ಕಾಶ್ಮೀರಿ ಪಂಡಿತನ ಶವಸಂಸ್ಕಾರಕ್ಕೆ ನೆರವಾದ ಮುಸ್ಲಿಮರು
ಸಂಜಯ್ ಶರ್ಮಾ ಅವರ ಭೀಕರ ಹತ್ಯೆಯ ವಿರುದ್ಧ ಮುಸ್ಲಿಂ ನೆರೆಹೊರೆಯವರು ಪ್ರತಿಭಟನೆಯನ್ನು ನಡೆಸಿದ್ದು ಮಾತ್ರವಲ್ಲದೆ, ಅವರ ಕುಟುಂಬಕ್ಕೆ ಹಿಂದೂ ವಿಧಿವಿಧಾನಗಳ ಪ್ರಕಾರ ಅಂತ್ಯಕ್ರಿಯೆಯನ್ನು ನೆರವೇರಿಸಲು ಸಹಾಯ ಮಾಡಿದರು.
ಶ್ರೀನಗರ, ಫೆಬ್ರವರಿ 28: ಭಾನುವಾರ ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಅಚಾನ್ ಗ್ರಾಮದಲ್ಲಿ ಭಯೋತ್ಪಾದಕರು ಕಾಶ್ಮೀರಿ ಪಂಡಿತರನ್ನು ಗುರಿಯಾಗಿ ಹತ್ಯೆ ಮಾಡಿದ್ದು, ಆ ಪ್ರದೇಶದ ಅಲ್ಪಸಂಖ್ಯಾತ ಸಮುದಾಯದಲ್ಲಿ ಭಯವನ್ನು ಹಿಮ್ಮಡಿಗೊಳಿಸಿದೆ.
ಆದಾಗ್ಯೂ ಭಯೋತ್ಪಾದಕರ ಬೆದರಿಕೆಗಳ ಹೊರತಾಗಿಯೂ, ಸಂಜಯ್ ಶರ್ಮಾ ಅವರ ಭೀಕರ ಹತ್ಯೆಯ ವಿರುದ್ಧ ಮುಸ್ಲಿಂ ನೆರೆಹೊರೆಯವರು ಪ್ರತಿಭಟನೆಯನ್ನು ನಡೆಸಿದ್ದು ಮಾತ್ರವಲ್ಲದೆ, ಅವರ ಕುಟುಂಬಕ್ಕೆ ಹಿಂದೂ ವಿಧಿವಿಧಾನಗಳ ಪ್ರಕಾರ ಅಂತ್ಯಕ್ರಿಯೆಯನ್ನು ನೆರವೇರಿಸಲು ಸಹಾಯ ಮಾಡಿದರು.

ಭಾನುವಾರ ಬೆಳಿಗ್ಗೆ ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್‌ನ ಭದ್ರತಾ ಸಿಬ್ಬಂದಿಯಾದ ಸಂಜಯ್ ಶರ್ಮಾ ಅವರನ್ನು ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದರು. ಹೀಗಾಗಿ ಅವರ ಕೊನೆಯ ಪ್ರಯಾಣದ ವ್ಯವಸ್ಥೆ ಮಾಡಲು ಕುಟುಂಬಕ್ಕೆ ಸಹಾಯ ಮಾಡಿದ ಮುಸ್ಲಿಂ ನೆರೆಹೊರೆಯವರು, ಸಂತ್ರಸ್ತ ಕುಟುಂಬದ ನೋವು ಮತ್ತು ದುಃಖವನ್ನು ಅವರು ಸಮಾನವಾಗಿ ಹಂಚಿಕೊಂಡಿವುದಾಗಿ ಎಂದು ಹೇಳಿದರು.
ಸ್ಥಳೀಯ ಮುಸ್ಲಿಮರು ಸಂಜಯ್ ಶರ್ಮಾ ಅವರ ಪತ್ನಿ ಮತ್ತು ಇಬ್ಬರು ಚಿಕ್ಕ ಮಕ್ಕಳನ್ನು ಸಾಂತ್ವನ ಮಾಡುತ್ತಿರುವ ದೃಶ್ಯ ಕಂಡು ಬಂದಿದೆ. ಕಳೆದ 33 ವರ್ಷಗಳಿಂದ ಪ್ರತಿ ಕಾಶ್ಮೀರಿ - ಮುಸ್ಲಿಮರು ಅಥವಾ ಮುಸ್ಲಿಮೇತರ ಮೇಲಿನ ಹಿಂಸಾಚಾರವು ಸಾವಿರಾರು ಕುಟುಂಬಗಳನ್ನು ಹೇಗೆ ನಾಶಪಡಿಸಿದೆ ಎಂಬುದನ್ನು ನೋಡಿದ್ದಾರೆ. ಹೀಗಾಗಿ ಶರ್ಮಾ ಕುಟುಂಬದ ನೋವು ಮತ್ತು ದುಃಖವನ್ನು ನಾವು ಅರ್ಥಮಾಡಿಕೊಳ್ಳಬಹುದು ಎಂದು ಶರ್ಮಾ ಅವರ ನೆರೆಹೊರೆಯವರಾದ ಅಫ್ಜಲ್ ಎಂಬುವವರು ತಿಳಿಸಿದರು.

ಗಡಿಯಾಚೆಗಿನ ಉಗ್ರರು ಮತ್ತು ಅವರ ನಿರ್ವಾಹಕರನ್ನು ನೇರವಾಗಿ ಉಲ್ಲೇಖಿಸಿದ ಅವರು ಕಾಶ್ಮೀರದ ಯುವಕರಿಗೆ ಹಿಂಸಾಚಾರವನ್ನು ಬೋಧಿಸುವವರು 'ಜಿಹಾದ್' ಮಾಡುತ್ತಿಲ್ಲ. ಬದಲಾಗಿ ಕಣಿವೆಯಲ್ಲಿ ಭಯೋತ್ಪಾದನೆಯನ್ನು ಹರಡುತ್ತಿದ್ದಾರೆ. ಇಸ್ಲಾಂ ಶಾಂತಿ ಮತ್ತು ಸಹೋದರತ್ವವನ್ನು ಉತ್ತೇಜಿಸುವ ಧರ್ಮವಾಗಿದೆ. ಇಸ್ಲಾಮಿನ ಅತ್ಯಂತ ಸುಂದರವಾದ ವಿಷಯವೆಂದರೆ ಅಲ್ಲಾಹನೊಂದಿಗಿನ ನಿಮ್ಮ ಸಂಪರ್ಕದ ಮೂಲಕ ನೀವು ಎಲ್ಲರಿಗೂ ಒಳ್ಳೆಯವರಾಗಿರುತ್ತೀರಿ. ಧರ್ಮದ ಹೆಸರಿನಲ್ಲಿ ಜನರನ್ನು ಸಾಯಿಸುವವರು ಭಯೋತ್ಪಾದಕರಲ್ಲದೆ ಬೇರೇನೂ ಅಲ್ಲ ಎಂದು ಅಫ್ಜಲ್ ಕೋಪದಿಂದ ತಿಳಿಸಿದರು.
ಭಯೋತ್ಪಾದಕರು ಇಂತಹ ನಾಚಿಕೆಗೇಡಿನ ಕೃತ್ಯವನ್ನು ಏಕೆ ನಡೆಸಿದರು ಎಂದು ಶರ್ಮಾ ಅವರ ನೆರೆಹೊರೆಯ ಇನ್ನೊಬ್ಬ ಮುಸ್ಲಿಂ ಪ್ರಶ್ನಿಸಿದರು. ಈ ಭೀಕರ ಕೃತ್ಯದ ಹಿಂದಿರುವವರು ಯಾರನ್ನಾದರೂ ಅವರ ಧಾರ್ಮಿಕ ಸಂಬಂಧದ ಕಾರಣದಿಂದ ಕೊಲ್ಲುವುದು ಸಮರ್ಥನೀಯವೇ ಎಂದು ಉತ್ತರಿಸಬಹುದೇ? ಎಲ್ಲಾ ಧರ್ಮಗಳು ಶಾಂತಿ ಮತ್ತು ಸಹೋದರತೆಯನ್ನು ಕಲಿಸುತ್ತವೆ. ಧರ್ಮದ ಹೆಸರಿನಲ್ಲಿ ಇಂತಹ ಕೃತ್ಯಗಳನ್ನು ಮಾಡುತ್ತಿರುವವರು ಸಾಕ್ಷಾತ್ ಮೃಗಗಳು ಎಂದರು.
ಸಂಜಯ್ ಶರ್ಮಾ ಕುಟುಂಬದೊಂದಿಗೆ ನೆರೆಹೊರೆಯವರು ಅವರ ಅಂತ್ಯಕ್ರಿಯೆಗೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಿದರು. ನಾವು ಮರವನ್ನು ಸಂಗ್ರಹಿಸಿ ಅಂತ್ಯಕ್ರಿಯೆಯ ಚಿತಾಗಾರವನ್ನು ಮಾಡಿದೆವು. ಶರ್ಮಾ ಹತ್ಯೆಯು ನಮಗೆಲ್ಲ ಆಘಾತವನ್ನುಂಟು ಮಾಡಿದೆ ಎಂದು ಅವರು ಹೇಳಿದರು. ಕೆಲವು ವರ್ಷಗಳ ಹಿಂದೆ ಉಗ್ರವಾದದ ಕೇಂದ್ರಬಿಂದುವಾಗಿದ್ದ ನೆರೆಯ ಶೋಪಿಯಾನ್ ಜಿಲ್ಲೆಯಲ್ಲಿ ಶರ್ಮಾ ಹತ್ಯೆಯನ್ನು ಖಂಡಿಸಿ ಕ್ಯಾಂಡಲ್‌ಲೈಟ್ ಪ್ರತಿಭಟನೆ ನಡೆಸಲಾಯಿತು.












Click it and Unblock the Notifications