ಲೋಕಸಭಾ ಚುನಾವಣೆ 2024: ಈ ಆರು ಜಿಲ್ಲೆಗಳಲ್ಲಿ ಬಹುತೇಕ ಶೂನ್ಯ ಮತದಾನ; ಕಾರಣವೇನು?
ಲೋಕಸಭಾ ಚುನಾವಣೆ 2024ರ ಮೊದಲ ಹಂತದ ಮತದಾನ ಶುಕ್ರವಾರ ನಡೆಯಿತು. ಪೂರ್ವ ನಾಗಾಲ್ಯಾಂಡ್‌ನ ಆರು ಜಿಲ್ಲೆಗಳ ಮತಗಟ್ಟೆಗಳಲ್ಲಿ ಜನವಿಲ್ಲದೆ ಅಧಿಕಾರಿಗಳು ಕಾಯಬೇಕಾಯಿತು.
ಪೂರ್ವ ನಾಗಾಲ್ಯಾಂಡ್ ಪೀಪಲ್ಸ್ ಆರ್ಗನೈಸೇಷನ್ (ENPO) 'ಫ್ರಂಟಿಯರ್ ನಾಗಾಲ್ಯಾಂಡ್ ಟೆರಿಟರಿ' (FNT) ಸ್ಥಾಪನೆಗೆ ಆಗ್ರಹಿಸಿ ಮತದಾನ ಬಹಿಷ್ಕರಿಸಿದ್ದು, ಬಹುತೇಕ ಶೂನ್ಯ ಮತದಾನವಾಗಿದೆ ಎಂದು ಪಿಟಿಐ ವರದಿ ಮಾಡಿದೆ.

ಪೂರ್ವ ಪ್ರದೇಶದ ಏಳು ಬುಡಕಟ್ಟು ಸಂಘಟನೆಗಳನ್ನು ಪ್ರತಿನಿಧಿಸುವ ಪೂರ್ವ ನಾಗಾಲ್ಯಾಂಡ್ ಪೀಪಲ್ಸ್ ಆರ್ಗನೈಸೇಷನ್ ಈ ಬೇಡಿಕೆಯ ನಾಯಕತ್ವ ವಹಿಸಿಕೊಂಡಿದೆ. ಮತದಾನ ಬಹಿಷ್ಕಾರದ ನಡುವೆಯೂ ನಾಗಾಲ್ಯಾಂಡ್ ಮುಖ್ಯಮಂತ್ರಿ ನೆಫಿಯು ರಿಯೊ ಎಫ್‌ಎನ್‌ಟಿ ಬೇಡಿಕೆಗೆ ರಾಜ್ಯ ಸರ್ಕಾರವು ಯಾವುದೇ ಆಕ್ಷೇಪಣೆಗಳನ್ನು ಹೊಂದಿಲ್ಲ ಎಂದು ಭರವಸೆ ನೀಡಿದರು.
ಮತದಾನ ಬಹಿಷ್ಕರಿಸಿದ ಶಾಸಕರು
ನಾಗಾಲ್ಯಾಂಡ್‌ನ ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ ಅವಾ ಲೋರಿಂಗ್ ಪ್ರಕಾರ, 20 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ 738 ಮತಗಟ್ಟೆಗಳಲ್ಲಿ. ಬೆಳಿಗ್ಗೆ 7 ರಿಂದ ಸಂಜೆ 4 ರವರೆಗೆ ಚುನಾವಣಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಆದರೆ, ಯಾವೊಬ್ಬ ಮತದಾರನೂ ಬರದ ಕಾರಣ ಕ್ಷೇತ್ರದ 20 ಶಾಸಕರು ಕೂಡ ಮತದಾನದಿಂದ ದೂರ ಉಳಿದಿದ್ದರು.
ನಾಗಾಲ್ಯಾಂಡ್‌ನ ಒಟ್ಟು 13.25 ಲಕ್ಷ ಮತದಾರರಲ್ಲಿ, ಪೂರ್ವ ನಾಗಾಲ್ಯಾಂಡ್‌ನ ಆರು ಜಿಲ್ಲೆಗಳು 4,00,632 ಮತದಾರರನ್ನು ಹೊಂದಿವೆ.
ಟೌಫೆಮಾದಲ್ಲಿ ಮತ ಚಲಾಯಿಸಿದ ನಂತರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗಿನ ಸಭೆಯಲ್ಲಿ ಎಫ್‌ಎನ್‌ಟಿಯ ಕರಡು ಕಾರ್ಯಾಗಾರವನ್ನು ಸ್ವೀಕರಿಸಿದ್ದೇನೆ ಮತ್ತು ಚುನಾಯಿತ ಶಾಸಕರು ಮತ್ತು ಎಫ್‌ಎನ್‌ಟಿ ಸದಸ್ಯರ ನಡುವೆ ಅಧಿಕಾರ ಹಂಚಿಕೆಯ ಬಗ್ಗೆ ಸ್ಪಷ್ಟ ಯೋಜನೆಯ ಅಗತ್ಯವನ್ನು ಒತ್ತಿ ಹೇಳಿದರು.
"ಸ್ವಾಯತ್ತ ಸಂಸ್ಥೆಯನ್ನು ರಚಿಸಿದಾಗ, ಚುನಾಯಿತ ಸದಸ್ಯರೊಂದಿಗೆ ಸರಿಯಾದ ವ್ಯವಸ್ಥೆ ಇರಬೇಕು. ಇದಕ್ಕೂ ರಾಜ್ಯ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ. ಶಾಸಕರು ಮತ್ತು ಸೂತ್ರವನ್ನು ರೂಪಿಸಲು ಮೇಜಿನ ಮೇಲೆ ಕುಳಿತುಕೊಳ್ಳಬೇಕು. ಅದರ ನಂತರವೇ ನಾವು ಮಾತನಾಡಬಹುದು," ಎಂದು ಸಿಎಂ ರಿಯೊ ಅವರು ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.












Click it and Unblock the Notifications