ಚಿತ್ತೂರಿನಲ್ಲಿ ಎನ್ ಕೌಂಟರ್ 20 ಸ್ಮಗ್ಲರ್ಸ್ ಬಲಿ

ಚಿತ್ತೂರು, ಏ,7 : ಆಂಧ್ರಪ್ರದೇಶದ ಚಿತ್ತೂರು ಅರಣ್ಯ ಪ್ರದೇಶದಲ್ಲಿ 20ಕ್ಕೂ ಅಧಿಕ ರಕ್ತ ಚಂದನ, ಗಂಧದ ಮರಗಳ ಕಳ್ಳರನ್ನು ಪೊಲೀಸರು ಹತ್ಯೆ ಮಾಡಿದ್ದಾರೆ. ಸ್ಥಳೀಯ ಪೊಲೀಸರು ಹಾಗೂ ಅರಣ್ಯ ಅಧಿಕಾರಿಗಳು ಚಂದಗಿರಿ ಪ್ರದೇಶದಲ್ಲಿ ಕೂಂಬಿಂಗ್ ಕಾರ್ಯಾಚರಣೆ ನಡೆಸಿದರು.

ಕೂಂಬಿಂಗ್ ಕಾರ್ಯಾಚರಣೆ ವೇಳೆ ಭಾರೀ ಶಸ್ತ್ರಾಸ್ತ್ರ ಹೊಂದಿದ್ದ ಕಾಡುಗಳ್ಳರ ತಂಡ ಗುಂಡಿನ ದಾಳಿ ನಡೆಸಿತ್ತು. ಅದರೆಮ್ ಭರ್ಜರಿ ಕಾರ್ಯಾಚರಣೆಯಲ್ಲಿ 20 ಮಂದಿ ಕಾಡುಗಳ್ಳರು ಸ್ಥಳದಲ್ಲೇ ಮೃತಪಟ್ಟರೆ, 8 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಇಬ್ಬರು ಅಧಿಕಾರಿಗಳಿಗೂ ಗಾಯಗಳಾಗಿವೆ.

Gunbattle in Tirupati: More than 20 sandalwood smugglers killed

80 ಮಂದಿ ಸ್ಮಗ್ಲರ್ ಗಳು: ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಶೇಷಾಚಲಂ ಅರಣ್ಯ ಪ್ರದೇಶದ ಚಂದಗಿರಿಯಲ್ಲಿ ಸುಮಾರು 80 ಮಂದಿ ಇರುವ ಮಾಹಿತಿ ಸಿಕ್ಕಿತ್ತು. ಸ್ಥಳೀಯ ಪೊಲೀಸರ ನೆರವಿನಿಂದ ಅರಣ್ಯ ಅಧಿಕಾರಿಗಳು ಕೂಂಬಿಂಗ್ ಕಾರ್ಯಾಚರಣೆ ಯಶಸ್ವಿಗೊಳಿಸಿದ್ದಾರೆ. ಕಡಪ ಹಾಗೂ ಚಿತ್ತೂರು ಭಾಗದಲ್ಲಿ ರಕ್ತ ಚಂದನ ಸ್ಮಗಲಿಂಗ್ ಅಧಿಕವಾಗಿದ್ದು, ಪ್ರತಿ ಟನ್ನಿಗೆ 10 ಲಕ್ಷ ರು ಬೆಲೆ ಇದೆ.

ಮಂಗಳವಾರ ಬೆಳಗ್ಗೆ ಆರಂಭವಾದ ಗುಂಡಿನ ಕಾಳಗ ಮುಂದುವರೆಯಲಿದ್ದು, ಕಳ್ಳಸಾಗಣೆಗಾರರನ್ನು ಸಂಪೂರ್ಣವಾಗಿ ಹಿಡಿಯುವ ತನಕ ಕಾರ್ಯಾಚರಣೆ ನಡೆಯಲಿದೆ ಎಂದು ವಿಶೇಷ ಟಾಸ್ಕ್ ಪೋರ್ಸ್ ಅಧಿಕಾರಿಗಳು ಹೇಳಿದ್ದಾರೆ.

ಪೊಲೀಸರ ಗುಂಡಿನ ದಾಳಿಯಲ್ಲಿ ಮೃತಪಟ್ಟಿರುವವರೆಲ್ಲರೂ ತಮಿಳುನಾಡಿನವರು ಎಂದು ತಿಳಿದು ಬಂದಿದೆ. ತಮಿಳುನಾಡಿನ ಕೃಷ್ಣಗಿರಿ, ವೆಲ್ಲೂರು ಮತ್ತು ತಿರುವಣ್ಣಾಮಲೈ ಜಿಲ್ಲೆಗಳಿಗೆ ಸೇರಿದವರೆಂದು ಗೊತ್ತಾಗಿದೆ.
ಆದರೆ, ದಾಳಿಯ ಬಗ್ಗೆ ಸಂಶಯ ವ್ಯಕ್ತಪಡಿಸಿರುವ ಮೃತರ ಕುಟುಂಬಸ್ಥರು, ಎನ್ ಕೌಂಟರ್ ಹೆಸರಿನಲ್ಲಿ ಕೂಲಿ ಕಾರ್ಮಿಕರನ್ನು ಬಲಿ ತೆಗೆದುಕೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ.

2013ರ ಡಿಸೆಂಬರ್ 13ರಂದು ಚಿತ್ತೂರು ಜಿಲ್ಲೆ ಶೇಷಾಚಲಂ ಅರಣ್ಯ ಪ್ರದೇಶದಲ್ಲಿ ರಕ್ತಚಂದನ ಕಳ್ಳ ಸಾಗಣೆದಾರರು ಡೇವಿಡ್ ಮತ್ತು ಶ್ರೀಧರ್ ಎಂಬ ಇಬ್ಬರು ಅರಣ್ಯ ಅಧಿಕಾರಿಗಳನ್ನು ಹತ್ಯೆ ಮಾಡಿದ್ದರು. ಜತೆಗೆ ಒಂದಿಬ್ಬರು ಪೊಲೀಸರನ್ನು ಹತ್ಯೆ ಮಾಡಲಾಗಿತ್ತು. ಆಂಧ್ರಪ್ರದೇಶ ಡಿಜಿಪಿ ರಾಮುಡು ಅವರು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಈ ಪ್ರಕರಣದ ಸಂಪೂರ್ಣ ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+