ಮಲ್ಯ ಬರುವಿಕೆಗಾಗಿ ಕಾದಿದೆ ಭಾರತದ ಈ ಜೈಲು!

By: ವಿಕಾಸ್ ನಂಜಪ್ಪ
Subscribe to Oneindia Kannada

ಲಂಡನ್, ಜುಲೈ 14: ಮನಿಲಾಂಡ್ರಿಂಗ್, ಬ್ಯಾಂಕುಗಳಿಗೆ ಸಾಲ ನೀಡದೆ ಉದ್ದೇಶಪೂರ್ವಕ ಸುಸ್ತಿದಾರನಾಗಿ ತಲೆಮರೆಸಿಕೊಂಡಿರುವ ಉದ್ಯಮಿ ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಕರೆ ತಂದರೆ ಯಾವ ಜೈಲಿನಲ್ಲಿರಿಸಲಾಗುತ್ತದೆ ಎಂಬ ಕುತೂಹಲ ಪ್ರಶ್ನೆ ಕೋರ್ಟ್ ವಿಚಾರಣೆ ವೇಳೆ ಕೇಳಿ ಬಂದಿದೆ.

ಕಿಂಗ್ ಫಿಷರ್ To ಲಂಡನ್: ಮಲ್ಯ ಪ್ರಕರಣ ನಡೆದು ಬಂದ ಹಾದಿ

ಯುಕೆ ಕೋರ್ಟ್ ಕೇಳಿದ ಈ ಪ್ರಶ್ನೆಗೆ ಭಾರತದ ತನಿಖಾ ತಂಡ ಉತ್ತರಿಸಿದ್ದು, ಮುಂಬೈನ ಆರ್ಥರ್ ರಸ್ತೆಯಲ್ಲಿರುವ ಜೈಲಿನಲ್ಲಿ ಮಲ್ಯ ಅವರನ್ನು ಇರಿಸುವುದಾಗಿ ಹೇಳಿದೆ.

Mumbai's Arthur Road jail for Mallya if extradited says India

ವಿಜಯ್ ಮಲ್ಯ ಅವರನ್ನು ವಶಕ್ಕೆ ಪಡೆಯಲು ಭಾರತ ಹರಸಾಹಸ ಪಡುತ್ತಿದ್ದು, ಈಗಾಗಲೇ ಸಂಬಂಧಿಸಿದ ದಾಖಲೆಗಳನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಸಲ್ಲಿಸಿದೆ. ಈ ಬಗ್ಗೆ ಲಂಡನಿನ ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ ವಿಚಾರಣೆ ಜಾರಿಯಲ್ಲಿದೆ.

ಭಾರತದ ತನಿಖಾ ತಂಡ ನೀಡಿದ ದಾಖಲೆಗಳ ಬಗ್ಗೆ ಯುಕೆ ಅಧಿಕಾರಗಳು ಮೆಚ್ಚುಗೆ ವ್ಯಕ್ತಪಡಿಸಿದ್ದು, ಭಾರತಕ್ಕೆ ಮಲ್ಯರನ್ನು ವಿಚಾರಣೆಗಾಗಿ ಕಳಿಸುವ ಸಾಧ್ಯತೆ ಹೆಚ್ಚಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಏಪ್ರಿಲ್ 18ರಂದು ಲಂಡನ್ ನಲ್ಲಿ ಮಲ್ಯ ಅವರನ್ನು ಬಂಧಿಸಲಾಗಿತ್ತು. ಆದರೆ, ಬಂಧನವಾದ ಮೂರು ಗಂಟೆಯೊಳಗೆ ಅವರಿಗೆ ಜಾಮೀನು ಸಿಕ್ಕಿತ್ತು. ಈ ವರ್ಷಾಂತ್ಯದ ತನಕ ಜಾಮೀನು ಅವಧಿ ವಿಸ್ತರಣೆಗೊಂಡಿದೆ. ಆದರೆ, ನಾನು ನಿರಪರಾಧಿ ಎಂದು ಹೇಳಿ ಮಲ್ಯ ಅವರು ನೀಡಿರುವ ಪ್ರಕಟಿತ ಹೇಳಿಕೆ, ಸಾಕ್ಷಿ ಎಲ್ಲವೂ ಸುಳ್ಳು ಎಂದು ಸಾಬೀತುಪಡಿಸಲು ಬೇಕಾದ ದಾಖಲೆಗಳನ್ನು ಭಾರತದ ತನಿಖಾ ತಂಡಗಳು, ಕೋರ್ಟಿಗೆ ಸಲ್ಲಿಸಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Vijay Mallya will be lodged in the Arthur Road jail if extradited to India, a UK court has been told. The Indian government was responding to questions from the UK government on where Mallya would be lodged if extradited to India.
Please Wait while comments are loading...