ಜುಲೈ 6ರಿಂದ 8ರವರೆಗೆ ಕರ್ನಾಟಕದ ಕರಾವಳಿಯಲ್ಲಿ ಭಾರಿ ಮಳೆ ಸಂಭವ
Recommended Video

ನವದೆಹಲಿ, ಜುಲೈ 4: ದೇಶದೆಲ್ಲೆಡೆ ಪ್ರಬಲಗೊಂಡಿರುವ ಮಾನ್ಸೂನ್, ಕರ್ನಾಟಕ ಮತ್ತು ಮಹಾರಾಷ್ಟ್ರದ ಕರಾವಳಿಗಳಲ್ಲಿ ಮತ್ತಷ್ಟು ತೀವ್ರವಾಗುವ ಸಾಧ್ಯತೆ ಇದೆ.
ಜುಲೈ 6-8ರ ಅವಧಿಯಲ್ಲಿ ಕೇಂದ್ರ ಭಾರತ, ಪಶ್ಚಿಮ ಬಂಗಾಳ, ತೆಲಂಗಾಣ ಮತ್ತು ಆಂಧ್ರಪ್ರದೇಶಗಳಲ್ಲಿ ಮಾನ್ಸೂನ್ ಅಬ್ಬರಿಸುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮಾನ್ಸೂನ್ ಮಾರುತಗಳ ಚಲನೆಯಲ್ಲಿ ಭಾರಿ ಬದಲಾವಣೆ ಉಂಟಾದ ಕಾರಣ ಜುಲೈ 6 ರಿಂದ ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ ಮತ್ತು ಆಂಧ್ರಪ್ರದೇಶಗಳಲ್ಲಿ ಮಳೆ ಹೆಚ್ಚಲಿದೆ. 8ರಿಂದ ಭಾರತದ ಕೇಂದ್ರ ಭಾಗದಲ್ಲಿ ಮಳೆ ಬಿರುಸುಗೊಳ್ಳಲಿದೆ.

ಮುಂಬೈ ಮತ್ತು ಅದರ ಸುತ್ತಮುತ್ತಲ ಪ್ರದೇಶಗಳಲ್ಲಿ ಮಂಗಳವಾರವೂ ಭಾರಿ ಮಳೆಯಾಗಿದೆ. ಕಳೆದ 24 ಗಂಟೆಗಳಲ್ಲಿ ಆಗಾಗ ಬಿಡುವು ನೀಡಿದ ಮಳೆಯು ಬುಧವಾರವೂ ಮುಂಬೈ, ಥಾಣೆ ಮತ್ತು ರಾಯಗಡ ಪ್ರದೇಶಗಳಲ್ಲಿ ಅಬ್ಬರಿಸಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಮುಂಗಾರು ಮಾರುತದ ಪಶ್ಚಿಮ ಭಾಗವು ಸಮುದ್ರಮಟ್ಟದಲ್ಲಿ ಸಾಗುತ್ತಿವೆ. ಗಂಗಾನಗರ, ಹಿಸ್ಸಾರ್, ಶಹಜೆನ್ಪುರ್, ಗೋರಖ್‌ಪುರ ಮತ್ತು ಹಿಮಾಲಯ ಬೆಟ್ಟ ಸಾಲಿನ ಪೂರ್ವ ಭಾಗಗಳಲ್ಲಿ ವ್ಯಾಪಿಸಿದೆ.
ವಾಯವ್ಯ ಬಂಗಾಳ ಕೊಲ್ಲಿ ಮತ್ತು ಪಶ್ಚಿಮ ಬಂಗಾಳ ಕರಾವಳಿಯಲ್ಲಿ ಜುಲೈ 6ರ ಸುಮಾರಿಗೆ ಚಂಡಮಾರುತದ ಸನ್ನಿವೇಶ ಸೃಷ್ಟಿಯಾಗುವ ಸಾಧ್ಯತೆ ಇದೆ.

ಇದರ ಜತೆಗೆ ಮಾನ್ಸೂನ್‌ನ ಪೂರ್ವ ಭಾಗಗಳು ದಕ್ಷಿಣ ದಿಕ್ಕಿನೆಡೆಗೆ ಸಾಗಲಿದ್ದು, ಜುಲೈ 7ರ ಬಳಿಕ ಸಹಜ ಸ್ಥಿತಿಗೆ ಮರಳಿವೆ ಎಂದು ಇಲಾಖೆ ಮಾಹಿತಿ ನೀಡಿದೆ.
ಮುಂದಿನ 24 ಗಂಟೆಗಳಲ್ಲಿ ಮುಂಬೈನಲ್ಲಿ ಭಾರಿಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಮಂಗಳವಾರ ಮುಂಬೈನ ಪೂರ್ವ ಪ್ರದೇಶಗಳಲ್ಲಿ ಅತ್ಯಧಿಕ ಮಳೆ ದಾಖಲಾಗಿದೆ. ಕುರ್ಲಾದಲ್ಲಿ ಮಧ್ಯಾಹ್ನ 3 ಗಂಟೆ ವೇಳೆಗೆ 208 ಮಿ.ಮೀ. ಮಳೆ ಸುರಿದಿತ್ತು. ವಿಖ್ರೋಲಿಯಲ್ಲಿ 192 ಮಿ.ಮೀ., ಎನ್. ವಾರ್ಡ್ 184 ಮಿ.ಮೀ. ಮಳೆ ದಾಖಲಾಗಿದೆ.
ಕರಾವಳಿ ಕರ್ನಾಟಕ, ತಮಿಳುನಾಡು, ಲಕ್ಷದ್ವೀಪ, ಹರಿಯಾಣ, ಗೋವಾ, ಮಣಿಪುರ, ನಾಗಾಲ್ಯಾಂಡ್, ಮಿಜೋರಾಂ, ತ್ರಿಪುರಾ, ಕೊಂಕಣ, ಒಡಿಶಾ, ಜಾರ್ಖಂಡ್, ಚಂಡೀಗಡ, ಛತ್ತೀಡಸಗಡದಲ್ಲಿ ಭಾರಿ ಮಳೆ ಸುರಿಯಲಿದೆ ಎಂದು ಇಲಾಖೆ ತಿಳಿಸಿದೆ.












Click it and Unblock the Notifications