ಕೇರಳ ಸೇರಿ ನೈರುತ್ಯ ರಾಜ್ಯಗಳಿಗೆ ಎಂಟ್ರಿ ಕೊಟ್ಟ ಮುಂಗಾರು: ಅಸ್ಸಾಂನಲ್ಲಿ ಚಂಡಮಾರುತಕ್ಕೆ ಇಬ್ಬರು ಬಲಿ!
ದೇಶಕ್ಕೆ ಈ ವರ್ಷದ ಮುಂಗಾರು ಮಳೆ ಗುರುವಾರ ಕಾಲಿಟ್ಟಿದೆ. ನಿರೀಕ್ಷೆಗಿಂತ ಒಂದು ದಿನ ಮೊದಲೇ ಕೇರಳಕ್ಕೆ ಹಾಗೂ ಈಶಾನ್ಯ ರಾಜ್ಯಗಳಿಗೆ ಏಕಕಾಲಕ್ಕೆ ನೈಋತ್ಯ ಮುಂಗಾರು ಮಾರುತಗಳು ಪ್ರವೇಶಿಸಿವೆ.
ದೇಶದ ಕೃಷಿ ಚಟುವಟಿಕೆ ಮತ್ತು ಆರ್ಥಿಕತೆಯ ಜೀವನಾಡಿಯಾಗಿರುವ ಮುಂಗಾರು ಮಾರುತಗಳು ಭಾತರದ ನೈರುತ್ಯ ಭಾಗದಲ್ಲಿ ಕೇರಳವನ್ನು ಗುರುವಾರ ಪ್ರವೇಶಿಸಿದ್ದು, ಅಪರೂಪದ ವಿದ್ಯಾಮಾನದಲ್ಲಿ ರೆಮಲ್ ಚಂಡಮಾರುತದ ಪ್ರಭಾವದಿಂದಾಗಿ ಈಶಾನ್ಯ ಭಾಗದಲ್ಲೂ ಗುರುವಾರದಂದೇ ಪ್ರವೇಶ ಮಾಡಿದೆ. ಬಳಿಕ ಮುಂದಿನ 5-10 ದಿನಗಳಲ್ಲಿ ದೇಶಾದ್ಯಂತ ವ್ಯಾಪಿಸುವ ನಿರೀಕ್ಷೆಯಿದೆ.

ಮುಂಗಾರು ಕೇರಳ ಭಾಗದಲ್ಲಿ ಸಾಮಾನ್ಯವಾಗಿ ಜೂನ್ 1ರಂದು ಪ್ರವೇಶ ಮಾಡುತ್ತಿದ್ದುದು ಈ ಬಾರಿ ಒಮದು ದಿನ ಮೊದಲೇ ಪ್ರವೇಶಿಸುವುದಾಗಿ ಭಾರತೀಯ ಹವಾಮಾನ ಇಲಾಖೆ ಸುಳಿವು ನಿಡಿತ್ತು. ಆದರೆ ಅದಕ್ಕೂ ಒಂದು ದಿನ ಮುಂಚಿತವಾಗಿ ಮುಂಗಾರು ಭಾರತವನ್ನು ಪ್ರವೇಶಿಸಿದ್ದು, ರೈತರ ಮುಖದಲ್ಲಿ ಮಂದಹಾಸ ಮುಡಿಸಿದೆ.
ನೈರುತ್ಯ ಮಾನ್ಸೂನ್ ಭಾರತಕ್ಕೆ ಪ್ರಮುಖ ಮಳೆಯನ್ನು ತರುವ ಕಾಲ. ಇದು ದೇಶದ ವಾರ್ಷಿಕ ಮಳೆಯ ಬಹುಪಾಲನ್ನು ಒದಗಿಸುತ್ತದೆ. ಈ ಅವಧಿಯಲ್ಲಿ ಖಾರೀಫ್ ಬೆಳೆಗಳನ್ನು ಹೆಚ್ಚಾಗಿ ಬೆಳೆಯುವುದರಿಂದ ಜೂನ್ ಮತ್ತು ಜುಲೈ ತಿಂಗಳ ಅವಧಿಯ ನೈರುತ್ಯ ಮಾನ್ಸೂನ್ ಅತಿ ಮಹತ್ವದ್ದು ಅಂತಲೇ ಪರಿಗಣಿಸಲಾಗುತ್ತದೆ. ನೈರಯತ್ಯದಿಂದ ಬೀಸುವ ಮಾನ್ಸೂನ್ ಸಾಮಾನ್ಯವಾಗಿ ಜೂನ್‌ನಲ್ಲಿ ಆರಂಭವಾಗಿ ಸೆಪ್ಟೆಂಬರ್ಗೆ ಕೊನೆಗೊಳ್ಳುತ್ತದೆ.

ಅಸ್ಸಾಂನಲ್ಲಿ 2 ಮಂದಿ ಸಾವು
ಅಸ್ಸಾಂನ ಹೈಲಕಂಡಿ ಜಿಲ್ಲೆಯಲ್ಲಿ ಗುರುವಾರ ಇಬ್ಬರು ಸಾವನ್ನಪ್ಪಿದ್ದು, ರೆಮಲ್ ಚಂಡಮಾರುತದಿಂದಾಗಿ ಭಾರೀ ಮಳೆಯಿಂದ ಉಂಟಾದ ಪ್ರವಾಹದಿಂದಾಗಿ ಸಾವಿನ ಸಂಖ್ಯೆ 8ಕ್ಕೆ ತಲುಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಎಎಸ್‌ಡಿಎಂಎ) ಪ್ರಕಾರ, ಒಂಬತ್ತು ಜಿಲ್ಲೆಗಳಲ್ಲಿ 1,98,856 ಜನರು ಪ್ರವಾಹದಿಂದ ಸಂತ್ರಸ್ತರಾಗಿದ್ದಾರೆ. ಹೈಲಕಂಡಿ, ಹೊಜೈ, ಗೋಲಾಘಾಟ್, ನಾಗಾಂವ್, ಕರೀಮ್‌ಗಂಜ್, ಕ್ಯಾಚಾರ್, ಕರ್ಬಿ ಆಂಗ್ಲಾಂಗ್ ವೆಸ್ಟ್, ಕರ್ಬಿ ಆಂಗ್ಲಾಂಗ್, ದಿಮಾ-ಹಸಾವೊ ಜಿಲ್ಲೆಗಳು ಹಾನಿಗೊಳಗಾಗಿವೆ.
ಕರ್ನಾಟಕಕ್ಕೆ ಮುಂಗಾರು
ಕೇರಳದಲ್ಲಿ ನೈರುತ್ಯ ಮುಂಗಾರು ಚುರುಕಾಗಿದ್ದು ಭಾರೀ ಮಳೆಯಾಗ್ತಿದೆ. ಹೀಗಾಗಿ ಜೂನ್ 2ರಿಂದ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಭಾರೀ ಮಳೆಯಾಗಲಿದೆ. ಜೂನ್ 2ರಿಂದ ಕರಾವಳಿ ಹಾಗೂ ದಕ್ಷಿಣ ಭಾಗದಲ್ಲಿ ಮುಂಗಾರು ಆರಂಭವಾಗಲಿದೆ. ಸದ್ಯ ಪೂರ್ವ ಮುಂಗಾರು ಮಳೆ ಇಳಿಕೆಯಾಗಿದ್ದು ಇದು ಮುಂಗಾರು ಪ್ರವೇಶಕ್ಕೆ ಮುನ್ಸೂಚನೆಯಾಗಿದೆ.
ಈ ಬಾರಿ ಬೆಂಗಳೂರು ಸೇರಿದಂತೆ ಹಳೆ ಮೈಸೂರು ಭಾಗದಲ್ಲಿ ಕಟ್ಟೆಚ್ಚರ ಅಗತ್ಯವಿದೆ. ಬಿಬಿಎಂಪಿಗೆ ಮುನ್ನಚ್ಚರಿಕೆ ವಹಿಸುವಂತೆ ರಾಜ್ಯ ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್ ಪಾಟೀಲ ಸೂಚನೆ ನೀಡಿದ್ದಾರೆ. ಜೂನ್ 2ರಿಂದ ಬಿರುಗಾಳಿ ಸಹಿತ ಮಳೆಯಾಗುವ ಸಂಭವವಿದೆ. ಗಂಟೆಗೆ 40-50 ಕಿಲೋ ಮೀಟರ್ ವೇಗದಲ್ಲಿ ನಗರದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ ಇದೆ. ಬೆಂಗಳೂರಲ್ಲಿ ಒಣ ಮರಗಳು, ಶಿಥಿಲ ಕಟ್ಟಡಗಳ ಬಗ್ಗೆ ನಿಗಾವಹಿಸಲು ಹವಾಮಾನ ತಜ್ಞರ ಮುನ್ಸೂಚನೆ ನೀಡಿದ್ದಾರೆ. ಏಕಂದ್ರೆ ಭಾರೀ ಮಳೆಯಾಗಲಿದೆ.












Click it and Unblock the Notifications