IMD Cyclone Alert: ಚಂಡಮಾರುತ ಪ್ರಸರಣ ತೀವ್ರತೆ ಹೆಚ್ಚಳ: ಧಾರಾಕಾರ ಮುಂಗಾರು ಮಳೆ.. Rain Alert
IMD Weather Prediction: ದೇಶವ್ಯಾಪಿ ಮುಂಗಾರು ಮಳೆ ಅಷ್ಟಾಗಿ ಜೋರಾಗಿಲ್ಲ. ಆದರೆ ಮೂರು ವಾರಗಳಿಂದಲೂ ಕೆಲವು ಭಾಗಗಳಲ್ಲಿ ನಿರಂತರವಾಗಿ ಸುರಿಯುತ್ತಿದೆ. ಕಳೆದ ವಾರ ಸೃಷ್ಟಿಯಾಗಿ ಕಡಿಮೆಯಾಗಿದ್ದ ಚಂಡಮಾರುತ ಪ್ರಸರಣ (Cyclonic Circulation) ಇದೀಗ ಮತ್ತೆ ಸೃಷ್ಟಿಯಾಗಿದೆ. ಅಷ್ಟೇ ಅಲ್ಲದೇ ತೀವ್ರಗೊಂಡಿದ್ದು, ಅಧಿಕ ಮುಂಗಾರು ಮಳೆ (Monsoon Rains) ಸುರಿಯುವಿಕೆಗೆ, ವೇಗದ ಬೀರುಗಾಳಿಗೆ ಸಾಕ್ಷಿಯಾಗಲಿದೆ.
ದೇಶದ ಮೂರು ಕಡೆಗಳಲ್ಲಿ ಸೃಷ್ಟಿಯಾಗಿ ಹವಾಮಾನ ವೈಪರೀತ್ಯ ಇನ್ನೇನು ಕಡಿಮೆ ಆಯಿತು ಎನ್ನುವಷ್ಟರಲ್ಲಿ ಈ ವಾರದ ಮೊದಲ ದಿನವೇ ಉಲ್ಬಣಗೊಂಡಿದೆ. ಅರಬ್ಬಿ ಸಮುದ್ರ ಮಟ್ಟದಲ್ಲಿನ ಹಾಲಿ ಹವಾಮಾನ ವೈಪರೀತ್ಯವು ಬಿಕಾನೇರ್ ಮೂಲಕ ಹಾದುಹೋಗುತ್ತದೆ. ರಾಜಸ್ಥಾನದ ಈಶಾನ್ಯ ಭಾಗ, ಮಧ್ಯಪ್ರದೇಶದ ವಾಯುವ್ಯ ದಿಕ್ಕಿನ ಮೂಲಕ ವೇಗದ ಬಿರುಗಾಳಿಯು ಸಾಗಲಿದೆ. ರಾಂಚಿಯಲ್ಲಿ ಸ್ಪಷ್ಟ ಚಂಡಮಾರುತ ಪ್ರಸರಣ ಅಥವಾ ಕಡಿಮೆ ಒತ್ತಡದ ಪ್ರದೇಶದ ಕೇಂದ್ರವಾಗಿ ಗುರುತಿಸಲ್ಪಟ್ಟಿದೆ.

ಪಶ್ಚಿಮ ಬಂಗಾಳ ಆಗ್ನೇಯ ಭಾಗ ಹಾಗೂ ಪಕ್ಕದ ಬಾಂಗ್ಲಾದೇಶದ ಮೇಲೆ ಇದರ ಪ್ರಭಾವ ಹೆಚ್ಚಾಗಿದೆ. ಕಡಿಮೆ ಒತ್ತಡ ಪ್ರದೇಶದಿಂದ ಈ ಭಾಗದಲ್ಲಿ ಮುಂಗಾರು ಆರ್ಭಟ ಜೋರಾಗಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಜುಲೈ 14ರ ಹವಾಮಾನ ಮುನ್ಸೂಚನೆ ಪ್ರಕಾರ, ವಾಯುವ್ಯ ಮಧ್ಯಪ್ರದೇಶದಿಂದ ನಿಧಾನವಾಗಿ ಪಶ್ಚಿಮ-ವಾಯುವ್ಯಕ್ಕೆ ಚಲಿಸಿಸುತ್ತಿದೆ. ಈ ಭೂಮಿ ಮೇಲ್ಮೈ ಚಂಡಮಾರುತವು ಸಮುದ್ರ ಮಟ್ಟಕ್ಕಿಂತ ಸರಾಸರಿ 7.6 ಕಿಲೋ ಮೀಟರ್ ಎತ್ತರದವರೆಗೆ ಇದೆ. ಜುಲೈ 16ರ ಹೊತ್ತಿಗೆ ರಾಜಸ್ಥಾನ ರಾಜ್ಯಾದ್ಯಂತ ಪಶ್ಚಿಮ-ವಾಯುವ್ಯ ಪ್ರದೇಶ ದಾಟುವ ನಿರೀಕ್ಷೆ ಇದೆ.
ವಿವಿಧೆಡೆ ಮುಂಗಾರು ಮತ್ತೆ ಚುರುಕು
ಬಾಂಗ್ಲಾದೇಶದ ನೈಋತ್ಯ ಪ್ರದೇಶ ಮತ್ತು ಪಶ್ಚಿಮ ಬಂಗಾಳದ ಮೇಲೆ ಸಹ ಮತ್ತೊಂದು ಸ್ಟ್ರಫ್ ಅನ್ನು ಗುರುತಿಸಲಾಗಿದೆ. ಇದು ಭಾನುವಾರ ಸೃಷ್ಟಿಯಾಗಿದ್ದು, ಮುಂದಿನ ಎರಡು ಮೂರು ದಿನಗಳಲ್ಲಿ ತೀವ್ರಗೊಳ್ಳುವ ನಿರೀಕ್ಷೆ ಇದೆ. ಈ ವಾಯು ಚಂಡಮಾರುತದ ಪರಿಚಲನೆಯು ಸಮುದ್ರ ಮಟ್ಟದಿಂದ 7 ಕಿಲೋ ಮೀಟರ್‌ದಷ್ಟು ವಿಸ್ತರಿಸಿಕೊಂಡಿದೆ. ಮುಂದಿನ ಕೇವಲ 24 ಗಂಟೆಗಳಲ್ಲಿ ವಾಯುವ್ಯ ದಿಕ್ಕಿಗೆ ಚಲಿಸಿ ದುರ್ಬಲಗೊಳ್ಳುವ ನಿರೀಕ್ಷೆ ಇದೆ.
Sub: Update on two Low pressure Systems based on 0530 hrs IST of today, the 14th July (issued at 0845 hrs IST)
— India Meteorological Department (@Indiametdept) July 14, 2025
Low pressure area over northwest Madhya Pradesh & adjoining east Rajasthan: The low pressure area over northwest Madhya Pradesh & neighbourhood moved slowly… pic.twitter.com/d7Iijy9QXz
ಇತ್ತ ಬಂಗಾಳಕೊಲ್ಲಿ ಹಾಗೂ ಅರಬ್ಬಿ ಸಮುದ್ರದ ಕೇರಳ ಭಾಗದಲ್ಲಿ ಸಣ್ಣ ಪ್ರಮಾಣದಲ್ಲಿ ಸ್ಟ್ರಫ್ ಸೃಷ್ಟಿಯಾಗಿದೆ. ಇದರ ತೀವ್ರತೆ ಮತ್ತಷ್ಟು ಹೆಚ್ಚಾದರೆ ವ್ಯಾಪಕ ಮುಂಗಾರು ಮಳೆ ಅಬ್ಬರಿಸಲಿದೆ. ಕೇವಲ ಕೇರಳ ಮಾತ್ರವಲ್ಲದೇ, ಕರ್ನಾಟಕ ಕರಾವಳಿ, ಆಂಧ್ರ, ಒಡಿಶಾ ಭಾಗದಲ್ಲಿ ಹೆಚ್ಚಿನ ಮಳೆ ನಿರೀಕ್ಷೆ ಇದೆ.












Click it and Unblock the Notifications