ವೈರಾಣು ಕೊಲ್ಲಲು ನಮೋ ತಂತ್ರಾಂಶ ಬಂದಿದೆ

ನವದೆಹಲಿ, ಜೂ.23: ಮೊದಿ ಹೆಸರಿನಲ್ಲಿ ಟಿಶ್ಯೂ ಪೇಪರ್, ಮೌಥ್ ರಿಫ್ರೆಷನರ್, ಹೋಳಿ ಬಣ್ಣಗಳು, ಟೀ ಶರ್ಟ್, ಮಗ್ ನಂತರ ನಮೋ ಗುಳಿಗೆಗಳು ಮತ್ತೆ ಸುದ್ದಿಯಲ್ಲಿವೆ. ಈಗ ನಮೋ ಬ್ರ್ಯಾಂಡ್ ಐಟಿ ಕ್ಷೇತ್ರಕ್ಕೂ ಕಾಲಿಟ್ಟಿದೆ. ಲೋಕಸಭೆ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಇದ್ದ 'ನಮೋ' ಜನಪ್ರಿಯತೆ ಈಗಲೂ ಮುಂದುವರೆದಿದೆ.

ಹೋಮ್ ಗ್ರೌನ್ ಐಟಿ ಫರ್ಮ್ ಇನ್ನೋವೇಷನ್ ಎಂಬ ಸಂಸ್ಥೆ 'ನಮೋ' Anti ವೈರಸ್ ತಂತ್ರಾಂಶವನ್ನು ಸಿದ್ಧಪಡಿಸಿದೆ. ಕಂಪ್ಯೂಟರ್ ಒಳಹೊಕ್ಕಿರುವ ವೈರಾಣುಗಳು, ಟೋರ್ಜನ್ ಹಾರ್ಸ್ ಗಳು ಇನ್ನಿತರ ಕೀಟಾಣುಗಳನ್ನು ಕ್ಷಣಾರ್ಧದಲ್ಲಿ ಧ್ವಂಸ ಮಾಡುವ ಸಾಮರ್ಥ್ಯ ಈ ತಂತ್ರಾಂಶಕ್ಕಿದೆಯಂತೆ.

'ಒಂದು ವರದಿಯ ಪ್ರಕಾರ ಭಾರತದಲ್ಲಿ ಇಂಟರ್‌ನೆಟ್ ಬಳಕೆ ಮಾಡುತ್ತಿರುವವ ಪೈಕಿ ಶೇ.13ರಷ್ಟು ಮಂದಿ ಮಾತ್ರ ಶೇ.30ರಷ್ಟು ಮಂದಿ ಹಳೆಯ ತಂತ್ರಾಂಶವನ್ನೇ ಪುನರ್ ಸ್ಥಾಪನೆ ಮಾಡಿ ಅಥವಾ ಉಚಿತ ತಂತ್ರಾಂಶಗಳನ್ನು ಬಳಸುತ್ತಿದ್ದಾರೆ.

NaMo anti-virus software to protect PCs for free

ಉಳಿದ ಶೇ.57 ರಷ್ಟು ಮಂದಿ Anti ವೈರಸ್ ಇಲ್ಲದೇ ಅಥವಾ ಸುರಕ್ಷಿತವಲ್ಲದ ಅನಾಮಧೇಯ ತಂತ್ರಾಂಶಗಳನ್ನು ಬಳಸುತ್ತಿದ್ದಾರೆ. ಆದರೆ ಇಂತಹ ತಂತ್ರಾಂಶಗಳ ಕಾರ್ಯಕ್ಷಮತೆಯ ಮೇಲೆ ನಾವು ಎಷ್ಟರ ಮಟ್ಟಿಗೆ ನಂಬಿಕೆ ಇಡಬಹುದು. ಹೀಗಾಗಿಯೇ ನಾವು ಎಂದು ಸಂಸ್ಥೆಯ ಸಿಇಒ ಅಭಿಷೇಕ್ ಗಗ್ನೇಜಾ ಹೇಳಿದ್ದಾರೆ.

'ನಾವು ಪ್ರಸ್ತುತ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇವೆ. ದೇಶದ ಜನತೆ ಪ್ರಸ್ತುತ ಸರ್ಕಾರದ ಮೇಲೆ ಅತೀವ ನಂಬಿಕೆ ಇಟ್ಟಿದ್ದಾರೆ. ನಾವು ನಮ್ಮ ತಂತ್ರಾಂಶದ ಮೂಲಕ ನರೇಂದ್ರ ಮೋದಿ ಅವರಿಗೆ ಈ ಸಂದೇಶ ರವಾನಿಸಲು ಇಚ್ಛಿಸುತ್ತೇವೆ. ನಮ್ಮ ಸಂಸ್ಥೆ ಯಾವ ರಾಜಕೀಯ ಪಕ್ಷದೊಂದಿಗೂ ಗುರುತಿಸಿಕೊಂಡಿಲ್ಲ' ಎಂದು ಗಗ್ನೇಜ್ ಹೇಳಿದ್ದಾರೆ. [ಬಂದಿದೆ : ನೋವು ನಿವಾರಕ ನಮೋ ಗುಳಿಗೆ ]

2007ರಲ್ಲಿ ತಂತ್ರಾಂಶ ಅಭಿವೃದ್ಧಿಗೆ ಮುಂದಾಗಿದ್ದ ಸಂಸ್ಥೆಯಲ್ಲಿ ಒಟ್ಟು 7 ದೇಶಗಳ ಸುಮಾರು 500ಕ್ಕೂ ಅಧಿಕ ಸಾಫ್ಟ್ ವೇರ್ ಇಂಜಿನಿಯರ್‌ಗಳು ಕಾರ್ಯನಿರ್ವಹಿಸಿದ್ದಾರೆ. ಭಾರತ ಸೇರಿದಂತೆ ಅಮೆರಿಕ, ಯುಕೆ, ಜರ್ಮನಿ, ಕೆನಡಾ, ರುಮೇನಿಯಾ, ಚೀನಾ ಮತ್ತು ಸಿಂಗಪುರದ ಸಾಫ್ಟ್ ವೇರ್ ಇಂಜಿನಿಯರ್ ಗಳು ತಂತ್ರಾಂಶಕ್ಕಾಗಿ ಶ್ರಮಿಸಿದ್ದಾರೆ. ನಮೋ Anti ವೈರಸ್ ತಂತ್ರಾಂಶ ಬೇಕಿದ್ದರೆ ಈ ವೆಬ್ ತಾಣಕ್ಕೆ ಭೇಟಿ ನೀಡಿ ಡೌನ್ ಲೋಡ್ ಮಾಡಿಕೊಳ್ಳಿ. (ಪಿಟಿಐ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+