48 ಗಂಟೆಯಲ್ಲಿ ಕೇರಳಕ್ಕೆ ಮುಂಗಾರು ಮಳೆ ಪ್ರವೇಶ?
ನವದೆಹಲಿ,ಜೂನ್4: ಕರ್ನಾಟಕದಲ್ಲಿ ಉತ್ತಮ ಮಳೆಯಾಗುತ್ತಿದ್ದು ಮುಂದಿನ 72 ಗಂಟೆಯೊಳಗೆ ರಾಜ್ಯಕ್ಕೆ ಮುಂಗಾರು ಮಳೆ ಪ್ರವೇಶವಾಗುವ ಸಾಧ್ಯತೆಯಿದೆ.
ಮುಂಗಾರು ಮಳೆ ಮಾರುತಗಳು ಈಗಾಗಲೇ ಶ್ರೀಲಂಕಾ ದಾಟಿ ನೈರುತ್ಯ ಭಾಗದತ್ತ ಚಲಿಸುತ್ತಿವೆ. ಕೇರಳದಲ್ಲಿ ಸೋಮವಾರದಿಂದ ಪೂರ್ವ ಮುಂಗಾರು ಮಳೆ ಆರಂಭವಾಗಿದ್ದು, ಮುಂದಿನ 48 ಗಂಟೆಯಲ್ಲಿ ತಿರುವನಂತಪುರ ಮೂಲಕ ಪ್ರಸಕ್ತ ವರ್ಷದ ಮುಂಗಾರು ಭಾರತ ಪ್ರವೇಶಿಸುತ್ತದೆ ಎಂದು ಹವಾಮಾನ ಇಲಾಖೆ(ಐಎಂಡಿ) ಪ್ರಕಟಣೆಯಲ್ಲಿ ತಿಳಿಸಿದೆ.

ಈ ಹಿಂದೆ ಭಾರತೀಯ ಹವಾಮಾನ ಇಲಾಖೆ ಈ ಬಾರಿ ಮುಂಗಾರುಮಳೆ ಮೂರು ದಿನ ಮೊದಲೇ ಭಾರತ ಪ್ರವೇಶಿಸಲಿದೆ ಎಂದು ಹೇಳಿತ್ತು. ಹೀಗಾಗಿ ಜೂನ್ 3 ರಂದು ರಾಜ್ಯಕ್ಕೆ ಮುಂಗಾರು ಮಳೆ ಆಗಮನವಾಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಈ ನಿರೀಕ್ಷೆ ತಪ್ಪಾಗಿದ್ದು ನಿಗದಿಯಂತೆ ಈ ವರ್ಷವೂ ಮುಂಗಾರು ಮಳೆ ಜೂನ್ 5 ಅಥವಾ 6ರಂದು ಕರ್ನಾಟಕ ರಾಜ್ಯ ಪ್ರವೇಶಿಸುವ ಸಾಧ್ಯತೆಯಿದೆ.[ಜೂ.2ರಂದು ರಾಜ್ಯಕ್ಕೆ ಮುಂಗಾರು ಪ್ರವೇಶ ಸಾಧ್ಯತೆ]
ಮಾನ್ಸೂನ್ ಮಾರುತಗಳು ಬಂಗಾಳ ಕೊಲ್ಲಿ ಮೂಲಕ ಶ್ರೀಲಂಕಾಕ್ಕೆ ಬಂದು, ಕೇರಳ ಮೂಲಕವಾಗಿ ಕರ್ನಾಟಕ ಪ್ರವೇಶಿಸುತ್ತವೆ. ಜುಲೈ ಆಗಸ್ಟ್ ತಿಂಗಳಿನಲ್ಲಿ ದೇಶದೆಲ್ಲೆಡೆ ವಾಡಿಕೆಯ ಪ್ರಕಾರ ಬೀಳಬೇಕಾದ ಮಳೆಯ ಪ್ರಮಾಣದಲ್ಲಿ ಈ ವರ್ಷ ಶೇ.95ರಷ್ಟು ಕಡಿಮೆ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಆರಂಭದಲ್ಲಿ ಕರಾವಳಿ ಜಿಲ್ಲೆಗಳು, ಪಶ್ಚಿಮ ಘಟ್ಟ, ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಮಳೆಯಾಗುತ್ತದೆ. ಇಡೀ ರಾಜ್ಯದಲ್ಲಿ ಮುಂಗಾರು ವ್ಯಾಪಿಸಿಕೊಳ್ಳಲು ಒಂದು ವಾರ ಬೇಕಾಗುತ್ತದೆ.













Click it and Unblock the Notifications