33 ಗಂಟೆ ಬಂದ್ ಆಗಿದ್ದ ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇ ಮಾರ್ಗ ರೀ ಓಪನ್, ಕಾರಣ ತಿಳಿಯಿರಿ | Mumbai-Pune Expressway

ಟ್ರಾಫಿಕ್ ಜಾಮ್ ಅನ್ನೋದು ಕೇವಲ ಒಂದು ನಗರಕ್ಕೆ ಸೀಮಿತವಾಗಿಲ್ಲ, ಜಗತ್ತಿನಾದ್ಯಂತ ಇದೇ ಸಮಸ್ಯೆ ಕಾಡುತ್ತಿದೆ. ಅದರಲ್ಲೂ ಭಾರತದ ದೊಡ್ಡ ದೊಡ್ಡ ನಗರಗಳಲ್ಲಿ ಟ್ರಾಫಿಕ್ ಕಾಟ ಹೆಚ್ಚಾಗಿ ಜನ ಹೈರಾಣಾಗಿ ಹೋಗಿದ್ದಾರೆ. ಇಷ್ಟೆಲ್ಲದರ ನಡುವೆ ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇ ಭಯಾನಕ ಟ್ರಾಫಿಕ್ ಕಂಡಿದ್ದು, ಪ್ರಯಾಣಿಕರು ಸತತ 33 ಗಂಟೆಗಳ ಕಾಲ ಪರದಾಡುವ ಪರಿಸ್ಥಿತಿ ನಿರ್ಮಾಣ ಆಗಿತ್ತು. ಸಾವಿರಾರು ವಾಹನಗಳು ಸಾಲುಗಟ್ಟಿ ನಿಂತು, ಇಡೀ ಹೆದ್ದಾರಿ ಬಂದ್ ಆಗಿತ್ತು. ಹೀಗೆ ಹತ್ತಾರು ಕಿಲೋ ಮೀಟರ್ ಉದ್ದಕ್ಕೆ ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇ ಟ್ರಾಫಿಕ್ ಜಾಮ್ ಕಂಡಿತ್ತು. ಹಾಗಾದರೆ ಈ ಸಮಸ್ಯೆಗೆ ಕಾರಣವಾಗಿದ್ದು ಏನು? ಇಲ್ಲಿದೆ ಮಾಹಿತಿ.

ಪ್ರೊಪಿಲೀನ್ ಗ್ಯಾಸ್ ತುಂಬಿದ್ದ ಟ್ಯಾಂಕರ್ ಒಂದು ಖಂಡಾಲಾ ಘಾಟ್‌ ವಿಭಾಗದಲ್ಲಿ ಪಲ್ಟಿ ಆಗಿದೆ. ಹೀಗೆ ಗ್ಯಾಸ್ ತುಂಬಿದ್ದ ಟ್ಯಾಂಕರ್ ಪಲ್ಟಿಯಾದ ಕಾರಣ ವಾಹನಗಳ ಸಂಚಾರ ಬಂದ್ ಆಗಿತ್ತು. ನೋಡ ನೋಡುತ್ತಲೇ ಇಡೀ ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಬಿಟ್ಟಿದೆ. ಕೊನೆಗೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಪರಿಸ್ಥಿತಿ ನಿಭಾಯಿಸಲು ಪರದಾಡಿದರು, ಈ ರೀತಿ ಸತತ 33 ಗಂಟೆಗಳ ಕಾಲ ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇ ಬಂದ್ ಆಗಿದ್ದ ಕಾರಣಕ್ಕೆ ಆತಂಕ ಕೂಡ ಎದುರಾಗಿತ್ತು. ಅದೋಶಿ ಸುರಂಗದ ಬಳಿ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿದ್ದ ಪರಿಣಾಮ ಇಂತಹ ದುರಂತ ಎದುರಾಗಿತ್ತು.

Mumbai-Pune Expressway

20 ಕಿಮೀ ವಿಸ್ತರಿಸಿದ್ದ ಟ್ರಾಫಿಕ್

ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇ ನಡುವೆ ಪ್ರೊಪಿಲೀನ್ ಗ್ಯಾಸ್ ತುಂಬಿದ್ದ ಟ್ಯಾಂಕರ್ ಪಲ್ಟಿ ಆಗಿರುವ ಸುದ್ದಿ ತಿಳಿದ ತಕ್ಷಣ, ದೊಡ್ಡ ಕ್ರೇನ್‌ಗಳ ಸಹಾಯದಿಂದ ಪಲ್ಟಿಯಾದ ವಾಹನ ತೆರವುಗೊಳಿಸಲು ನಿರಂತರ ಪ್ರಯತ್ನ ಮಾಡಲಾಗಿತ್ತು. ಅಂತಿಮವಾಗಿ ನಿರಂತರ ಪ್ರಯತ್ನ ಫಲ ಕೊಟ್ಟ ಕಾರಣಕ್ಕೆ ಬೆಳಗಿನ ಜಾವ 1.46ರ ಸುಮಾರಿಗೆ ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇ ಸಂಚಾರಕ್ಕೆ ಮುಕ್ತವಾಯಿತು. ಈ ಸಮಯದಲ್ಲಿ ಟ್ರಾಫಿಕ್ ಕಂಟಕಕ್ಕೆ ಸಿಲುಕಿದ ಸವಾರರು ವಿಲವಿಲ ಒದ್ದಾಡುವಂತೆ ಆಗಿತ್ತು. ಹೀಗೆ ಇದ್ದಾಗ ನೋಡ ನೋಡುತ್ತಲೇ ಟ್ರಾಫಿಕ್ ಜಾಮ್ ಸುಮಾರು 20 ಕಿಮೀ ವಿಸ್ತರಿಸಿತ್ತು.

ಟೋಲ್ ಸಂಗ್ರಹ ದಿಢೀರ್ ಬಂದ್

ಮುಂಬೈಗೆ ಸಾಗುವ ಕ್ಯಾರೇಜ್‌ ವೇ ಅಪಘಾತದ ಬಳಿಕ ಬಂದ್ ಮಾಡಲಾಗಿದ್ದು, ಪುಣೆಗೆ ಸಾಗುವ ಮಾರ್ಗದಲ್ಲಿ ಹಂತ ಹಂತವಾಗಿ ವಾಹನ ಸಂಚಾರ ಬೇರೆಡೆಗೆ ತಿರುಗಿಸಿ ನಿಯಂತ್ರಣ ಮಾಡಲಾಗಿತ್ತು. ಈ ನಡುವೆ ಜನ ಘಟನೆಯಿಂದ ಭಾರಿ ಆಕ್ರೋಶಗೊಂಡಿದ್ದು, ಎಂಎಸ್‌ಆರ್‌ಡಿಸಿ ಟೋಲ್ ಸಂಗ್ರಹ ತಾತ್ಕಾಲಿಕವಾಗಿ ತಡೆಹಿಡಿದಿದೆ. ಸ್ಥಳದಲ್ಲಿ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಬಿಪಿಸಿಎಲ್ & ಹೆದ್ದಾರಿ ಪೊಲೀಸರು, ಎಂಎಸ್‌ಆರ್‌ಡಿಸಿ ಸಿಬ್ಬಂದಿ ಜಂಟಿಯಾಗಿ ತೆರವು ಕಾರ್ಯಾಚರಣೆ ನಡೆಸಿದ್ದು ಪರಿಸ್ಥಿತಿ ಈಗ ಹಿಡಿತಕ್ಕೆ ಸಿಕ್ಕಂತಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+