ಚುನಾವಣಾ ಪ್ರಚಾರಕ್ಕೆ ಬಹುತೇಕ ಹೆಲಿಕಾಪ್ಟರ್‌ಗಳು ಬುಕ್
ಮುಂಬೈ, ಮಾರ್ಚ್ 19: ಚುನಾವಣೆ ದಿನಾಂಕ ಘೋಷಣೆ ಆಗುತ್ತಿದ್ದಂತೆ ರಾಜಕೀಯ ಪಕ್ಷಗಳು, ಮುಖಂಡರು ಪ್ರಚಾರದಲ್ಲಿ ನಿರತರಾಗಿದ್ದಾರೆ. ಬಿರುಸಿನ ಪ್ರಚಾರಕ್ಕಾಗಿ ರಾಜಕೀಯ ಮುಖಂಡರು ಹೆಲಿಕಾಪ್ಟರ್‌ಗಳ ಮೊರೆ ಹೋಗಿದ್ದಾರೆ.
ಹೌದು, ಚುನಾವಣೆ ಬಂತೆಂದರೆ ಬಾನಿನಲ್ಲಿ ಹೆಲಿಕಾಪ್ಟರ್‌ಗಳ ಹಾರಾಟ ಹೆಚ್ಚಾಗುತ್ತದೆ. ಈ ಬಾರಿ ಹಾರಲಿರುವ ಹೆಲಿಕಾಪ್ಟರ್‌ಗಳ ಸಂಖ್ಯೆ ಹಿಂದಿಗಿಂತಲೂ ಹೆಚ್ಚಾಗಲಿವೆ.
ಚುನಾವಣೆ ಘೋಷಣೆ ಆಗುತ್ತಿದ್ದಂತೆ, ಬಹುತೇಕ ಹೆಲಿಕಾಪ್ಟರ್ ಸೇವೆ ಒದಗಿಸುವ ಸಂಸ್ಥೆಗಳ ಬಾಗಿಲ ಮುಂದೆ 'ಬುಕಿಂಗ್ ಕ್ಲೋಸ್ಡ್' ಬೋರ್ಡ್‌ಗಳನ್ನು ನೇತು ಹಾಕಲಾಗಿದೆ. ಬಹುತೇಕ ರಾಜಕೀಯ ಪಕ್ಷಗಳು ಹೆಲಿಕಾಪ್ಟರ್‌ಗಳನ್ನು ಪ್ರಚಾರ ಮುಗಿಯುವವರೆಗೂ ಬುಕ್ ಮಾಡಿಯಾಗಿದೆ.

ಬಹುತೇಕ ರಾಜ್ಯಗಳ ಪ್ರಮುಖ ಮುಖಂಡರು ಹೆಲಿಕಾಪ್ಟರ್‌ಗಳನ್ನು ಬುಕ್ ಮಾಡಿಕೊಂಡಿದ್ದಾರೆ. ಅದರ ಜೊತೆಗೆ ಸಣ್ಣ ವಿಮಾನಗಳನ್ನು ಸಹ ಬುಕ್ ಮಾಡಿಕೊಂಡಿದ್ದಾರೆ. ಸಣ್ಣ ಏರ್‌ಸ್ಟ್ರಿಪ್ ಮೇಲೆ ಇಳಿಯುವ ಈ ವಿಮಾನಗಳಿಗೆ ಈ ಬಾರಿ ದೇಶದಾದ್ಯಂತ ಬೇಡಿಕೆ ಹೆಚ್ಚಿದೆಯಂತೆ.
ದೇಶದಾದ್ಯಂತ 275 ನೊಂದಣಿ ಆಗಿರುವ ಹೆಲಿಕಾಪ್ಟರ್‌ಗಳು ಇವೆ. ಸರ್ಕಾರಿ ಹೆಲಿಕಾಪ್ಟರ್‌ಗಳು, ಸಂಘ-ಸಂಸ್ಥೆಯವು, ಖಾಸಗಿ ಮತ್ತು ಸೇವೆ ಒದಗಿಸುವ ಹೆಲಿಕಾಪ್ಟರ್‌ಗಳು ಇನ್ನೂ ಹಲವು ಇವೆ.
ರಾಜ್ಯದಲ್ಲಿ ಸಹ ಈಗಾಗಲೇ ರಾಜಕೀಯ ಮುಖಂಡರುಗಳು ಹೆಲಿಕಾಪ್ಟರ್‌ಗಳನ್ನು ಬುಕ್ ಮಾಡಿಕೊಂಡಿದ್ದಾರೆ. ಜೊತೆಗೆ ಇಲ್ಲಿನ ಕೆಲವು ನಾಯಕರ ಬಳಿ ಸ್ವಂತದ ಹೆಲಿಕಾಪ್ಟರ್‌ಗಳು ಸಹ ಇವೆ.
ಹೆಲಿಕಾಪ್ಟರ್‌ಗಳಲ್ಲಿ ಅವುಗಳ ಸಾಮರ್ಥ್ಯಕ್ಕೆ ತಕ್ಕಂತೆ ಹಲವು ವಿಧಗಳು ಇರುತ್ತವೆ. ಡಬಲ್ ಎಂಜಿನ್ ಹೆಲಿಕಾಪ್ಟರ್, ಹೆಚ್ಚು ಪ್ರಯಾಣಿಕರ ಹೊತ್ತೊಯ್ಯುವ ಸಾಮರ್ಥ್ಯ ಇರುವ ಹೆಲಿಕಾಪ್ಟರ್‌ಗಳು ಹೀಗೆ ಹಲವು ವಿಧಧ ಹೆಲಿಕಾಪ್ಟರ್‌ಗಳು ಇವೆ.
ಹೆಲಿಕಾಪ್ಟರ್‌ಗಳ ಸಾಮರ್ಥ್ಯಗಳ ಆಧಾರದಲ್ಲಿ ಅವುಗಳ ಬಾಡಿಗೆ ನಿರ್ಧರಿತವಾಗಿರುತ್ತದೆ. ಗಂಟೆ ಒಂದಕ್ಕೆ 75,000 ದಿಂದ 3,50,000 ಲಕ್ಷ ಬಾಡಿಗೆಗೆ ದೊರಕುವ ಹೆಲಿಕಾಫ್ಟರ್‌ಗಳು ಮಾರುಕಟ್ಟೆಯಲ್ಲಿ ಇವೆ. ಅವು ಹಾರಾಟ ನಡೆಸುವ ಅವಧಿ ಮಾತ್ರವೇ ಬಾಡಿಗೆಗೆ ಪರಿಗಣಿಸಲಾಗುತ್ತದೆ. ಕೆಲವು ಸಂಸ್ಥೆಗಳು ದಿನದ ಲೆಕ್ಕದಲ್ಲೂ ಬಾಡಿಗೆಗೆ ನೀಡುತ್ತವೆ.
ಹೆಲಿಕಾಫ್ಟರ್‌ಗಳಲ್ಲಿ ಸಾಮಾನ್ಯವಾಗಿ 15 ರಿಂದ 30 ನಿಮಿಷಗಳಷ್ಟೆ ಹಾರಾಟ ಮಾಡುತ್ತಾರೆ. ಅವು ಒಂದು ರಾಜ್ಯದ ಒಳಗಷ್ಟೆ ಸಂಚರಿಸಲು ಬಳಸುವ ಕಾರಣ ದೀರ್ಘವಾದ ಸಂಚಾರ ಸಾಮಾನ್ಯವಾಗಿ ಹೆಲಿಕಾಪ್ಟರ್‌ಗಳಲ್ಲಿ ಮಾಡುವುದಿಲ್ಲ.












Click it and Unblock the Notifications