿದ್ದಾರೆ. ಅವರಿಗೆ ತಕ್ಕಂತೆ ಮೋದಿ ಅವರು ಸಹ ನಗುತ್ತಲೇ ಎಲ್ಲರ ಮಧ್ಯೆ ನಿಂತು ಫೋಸು ನೀಡಿದ್ದಾರೆ.
ಕರಣ್ ಜೋಹರ್, ರಣಬೀರ್ ಕಪೂರ್, ರಣ್ವೀರ್ ಸಿಂಗ್, ಸುಶಾಂತ್ ಸಿಂಗ್, ವಿಕ್ಕಿ ಕೌಶಲ್, ರೋಹಿತ್ ಶೆಟ್ಟಿ, ರಾಜಕುಮಾರ್ ರಾವ್, ಆಯುಷ್ಮಾನ್ ಖುರೇಷಿ, ವರುಣ್ ಧವನ್, ಆಲಿಯಾ ಭಟ್, ಇನ್ನೂ ಹಲವು ಬಾಲಿವುಡ್ ಸೆಲೆಬ್ರಿಟಿಗಳು ಮೋದಿ ಅವರನ್ನು ಭೇಟಿ ಮಾಡಿದ್ದಾರೆ.
View this post on InstagramA post shared by Karan Johar (@karanjohar) on
ಈ ಬಗ್ಗೆ ಇನ್ಸ್ಟಾ ಖಾತೆಯಲ್ಲಿ ಬರೆದುಕೊಂಡಿರುವ ಕರಣ್ ಜೋಹರ್, ಮೋದಿ ಅವರನ್ನು ಭೇಟಿ ಮಾಡಿ ದೇಶ ಕಟ್ಟುವ ಮಹತ್‌ಕಾರ್ಯದಲ್ಲಿ ನಾವು ಮಾಡಬಹುದಾದ ಸಹಾಯದ ಬಗ್ಗೆ ನಡೆಸಿದ ಚರ್ಚೆ ಅಭೂತಪೂರ್ವವಾಗಿತ್ತು ಎಂದು ಹೇಳಿದ್ದಾರೆ.
ಚಲನಚಿತ್ರಗಳ ಟಿಕೆಟ್ ಮೇಲಿನ ಜಿಎಸ್‌ಟಿ ಕಡಿಮೆಗೊಳಿಸಿರುವುದಕ್ಕೆ ಅಭಿನಂದನೆಯನ್ನೂ ಅವರು ಸಲ್ಲಿಸಿದ್ದಾರೆ. ಮೋದಿ ಅವರು ಕಳೆದ ವಾರವಷ್ಟೆ ಬಾಲಿವುಡ್‌ನ ಚಿತ್ರ ನಿರ್ಮಾಪಕರ ಜೊತೆ ಚರ್ಚೆ ನಡೆಸಿದ್ದರು.












Click it and Unblock the Notifications