12ನೇ ತರಗತಿ ಮಗನನ್ನ ಪ್ರತಿದಿನ ಕೂಲಿ ಬಿಟ್ಟು 10 ಕಿ.ಮೀ ಬೆನ್ಮೇಲೆ ಹೊತ್ತು ಸಾಗುವ ಅಮ್ಮ: ಸಹಾಯಹಸ್ತ ಚಾಚದ ಸರ್ಕಾರ!
ಅಮ್ಮನ ಪ್ರೀತಿಯ ಎದುರು ಈ ಜಗತ್ತಿನಲ್ಲಿ ಯಾವುದೂ ಇಲ್ಲ. ತನ್ನ ಮಕ್ಕಳಿಗೆ ಎಷ್ಟೇ ಕಷ್ಟ ಬಂದರೂ ತಾಯಿ ತನ್ನ ಪ್ರಾಣವನ್ನಾದರೂ ಪಣಕ್ಕಿಟ್ಟು ಅವರನ್ನ ಕಾಪಾಡುತ್ತಾಳೆ. ಇದಕ್ಕೆ ಸಾಕ್ಷಿಯಾಗಿ ಮಧ್ಯಪ್ರದೇಶದ ಗ್ರಾಮವೊಂದರಲ್ಲಿ ಮನ ಮಿಡಿಯುವಂತಹ ಘಟನೆಯೊಂದು ಬೆಳಕಿಗೆ ಬಂದಿದೆ.
ಹೌದು, ಸರಿಯಾಗಿ ನಡೆಯಲು ಸಾಧ್ಯವಾಗದ ತನ್ನ ಮಗನ ಶಿಕ್ಷಣಕ್ಕೆ ಯಾವುದೇ ಅಡ್ಡಿಯಾಗಬಾರದು ಎಂದು ಆ ಬಡ ತಾಯಿ ಪ್ರತಿದಿನ ಬರೋಬ್ಬರಿ 10 ಕಿಲೋಮೀಟರ್ ದೂರ ಮಗನನ್ನ ತನ್ನ ಬೆನ್ನ ಮೇಲೆ ಹೊತ್ತುಕೊಂಡು ಶಾಲೆಗೆ ಸಾಗುತ್ತಿದ್ದಾಳೆ.

ತಾಯಿಯ ಈ ನಿಸ್ವಾರ್ಥ ಪ್ರೀತಿ ಹಾಗೂ ಮಗನ ಓದಿನ ಬಗೆಗಿನ ಆಸಕ್ತಿ ಇಡೀ ಸಮಾಜಕ್ಕೆ ದೊಡ್ಡ ಪಾಠವಾಗಿದೆ.
ಅಂಗವಿಕಲ ವಿದ್ಯಾರ್ಥಿ ರಾಜ್‌ಕುಮಾರ್ ಜೈಸ್ವರ್ ಶೈಕ್ಷಣಿಕ ಆಸಕ್ತಿ
ಮಧ್ಯಪ್ರದೇಶದ ಜಿಂಕ್ ಬಿಜುರಿ ಗ್ರಾಮದ ನಿವಾಸಿಯಾಗಿರುವ ರಾಜ್‌ಕುಮಾರ್ ಜೈಸ್ವರ್ ಎಂಬ ಯುವಕನೇ ಈ ಕಥೆಯ ನಾಯಕ. ಪ್ರಸ್ತುತ 12ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ರಾಜ್‌ಕುಮಾರ್ ಹುಟ್ಟಿನಿಂದಲೇ ದೈಹಿಕ ನ್ಯೂನತೆಯಿಂದ ಬಳಲುತ್ತಿದ್ದಾನೆ. ಆತನಿಗೆ ಸರಿಯಾಗಿ ತನ್ನ ಕಾಲಿನ ಮೇಲೆ ನಿಂತು ಹೆಜ್ಜೆ ಹಾಕಲು ಸಾಧ್ಯವಿಲ್ಲ.
ವೈದ್ಯಕೀಯ ವರದಿಗಳ ಪ್ರಕಾರ ಆತ ಶೇ.80ರಷ್ಟು ಅಂಗವಿಕಲ ಎಂಬ ಅಧಿಕೃತ ಪ್ರಮಾಣಪತ್ರವನ್ನ ಸಹ ಹೊಂದಿದ್ದಾನೆ. ಇಷ್ಟೆಲ್ಲಾ ದೈಹಿಕ ಸವಾಲುಗಳಿದ್ದರೂ, ರಾಜ್‌ಕುಮಾರ್‌ಗೆ ಚೆನ್ನಾಗಿ ಓದಿ, ಮುಂದೆ ದೊಡ್ಡವನಾಗಿ ಒಂದೊಳ್ಳೆ ಕೆಲಸ ಗಿಟ್ಟಿಸಿಕೊಳ್ಳಬೇಕು ಎಂಬ ಅದಮ್ಯ ಉತ್ಸಾಹವಿದೆ. ಮಗನ ಈ ಶಿಕ್ಷಣದ ಹಸಿವನ್ನ ನೀಗಿಸಲು ಆತನ ತಾಯಿ ತನ್ನೆಲ್ಲಾ ಕಷ್ಟಗಳನ್ನ ಮರೆತು ಆತನಿಗೆ ಬೆನ್ನೆಲುಬಾಗಿ ನಿಂತಿದ್ದಾಳೆ.
ತಾಯಿಯ ದೈನಂದಿನ ಶ್ರಮ
ಪ್ರತಿದಿನ ಶಾಲೆಗೆ ಹೋಗಲು ಈ ತಾಯಿ-ಮಗ ಸುಮಾರು 10 ಕಿ.ಮೀ ದೂರದ ದಾರಿಯನ್ನ ಕ್ರಮಿಸಬೇಕಾಗುತ್ತದೆ. ಮಗನಿಗೆ ನಡೆಯಲು ಕಷ್ಟವಾಗುವ ಕಾರಣ, ಆತನ ತಾಯಿ ಆತನನ್ನು ತನ್ನ ಬೆನ್ನ ಮೇಲೆ ಹೊತ್ತುಕೊಂಡು ಅಥವಾ ಆತನಿಗೆ ಹೆಗಲು ಕೊಟ್ಟು ಶಾಲೆಗೆ ಕರೆದೊಯ್ಯುತ್ತಾಳೆ. ಕೇವಲ ಶಾಲೆಗೆ ಬಿಡುವುದು ಮಾತ್ರವಲ್ಲ, ಆಕೆ ತನ್ನ ದೈನಂದಿನ ಕೂಲಿ ಕೆಲಸವನ್ನು ಬಿಟ್ಟು, ಶಾಲೆಯ ಸಮಯ ಮುಗಿಯುವವರೆಗೂ ಮಗನಿಗಾಗಿ ಶಾಲೆಯ ಆವರಣದಲ್ಲೇ ಕಾಯುತ್ತಾಳೆ.
ಕಳೆದ ಎರಡು ವರ್ಷಗಳಿಂದ ಈ ತಾಯಿ ಪ್ರತಿದಿನ ಈ ದಿನಚರಿಯನ್ನ ಚಾಚೂತಪ್ಪದೆ ಪಾಲಿಸಿಕೊಂಡು ಬರುತ್ತಿದ್ದಾಳೆ. ಬಡತನ ಹಾಗೂ ದೈಹಿಕ ಅಸಹಾಯಕತೆ ಆ ತಾಯಿಯ ಮಮತೆಯ ಮುಂದೆ ಮಂಡಿಯೂರಿವೆ ಎಂದರೂ ತಪ್ಪಿಲ್ಲ.
एक मां की ममता देखिए, बेटा दिव्यांग है, ठीक से चल नहीं सकता, लेकिन मां ने उसकी पढ़ाई नहीं रुकने दी।यह मध्य प्रदेश के झींक बिजुरी गांव के राजकुमार जैस्वार 12वीं में पढ़ते हैं। मां कभी पीठ पर बैठाकर तो कभी सहारा देकर रोज करीब 10 किलोमीटर का सफर तय कराती हैं, ताकि बेटा स्कूल पहुंच सके।मां मजदूरी छोड़कर बेटे के साथ स्कूल के समय तक रुकती हैं। पिछले दो साल से ये सफर रोज तय करती है। दुःख की बात यह है कि— मां ने इलेक्ट्रिक साइकिल के लिए मंत्री जी को आवेदन दिया था, लेकिन 2 महीने हो गए अभी तक कोई मदद नहीं मिली।जबकि राजकुमार 80% दिव्यांग है, और उनका प्रमाणपत्र भी बना हुआ है।
— Mandeep RajBhar (@MandeepRajBhar9) October 28, 2026
ಎಲೆಕ್ಟ್ರಿಕ್ ಸೈಕಲ್ ನೀಡದ ಸರ್ಕಾರ, ಆಡಳಿತಶಾಹಿ ನಿರ್ಲಕ್ಷ್ಯ
ಇಷ್ಟೆಲ್ಲಾ ಕಷ್ಟಪಡುತ್ತಿರುವ ಈ ಕುಟುಂಬಕ್ಕೆ ಸರ್ಕಾರಿ ವ್ಯವಸ್ಥೆ ಮಾತ್ರ ಯಾವುದೇ ಸಹಾಯಕ್ಕೆ ಬಂದಿಲ್ಲ ಎಂಬುದು ನಿಜಕ್ಕೂ ಬೇಸರದ ಸಂಗತಿ. ಮಗನ ಓಡಾಟಕ್ಕೆ ಅನುಕೂಲವಾಗುವಂತೆ ಎಲೆಕ್ಟ್ರಿಕ್ ಸೈಕಲ್ ಮಂಜೂರು ಮಾಡುವಂತೆ ಕೋರಿ ಈ ತಾಯಿ ಸಂಬಂಧಪಟ್ಟ ಸಚಿವರಿಗೆ ಅರ್ಜಿ ಸಲ್ಲಿಸಿದ್ದರು.
ಆದರೆ, ಅರ್ಜಿ ಸಲ್ಲಿಸಿ ಬರೋಬ್ಬರಿ ಎರಡು ತಿಂಗಳು ಕಳೆದರೂ, ಇದುವರೆಗೆ ಯಾವುದೇ ಸರ್ಕಾರಿ ಸಹಾಯ ಅವರ ಕೈಸೇರಿಲ್ಲ. 80% ಅಂಗವೈಕಲ್ಯದ ಅಧಿಕೃತ ಪ್ರಮಾಣಪತ್ರವಿದ್ದರೂ ಆಡಳಿತಶಾಹಿಯ ನಿರ್ಲಕ್ಷ್ಯದಿಂದಾಗಿ ಈ ಬಡ ಕುಟುಂಬ ಪ್ರತಿದಿನ ಕಣ್ಣೀರಿನಲ್ಲಿ ದಿನ ದುಡುವಂತಾಗಿದೆ.
ಶಿಕ್ಷಣ ಎಲ್ಲರ ಹಕ್ಕು ಎಂದು ಭಾಷಣ ಮಾಡುವ ನಾಯಕರು, ಇಂತಹ ಸಾಧಕರು ಹಾಗೂ ಕಷ್ಟಪಡುತ್ತಿರುವ ತಾಯಿಯ ಕಣ್ಣೀರನ್ನ ಒರೆಸುವ ಕೆಲಸ ಮಾಡಬೇಕಿದೆ. ಕನಿಷ್ಠ ಮಾನವೀಯತೆ ದೃಷ್ಟಿಯಿಂದಲಾದರೂ ಸಂಬಂಧಪಟ್ಟ ಅಧಿಕಾರಿಗಳು ಅಥವಾ ಸರ್ಕಾರಿ ಪ್ರತಿನಿಧಿಗಳು ತಕ್ಷಣವೇ ಎಚ್ಚೆತ್ತುಕೊಂಡು, ಈ ವಿದ್ಯಾರ್ಥಿಗೆ ಎಲೆಕ್ಟ್ರಿಕ್ ಸೈಕಲ್ ಹಾಗೂ ಅಗತ್ಯ ಆರ್ಥಿಕ ನೆರವು ಒದಗಿಸಬೇಕು ಎಂಬುದು ಸಾರ್ವಜನಿಕರ ಆಗ್ರಹ.


Click it and Unblock the Notifications
