ಕರ್ನಾಟಕ ಕರಾವಳಿ,ಕೊಂಕಣ ಗೋವಾದಲ್ಲಿ ಭಾರಿ ಮಳೆ!
ಬೆಂಗಳೂರು, ಜುಲೈ 08: ಮುಂಗಾರು ಮಳೆ ಮಾರುತಗಳು ಕರ್ನಾಟಕದ ಕಡೆಗೆ ತಿರುಗಿದ್ದು, ರಾಜ್ಯದ ಕರಾವಳಿ, ಕೊಂಕಣ ಹಾಗೂ ಗೋವಾದಲ್ಲಿ ಭಾರಿ ಮಳೆಯ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ನೀಡಿದೆ.
ಕರ್ನಾಟಕದ ಉತ್ತರ ಒಳನಾಡು, ಕೇರಳ, ತೆಲಂಗಾಣ, ಗುಜರಾತ್ ಪ್ರದೇಶ ಹಾಗೂ ಮಧ್ಯ ಮಹಾರಾಷ್ಟ್ರ, ಛತ್ತೀಸ್ ಗಢ, ಒಡಿಶಾ ಮತ್ತು ಪಶ್ಚಿಮ ಬಂಗಾಳ, ಸಿಕ್ಕಿಂನ ಹಿಮಾಲಯ ಪ್ರದೇಶದಲ್ಲಿ ಮುಂದಿನ ನಾಲ್ಕು ದಿನಗಳಲ್ಲಿ ಭಾರಿ ಮಳೆ ಸುರಿಯಲಿದೆ.

ಬಂಗಾಳ ಕೊಲ್ಲಿಯ ಕಡಿಮೆ ತೀವ್ರತೆ ಒತ್ತಡದ ಪ್ರದೇಶಗಳಲ್ಲಿ ಮಾರುತಗಳು ಸಾಗಿದ್ದು,ನಹಾನ್, ಶಹಾಪುರ್, ವಾರಣಾಸಿ, ಪುರ್ನಿಯಾ, ದಿಘಾ ಮುತಾಂದೆಡೆ ಮಳೆ ನಿರೀಕ್ಷಿಸಬಹುದು. ಈ ಪ್ರದೇಶಗಳಲ್ಲಿ 7.6 ಕಿ.ಮೀ ತೀವ್ರತೆಯ ಗಾಳಿ ಬೀಸಲಿದೆ.
ಪಶ್ಚಿಮ ಕರಾವಳಿಯಲ್ಲಿ ಮುಂದಿನ 34ದಿನಗಳಲ್ಲಿ ಮಳೆಯ ವಾತಾವರಣ ಮುಂದುವರೆಯಲಿದೆ. ಅರಬ್ಬೀ ಸಮುದ್ರದಲ್ಲಿ ಮುಂದಿನ ತಿಂಗಳಿನ ತನಕ ಮೀನುಗಾರಿಕೆ ಮಾಡದಂತೆ ಬೆಸ್ತರಿಗೆ ಎಚ್ಚರಿಕೆ ನೀಡಲಾಗಿದೆ.












Click it and Unblock the Notifications