Rahul Gandhi: ಸಂಸದರಾಗಿ ಮರುನೇಮಕ, ಸರ್ಕಾರಿ ನಿವಾಸ ಮರಳಿ ಪಡೆದ 'ರಾಗಾ'
ಬೆಂಗಳೂರು, ಆಗಸ್ಟ್ 08: ಲೋಕಸಭೆ ಅನರ್ಹತೆ ಹಿಂಪಡೆದ ಸೆಕ್ರೆಟರಿಯೇಟ್ ಹೊಸ ಆದೇಶ ನೀಡಿದ ನಂತರ ಕಾಂಗ್ರೆಸ್ ಅಗ್ರ ನಾಯಕ ರಾಹುಲ್ ಗಾಂಧಿ ಅವರನ್ನು ಸಂಸತ್ ಸದಸ್ಯರಾಗಿ ಮರು ನೇಮಕ ಮಾಡಲಾಯಿತು. ಇದರ ಬೆನ್ನಲ್ಲೆ ಅವರು ಮಂಗಳವಾರ ತಮ್ಮ ಅಧಿಕೃತ ಸರ್ಕಾರಿ ಬಂಗಲೆ ಮರಳಿ ಪಡೆದರು.
ಮೋದಿ ಉಪನಾಮ (ಸರ್‌ನೇಮ್) ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನಿಂದ ಬಿಗ್ ರಿಲೀಫ್ ಪಡೆದ ರಾಹುಲ್ ಗಾಂಧಿ ಅವರು ಸೋಮವಾರ ಸಂಸದರಾಗಿ ಮರುನೇಮಕಗೊಂಡರು. ಇಂದು ಅವರು ಲೋಕಸಭೆಯ ಸದನ ಸಮಿತಿಯು ಮಂಜೂರು ಮಾಡಿರುವ ಅಧಿಕಾರಿ ಸರ್ಕಾರಿ ಹಳೆಯ ಬಂಗಲೆಗೆ ಅವರು ತೆರಳಿದ್ದಾರೆ ಎಂದು ವರದಿ ಆಗಿದೆ.

2005 ರಿಂದ ಪ್ರಕರಣವೊಂದಕ್ಕೆ ಸಂಬಂಧಿದಂತೆ ಈ ನಿವಾಸವನ್ನು ತೊರೆದಿದ್ದ ರಾಹುಲ್ ಗಾಂಧಿ ಅವರು ರಾಷ್ಟ್ರ ರಾಜಧಾನಿಯ ತುಘಲಕ್ ಲೇನ್ ನಲ್ಲಿನ ಬಂಗಲೆಯಲ್ಲಿ ವಾಸ ಮಾಡುತ್ತಿದ್ದರು.
ಅರ್ಹತೆ ರದ್ದು ಬಳಿಕ ಸರ್ಕಾರಿ ನಿವಾಸ ಪ್ರವೇಶ
ಲೋಕಸಭೆಯ ಸೆಕ್ರೆಟರಿಯೇಟ್‌ನಿಂದ ಹೊಸ ಆದೇಶವು 'ಮೋದಿ ಉಪನಾಮ' ಪ್ರಕರಣದಲ್ಲಿ ರಾಹುಲ್ ಗಾಂಧಿ ಅವರ ಮೇಲಿದ್ದ ಅರ್ಹತೆ ಹಿಂದಿನ ಆದೇಶವನ್ನು ರದ್ದು ಗೊಳಿಸಿದೆ. ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶ ಮೂಲಕ ರಾಹುಲ್ ಗಾಂಧಿ ಅವರಿಗೆ ರಿಲೀಫ್ ಸಿಕ್ಕಿದೆ. ಇದನ್ನು ಕಾಂಗ್ರೆಸ್ ನಾಯಕರು ಸ್ವಾಗತಿಸಿದ್ದಾರೆ. ಅದರ ನಂತರ ನಿಯಮಾನುಸಾರ ಈ ಬೆಳವಣಿಗೆಗಳು ಜರುಗಿವೆ.

ಮೋದಿ ಉಪನಾಮ ಪ್ರಕರಣ ಸಂಬಂಧ ಲೋಕಸಭಾ ಸೆಕ್ರೆಟರಿಯೇಟ್ ಕಳೆದ ಮಾರ್ಚ್ 24 ರಂದು ಅನರ್ಹತೆ ಅಧಿಸೂಚನೆ ಬಿಡುಗಡೆ ಮಾಡಿತ್ತು. ಬಳಿಕ ಗುಜರಾತ್ ರಾಜ್ಯದ ಸೂರತ್ ಉಚ್ಚ ನ್ಯಾಯಾಲಯವು ರಾಹುಲ್ ಗಾಂಧಿಯವರಿಗೆ ಪ್ರಕರಣದಲ್ಲಿ ದೋಷಿ ಎಂದು ಶಿಕ್ಷೆ ವಿಧಿಸಿತು. ಈ ಶಿಕ್ಷೆಯು 2019 ರಲ್ಲಿ ನಡೆದ ಕ್ರಿಮಿನಲ್ ಮಾನನಷ್ಟ ಪ್ರಕರಣದ ಮೇಲೆ ಹೊರ ಬಿದ್ದ ತೀರ್ಪು ಆಗಿತ್ತು.
ಸೂರ್ ಹೈಕೋರ್ಟ್ ಎರಡು ವರ್ಷಗಳ ಶಿಕ್ಷೆ ವಿಧಿಸಿದ ಬಳಿಕ ಅವರು ಇಂದು ಪ್ರವೇಶಿಸಿರುವ ಅಧಿಕೃತ ನಿವಾಸವನ್ನು ತೊರೆದಿದ್ದರು. ಶಾಸಕರಿಗೆ ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಶಿಕ್ಷೆ ವಿಧಿಸಿದಾಗ, ಅದು ಸ್ವಯಂಚಾಲಿತ ಅನರ್ಹತೆಗೆ ಕಾರಣವಾಗುತ್ತದೆ ಎಂದು ಅಧಿಸೂಚನೆ ಹೊರಡಿಸಲಾಗಿತ್ತು. ನಂತರ ಅವರು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದರು. ಅದರ ಫಲವಾಗಿ ಇಂದು ಅವರು ಮರಳಿ ಸಂಸದರಾಗಿ ಮರು ನೇಮಕವಾಗಿದ್ದಾರೆ. ಈ ಬೆಳವಣಿಗೆ ಕಾಂಗ್ರೆಸ್ಸಿಗರಲ್ಲಿ ಹರ್ಷ ಹೆಚ್ಚಲು ಕಾರಣವಾಗಿದೆ.












Click it and Unblock the Notifications