ಅತ್ಯಾಚಾರಿಗಳ ಎನ್‌ಕೌಂಟರ್; ಓವೈಸಿ ಏನಂದ್ರು?
ಹೈದರಾಬಾದ್, ಡಿಸೆಂಬರ್ 6; ತೆಲಂಗಾಣದ ಪಶುವೈದ್ಯೆಯ ಅತ್ಯಾಚಾರ ಹಾಗೂ ಕೊಲೆ ಮಾಡಿದ ಆರೋಪಿಗಳ ಎನ್‌ಕೌಂಟರ್ ಘಟನೆಯನ್ನು ಎಐಎಐಎಂ ಪಕ್ಷದ ಅಧ್ಯಕ್ಷ, ಸಂಸದ ಅಸಾದುದ್ದೀನ್ ಓವೈಸಿ ಖಂಡಿಸಿದ್ದಾರೆ.
'ಅತ್ಯಚಾರ ಹಾಗೂ ಕೊಲೆ ಆರೋಪ ಎದುರಿಸುತ್ತಿದ್ದ ನಾಲ್ವರು ಯುವಕರನ್ನು ಪೊಲೀಸರು ಏಕಾಏಕಿ ಎನ್‌ಕೌಂಟರ್ ಮಾಡಿ ಬೀಸಾಕಿರುವುದನ್ನು ನಾನು ವೈಯಕ್ತಿವಾಗಿ ಖಂಡಿಸುತ್ತೇನೆ' ಎಂದು ಅವರು ಹೇಳಿದ್ದಾರೆ. 'ಈ ಘಟನೆ ತನಿಖೆ ಬಗ್ಗೆ ನ್ಯಾಯಾಂಗ ತನಿಖೆ ಪ್ರಾರಂಭವಾಗಿತ್ತು. ಎನ್‌ಕೌಂಟರ್ ಮಾಡುವುದಾದರೇ ನ್ಯಾಯಾಂಗ ತನಿಖೆಯ ಅವಶ್ಯಕತೆ ಏನಿದೆ?' ಎಂದು ಪ್ರಶ್ನಿಸಿರುವ ಅವರು, 'ಏನ್‌ಕೌಂಟರ್ ಮಾಡುವುದಾದರೇ ಮುಂಬೈ ದಾಳಿಯಲ್ಲಿ ಅಜ್ಮಲ್ ಕಸಬ್ ನ ವಿಚಾರಣೆಯನ್ನು ಏಕೆ ಅಷ್ಟು ವರ್ಷ ಮಾಡಲಾಯಿತು?' ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹೈದರಾಬಾದ್ ನ ಪಶುವೈದ್ಯೆ ಅತ್ಯಾಚಾರ ಹಾಗೂ ಕೊಲೆ ಆರೋಪಿಗಳ ಎನ್‌ಕೌಂಟರ್ ಕುರಿತಂತೆ ಸೈಬರಾಬಾದ್ ಪೊಲೀಸ್ ಆಯುಕ್ತ ವಿಶ್ವನಾಥ ಸಜ್ಜನರ ಅವರು ಸ್ಪಷ್ಟನೇ ನೀಡಿದ್ದು, ಆರೋಪಿಗಳು ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದರಿಂದಲೇ ಆತ್ಮರಕ್ಷಣೆಗಾಗಿ ಗುಂಡು ಹಾರಿಸಲಾಗಿದೆ. ಹೀಗಾಗಿ ಘಟನೆಯಲ್ಲಿ ನಾಲ್ವರೂ ಆರೋಪಿಗಳು ಮೃತಪಟ್ಟಿದ್ದಾರೆ ಎಂದು ಹೇಳಿದದ್ದರು.

ಹೈದರಾಬಾದ್ ಸಂಸದ ಆಗಿರುವ ಎಐಎಐಎಂ ಪಕ್ಷದ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಸದಾ ಒಂದಲ್ಲ ಒಂದು ವಿವಾದದ ಹೇಳಿಕೆಗಳನ್ನು ನೀಡಿ ಸಾಮಾಜಿಕ ಜಾಲತಾಣಗಳಲ್ಲಿ ಟೀಕಾಕಾರರಿಗೆ ಆಹಾರವಾಗುತ್ತಾರೆ.











Click it and Unblock the Notifications