ಅದ್ಭುತ ಚಿತ್ರದ ಹಿಂದಿನ ಅಸಲಿ ಕತೆ ಏನು?

ತಾಯಿಯೊಬ್ಬಾಕೆ ಸರಳಿನ ಆಚೆ ಇರುವ ತನ್ನ ಮಗುವಿಗೆ ಹಾಲುಣಿಸುತ್ತಿರುವ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅದ್ಭುತವಾಗಿರುವ ಈ ಚಿತ್ರ ಅಸ್ಸಾಂ ನ 'ಡಿಟೆನ್ಶನ್ ಕ್ಯಾಂಪ್‌' ನದ್ದು ಎಂಬ ಒಕ್ಕಣೆಯೊಂದಿಗೆ ಫೇಸ್‌ಬುಕ್ ಟ್ವಿಟ್ಟರ್‌ಗಳಲ್ಲಿ ಹರಿದಾಡುತ್ತಿದೆ.

'ಎನ್‌ಆರ್‌ಸಿ ನಿಂದಾಗಿ ಪೌರತ್ವ ಕಳೆದುಕೊಂಡ ಮುಸ್ಲಿಂ ತಾಯಿ ತನ್ನ ಮಗುವಿಗೆ ಡಿಟೆನ್ಶನ್ ಕ್ಯಾಂಪ್ ಒಳಗಡೆಯಿಂದಲೇ ಹಾಲುಣಿಸುತ್ತಿದ್ದಾಳೆ, ಅಸ್ಸಾಂ ಒಂದು ರಾಜ್ಯದಲ್ಲಿಯೇ ಈ ಸ್ಥಿತಿಯಾದರೆ ಇಡೀಯ ದೇಶದ ಸ್ಥಿತಿ ಏನಾಗಬಹದು ಊಹಿಸಿ' ಎಂಬ ಒಕ್ಕಣೆ ಈ ಚಿತ್ರಕ್ಕೆ ನೀಡಲಾಗಿದೆ.

Mother Breastfeeding Baby Across The Fence Image Is Not From Assam

ದೇಶದಲ್ಲಿ ಡಿಟೆನ್ಶನ್ ಕ್ಯಾಂಪ್ ಮಾಡಲಾಗುವುದಿಲ್ಲ ಎಂದು ಪ್ರಧಾನಿ ಮೊದಿ ಹೇಳಿದ ಬೆನ್ನಲ್ಲೇ ಈ ಚಿತ್ರ ವೈರಲ್ ಆಗಿದ್ದು, ಬಂಗಾಳಿಗರೊಬ್ಬರು ಹಾಕಿದ್ದ ಈ ಪೋಸ್ಟ್‌ಗೆ ಸಾವಿರಾರು ಶೇರ್‌, ಲೈಕ್‌, ಕಮೆಂಟ್‌ಗಳು ಈ ಚಿತ್ರಕ್ಕೆ ಸಿಕ್ಕಿವೆ. ಈ ಚಿತ್ರ ನಿಜವೂ ಅದ್ಭುತವಾಗಿದೆ ಆದರೆ ಇದಕ್ಕೆ ನೀಡಿರುವ ಒಕ್ಕಣೆ ನಿಜವಲ್ಲ.

ಚಿತ್ರದಲ್ಲಿ ತ್ರಾಸುಪಟ್ಟು ಮಗುವಿಗೆ ಹಾಲುಣಿಸುತ್ತಿರುವ ಮಹಿಳೆ ಅಸ್ಸಾಂನವರಲ್ಲ. ಆ ಚಿತ್ರ ತೆಗೆದಿರುವುದು ಭಾರತದಲ್ಲಿ ಅಲ್ಲ, ಅರ್ಜೆಂಟೀನಾದಲ್ಲಿ.

ಈ ಚಿತ್ರದ ಸಂದರ್ಭವೇನು ಎಂಬುದು ಸರಿಯಾಗಿ ಗೊತ್ತಾಗಿಲ್ಲ. ಯಾವುದೋ ಗಲಭೆ ಆದಾಗ ನೆರೆ-ಹೊರೆ ಪ್ರದೇಶವನ್ನು ಬೇರೆ-ಬೇರೆ ಮಾಡಲು ಮಧ್ಯೆ ಗ್ರಿಲ್‌ಗಳನ್ನು ಹಾಕಲಾಗಿತ್ತು. ಆಗ ಈ ಚಿತ್ರವನ್ನು ತೆಗೆಯಲಾಗಿದೆ ಎನ್ನಲಾಗುತ್ತಿದೆ.

ಈ ಬಗ್ಗೆ ಇಂಡಿಯಾ ಟುಡೆ ಫ್ಯಾಕ್ಸ್ ಚೆಕ್‌ ನಡೆಸಿದ್ದು, ಬ್ಲಾಗ್‌ ಒಂದರಲ್ಲಿ ಈ ಚಿತ್ರವನ್ನು ಮೊದಲಿಗೆ ಪ್ರಕಟಿಸಲಾಗಿದೆ. ಅರ್ಜೆಂಟೀನಾದ ಸ್ಥಳೀಯ ಭಾಷೆಯಲ್ಲಿ ಚಿತ್ರದ ಬಗ್ಗೆ ವರದಿ ಬರೆಯಲಾಗಿದೆ. ಗೂಗಲ್ ಟ್ರಾನ್ಸ್‌ಲೇಟರ್ ಮೂಲಕ ತರ್ಜುಮೆ ಮಾಡಿದಾಗ ಮೇಲಿನ ಮಾಹಿತಿ ಗೊತ್ತಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+