ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಉತ್ತರ ಒಳನಾಡಿನಲ್ಲಿ ಭಾರೀ ಮಳೆ ಸಾಧ್ಯತೆ

|
Google Oneindia Kannada News

ಬೆಂಗಳೂರು, ಜುಲೈ 06: ಕರ್ನಾಟಕದ ಉತ್ತರ ಒಳನಾಡಿನ ಜಿಲ್ಲೆಗಳಾದ ಬೆಳಗಾವಿ, ಬೀದರ್, ವಿಜಯಪುರ, ಧಾರವಾಡ, ಕಲಬುರಗಿ ಮತ್ತು ರಾಯಚೂರುಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಅಷ್ಟೇ ಅಲ್ಲ, ಎಂದಿನಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಗಳಲ್ಲೂ ಮಳೆಯಾಗುವ ನಿರೀಕ್ಷೆ ಇದೆ.

ಕರ್ನಾಟಕದಲ್ಲಿ ದಾಖಲೆ ಮಳೆ: ಉ.ಕದಲ್ಲಿ ಮಳೆಯ ಅಭಾವ ಕರ್ನಾಟಕದಲ್ಲಿ ದಾಖಲೆ ಮಳೆ: ಉ.ಕದಲ್ಲಿ ಮಳೆಯ ಅಭಾವ

ಕರ್ನಾತಕದ ಇನ್ನಿತರ ಜಿಲ್ಲೆಗಳಲ್ಲಿ ಗುಡುಗು, ಮಿಂಚು ಮತ್ತ ಭಾರೀ ಗಾಳಿ ಕಂಡುಬರಲಿದ್ದು ಅಲ್ಲಲ್ಲಿ ಕೊಂಚ ಮಳೆ ಬೀಳಲಿದೆ.

Monsoon Update: Heavy rain in coastal and north interior of Karnataka

ಇನ್ನುಳಿದಂತೆ ದೇಶದ ಇತರ ರಾಜ್ಯಗಳಾದ ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರಗಳಲ್ಲಿ ಧಾರಾಕಾರ ಮಳೆ ಸುರಿಯಲಿದೆ. ಛತ್ತೀಸ್ ಗಢ ಪಶ್ಚಿಮ ಬಂಗಾಳ, ಸಿಕ್ಕಿಮ್, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಮ್, ತ್ರಿಪುರ, ಗುಜರಾತ್, ತೆಲಂಗಾಣಗಳಲ್ಲೂ ಭಾರೀ ಮಳೆಯಾಗುವ ನಿರೀಕ್ಷೆಯಿದೆ.

ತಮಿಳಿನಾಡು, ರಾಯಲಸೀಮೆ, ಆಂಧ್ರ ಮತ್ತಉ ತೆಲಂಗಾಣ ಕರಾವಳಿಯಲ್ಲಿ ಗುಡುಗು, ಮಿಂಚು ಸಹಿತ ಗಾಳಿ ಕಂಡುಬರಲಿದ್ದು, ಕೊಂಚ ಮಳೆಯಾಗಲಿದೆ.

2007 ರ ನಂತರ ರಾಜ್ಯದಲ್ಲಿ ದಾಖಲಾದ ದಾಖಲೆ ಮಳೆ ಇದಾಗಿದ್ದು, ಜೂನ್ ತಿಮಗಳಿನಲ್ಲಿ ರಾಜ್ಯದಲ್ಲಿ ಸರಾಸರಿ 236 ಮಿ.ಮೀ.ಮಳೆಯಾಗಿದೆ. ಮಲೆನಾಡು, ಕರಾವಳಿಯಲ್ಲಿ ಅಧಿಕ ಮಳೆಯಾಗಿದ್ದರೂ, ಉತ್ತರ ಕರ್ನಾಟಕದ ಜನರು ಮಾತ್ರ ಮಳೆಯ ಅಭಾವದಿಂದ ಪರಿತಪಿಸುತ್ತಿದ್ದಾರೆ.

English summary
Monsoon Update: Heavy rain in coastal and nort interior districts of Karnataka. North Interior Karnataka, which includes: Belgaum, Bidar, Bijapur, Dharwad, Gulbarga and Raichur districts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X