ಮೋದಿ-ಯೋಗಿ ಚಿತ್ರ ಬರೆದ ಮುಸ್ಲಿಂ ಮಹಿಳೆಗೆ ಪತಿ ಮನೆಯಿಂದ ಶಿಕ್ಷೆ!
Recommended Video

ಬಲ್ಲಿಯಾ(ಉತ್ತರ ಪ್ರದೇಶ), ಸೆಪ್ಟೆಂಬರ್ 11: ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಚಿತ್ರ ಬರೆದಿದ್ದಕ್ಕಾಗಿ ಮುಸ್ಲಿಂ ಮಹಿಳೆಯೊಬ್ಬರನ್ನು ಮನೆಯಿಂದ ಹೊರಗಟ್ಟಿದ ಘಟನೆ ಉತ್ತರ ಪ್ರದೇಶದ ಬಲ್ಲಿಯಾ ಎಂಬಲ್ಲಿ ನಡೆದಿದೆ.
ಕಳೆದ ವರ್ಷ ಪರ್ವೇಜ್ ಖಾನ್ ಎಂಬುವವರನ್ನು ಮದುವೆಯಾದ್ದ ನಗ್ಮಾ, ಚಿತ್ರ ಬರೆಯುವ ಹವ್ಯಾಸ ಇಟ್ಟುಕೊಂಡಿದ್ದರು. ಇತ್ತೀಚೆಗೆ ನರೇಂದ್ರ ಮೋದಿ ಮತ್ತು ಯೋಗಿ ಆದಿತ್ಯನಾಥರ ಚಿತ್ರ ಬರೆದರೆಂಬ ಕಾರಣಕ್ಕೆ ಅವರ ಪತಿ ಮತ್ತು ಅತ್ತೆ-ಮಾವಂದಿರು ಆಕೆಯನ್ನು ಮನೆಯಿಂದಲೇ ಹೊರಹಾಕಿದ್ದಾರೆ.

ಆಕೆ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾಳೆ. ಅದಕ್ಕೆಂದೇ ಆಕೆಯನ್ನು ಮನೆಯಿಂದ ಹೊರಗಟ್ಟಿದ್ದೇವೆ ಎಂದು ಪತಿ ತನ್ನ ನಡೆಯನ್ನು ಸಮರ್ಥಿಸಿಕೊಂಡಿದ್ದಾನೆ.
ಈ ಕುರಿತು ಪೊಲೀಸರಿಗೆ ದೂರು ನೀಡಿರುವ ನಗ್ಮಾ ತಂದೆ, ಈ ಮೊದಲೂ ಪತಿಯ ಮನೆಯಿಂದ ತನ್ನ ಮಗಳಿಗೆ ಕಿರುಕುಳ ನೀಡಲಾಗುತ್ತಿತ್ತು ಎಂದಿದ್ದಾರೆ. ಬಲ್ಲಿಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ವಿಚಾರಣೆ ನಡೆಯುತ್ತಿದೆ.












Click it and Unblock the Notifications