ಭೋಪಾಲ್ ಅತ್ಯಾಚಾರ ಅಪರಾಧಿಗಳಿಗೆ ಅತ್ಯುಗ್ರ ಶಿಕ್ಷೆ: ಚೌಹಾಣ್ ಭರವಸೆ

Posted By:
Subscribe to Oneindia Kannada

ಭೋಪಾಲ್, ನವೆಂಬರ್ 04: ಇತ್ತೀಚೆಗೆ ಭೋಪಾಲ್ ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳಿಗೆ ಅತ್ಯುಗ್ರ ಶಿಕ್ಷೆ ನೀಡಲಾಗುವುದು ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.

ಯುಪಿಎಸ್ಸಿ ಪರೀಕ್ಷೆ ಬರೆಯಲು ಹೊರಟ ತರುಣಿ ಮೇಲೆ ಸಾಮೂಹಿಕ ಅತ್ಯಾಚಾರ

ಯುಪಿಎಸ್ಸಿ ಪರೀಕ್ಷೆ ಬರೆಯಲು ಸಿದ್ಧಳಾಗುತ್ತಿದ್ದ ಯುವತಿಯ ಮೇಲೆ ಕೆಲ ದಿನಗಳ ಹಿಂದೆ ನಡೆದ ಸಾಮೂಹಿಕ ಅತ್ಯಾಚಾರವನ್ನು ತೀವ್ರವಾಗಿ ಖಂಡಿಸಿದ ಶಿವರಾಜ್ ಸಿಂಗ್ ಚೌಹಾಣ್, ಈ ಅಪರಾಧಿಗಳಿಗೆ ನೀಡುವ ಶಿಕ್ಷೆ, ಇಂಥ ಕೆಲಸ ಮಾಡುವ ಮತ್ತಷ್ಟು ಜನರಿಗೆ ಭಯ ಹುಟ್ಟಿಸಬೇಕು, ಅಂಥ ಶಿಕ್ಷೆ ನೀಡುವುದಾಗಿ ಭರವಸೆ ನೀಡಿದ್ದಾರೆ.

MP gang rape: Shivraj Singh Chouhan ensures strict punishment against culprits

ಈ ಪ್ರಕರಣವನ್ನು ತ್ವರಿತವಾಗಿ ಇತ್ಯರ್ಥಗೊಳಿಸುವುದಾಗಿ ಹೇಳಿದ ಅವರು, ಸಂತ್ರಸ್ಥೆಯ ದೂರನ್ನು ದಾಖಲಿಸಿಕೊಳ್ಳದ ಪೊಲೀಸರ ವಿರುದ್ಧವೂ ಹರಿಹಾಯ್ದರು. ಅಂಥ ಪೊಲಿಸರ ವಿರುದ್ಧ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ ಎಂದರು.

ಭೋಪಾಲಿನ ಸೇತುವೆಯೊಂದರ ಕೆಳಗೆ, ಯುವತಿಯೊಬ್ಬಳನ್ನು ಕಟ್ಟಿ ಹಾಕಿ, ಕಾಮುಕರು ಮೂರು ಗಂಟೆಗಳ ಕಾಲ ಸತತವಾಗಿ ಅತ್ಯಾಚಾರ ನಡೆಸಿದ್ದರು. ನಂತರ ಯುವತಿ ಪೊಲೀಸರಿಗೆ ದೂರು ನೀಡುವುದಕ್ಕೆ ಹೋದರೆ, 'ಯಾವುದೋ ಸಿನೆಮಾ ಕಥೆ ಹೇಳುತ್ತಿದ್ದೀಯಾ' ಎಂದು ಪೊಲೀಸರು ಅಣಕ ಮಾಡಿ ದೂರು ದಾಖಲಿಸಿಕೊಳ್ಳದೆ ಕಳಿಸಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Madhya Pradesh Chief Minister Shivraj Singh Chouhan on Nov 4th condemned the recent gang rape in Bhopal, and ensured that punishment to the culprits will serve as an example for others.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ