ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಇನ್ನಷ್ಟು ತೀವ್ರವಾಗಲಿದೆ ಮುಂಗಾರು; ಐಪಿಸಿಸಿ

|
Google Oneindia Kannada News

ನವದೆಹಲಿ, ಆಗಸ್ಟ್‌ 09: ಜಾಗತಿಕ ತಾಪಮಾನ ಏರಿಕೆಯಿಂದಾಗಿ ಭೂಮಿಯಲ್ಲಿನ ನೀರು ಹೆಚ್ಚಿನ ಪ್ರಮಾಣದಲ್ಲಿ ಆವಿಯಾಗಿ ಮಣ್ಣಿನ ತೇವಾಂಶ ಕಡಿಮೆಯಾಗುತ್ತದೆ. ಇದರಿಂದ ಬರಗಾಲ ಉಂಟಾಗುತ್ತದೆ. ಜೊತೆಗೆ ಮುಂಗಾರು ತೀವ್ರತೆ ದೇಶದಲ್ಲಿ ಹೆಚ್ಚಾಗಲಿದೆ ಎಂದು ಇಂಟರ್‌ಗವರ್ನಮೆಂಟಲ್ ಪ್ಯಾನಲ್ ಫಾರ್ ಕ್ಲೈಮೇಟ್ ಚೇಂಜ್- ಐಪಿಸಿಸಿ ವರದಿ ತಿಳಿಸಿದೆ.

ಭಾರತದಲ್ಲಿ ಹಾಗೂ ದಕ್ಷಿಣ ಏಷ್ಯಾದಲ್ಲಿ ಮುಂಗಾರು ತೀವ್ರತೆ ಹೆಚ್ಚಾಗುವ ಸಾಧ್ಯತೆಯಿದ್ದು, ಅಲ್ಪಾವಧಿ ತೀವ್ರ ಮಳೆಯ ದಿನಗಳು ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಬದಲಾವಣೆ ಕುರಿತು ಐಪಿಸಿಸಿ ವರದಿ ಹೇಳಿದೆ.

ಆಗಸ್ಟ್‌, ಸೆಪ್ಟೆಂಬರ್‌ನಲ್ಲಿ ಸಾಮಾನ್ಯಕ್ಕಿಂತ ಅಧಿಕ ಮಳೆ; IMD ಮುನ್ಸೂಚನೆಆಗಸ್ಟ್‌, ಸೆಪ್ಟೆಂಬರ್‌ನಲ್ಲಿ ಸಾಮಾನ್ಯಕ್ಕಿಂತ ಅಧಿಕ ಮಳೆ; IMD ಮುನ್ಸೂಚನೆ

ಭೂಮಿಯ ಮೇಲೆ ಯಾವ ರೀತಿಯ ಬದಲಾವಣೆಗಳು ಆಗುತ್ತಿವೆ ಎಂಬುದರ ಕುರಿತು ಐಪಿಸಿಸಿ ಸೋಮವಾರ ವರದಿ ಬಿಡುಗಡೆ ಮಾಡಿದೆ. 2006ರಿಂದಲೂ ಪರಿಸರದ ಮೇಲೆ ಗಂಭೀರ ಪರಿಣಾಮ ಮುಂದುವರೆದಿದೆ. ಇದರೊಂದಿಗೆ ಭಾರತದಲ್ಲಿ ಈ ಬಾರಿ ಮುಂಗಾರು ವಿಸ್ತರಣೆಯಾಗುವುದನ್ನು ಹವಾಮಾನ ಮಾದರಿಗಳು ಸೂಚಿಸುತ್ತಿವೆ. ದಕ್ಷಿಣ ಏಷ್ಯಾದಲ್ಲಿ ಮುಂಗಾರು ಮಳೆ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಐಪಿಸಿಸಿ ಮಾಹಿತಿ ನೀಡಿದೆ.

ಐಪಿಸಿಸಿಯ ಆರನೇ ಮೌಲ್ಯಮಾಪನ ಚಕ್ರವಾಗಿದ್ದು, ಇದರಲ್ಲಿ ವಿಜ್ಞಾನಿಗಳ ಸಮೂಹವು ವಿಶ್ವದಲ್ಲಿನ ಹವಾಮಾನ ಬದಲಾವಣೆಯನ್ನು ಅಧ್ಯಯನ ಮಾಡುತ್ತಿದೆ. ತಾಪಮಾನ ಸಂಬಂಧ ವರದಿಯನ್ನು ಬಿಡುಗಡೆ ಮಾಡಿದೆ. ಮುಂದೆ ಓದಿ...

 ಮುಂಗಾರು ತೀವ್ರಗೊಳ್ಳುವ ನಿರೀಕ್ಷೆ

ಮುಂಗಾರು ತೀವ್ರಗೊಳ್ಳುವ ನಿರೀಕ್ಷೆ

ನಗರೀಕರಣದ ಪ್ರಭಾವವಾಗಿ ಜಾಗತಿಕ ತಾಪಮಾನ ಏರಿಕೆಯಾಗುತ್ತಿದೆ. 1.5 ಡಿಗ್ರಿ ಮತ್ತು 2 ಡಿಗ್ರಿ ಸೆಲ್ಸಿಯಸ್ ತಾಪಮಾನ ಏರಿಕೆಯಾಗಿದೆ. ಇದರಿಂದ ಸರಾಸರಿ ಮಳೆ ಹಾಗೂ ಮುಂಗಾರು ವಿಸ್ತರಿಸಲಿದೆ. ದಕ್ಷಿಣ ಏಷ್ಯಾದಲ್ಲಿ ಮುಂಗಾರು ತೀವ್ರಗೊಳ್ಳುವ ನಿರೀಕ್ಷೆಯಿದೆ ಎಂದು ವರದಿ ಹೇಳಿದೆ.

ಈ ರಾಜ್ಯಗಳಲ್ಲಿ ಇನ್ನೂ ಕೆಲದಿನ ಮಳೆ ತಗ್ಗಲ್ಲ; ಹವಾಮಾನ ಇಲಾಖೆ ಸೂಚನೆಈ ರಾಜ್ಯಗಳಲ್ಲಿ ಇನ್ನೂ ಕೆಲದಿನ ಮಳೆ ತಗ್ಗಲ್ಲ; ಹವಾಮಾನ ಇಲಾಖೆ ಸೂಚನೆ

 ಬರ ಕೂಡ ಕಾಣಿಸಿಕೊಳ್ಳಲಿದೆ

ಬರ ಕೂಡ ಕಾಣಿಸಿಕೊಳ್ಳಲಿದೆ

ಸಿಎಂಐಪಿ ಐದು ಮಾದರಿಗಳು, ಕಡಿಮೆ ಸಕ್ರಿಯ ದಿನಗಳಲ್ಲಿ ಮಳೆ ಹೆಚ್ಚಳ ಮತ್ತು ದೀರ್ಘ ಸಕ್ರಿಯ ದಿನಗಳಲ್ಲಿ ಮಳೆ ಇಳಿಕೆಯನ್ನು ಸೂಚಿಸುತ್ತಿವೆ. ಭಾರತದಲ್ಲಿ ಮಳೆ ವಿರಾಮಗಳಲ್ಲಿ ಯಾವುದೇ ಮಹತ್ವದ ಬದಲಾವಣೆಯಿಲ್ಲ ಎಂದು ವರದಿ ಹೇಳಿದೆ.

ಮಳೆ, ಪ್ರವಾಹ ಹಾಗೂ ಬರ ಕೂಡ ಕಾಣಿಸಿಕೊಳ್ಳಲಿದೆ. ತಾಪಮಾನ ಏರಿಕೆಯಿಂದ ನೀರು ಹೆಚ್ಚಿನ ಪ್ರಮಾಣದಲ್ಲಿ ಆವಿಯಾಗಿ, ಮಣ್ಣಿನಲ್ಲಿ ತೇವಾಂಶ ಕಡಿಮೆಯಾಗುತ್ತದೆ. ಇದು ಬರಕ್ಕೆ ಕಾರಣವಾಗುತ್ತದೆ ಎಂದು ಸೆಂಟರ್ ಫಾರ್ ಕ್ಲೈಮೇಟ್ ಚೇಂಜ್ ರಿಸರ್ಚ್, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟ್ರಾಪಿಕಲ್ ರಿಸರ್ಚ್‌ನ ವ್ಯವಸ್ಥಾಪಕ ನಿರ್ದೇಶಕ ಆರ್. ಕೃಷ್ಣನ್ ತಿಳಿಸಿದ್ದಾರೆ.
 2030ರ ಹೊತ್ತಿಗೆ ಭೂಮಿ ಉಷ್ಣತೆ ಹೆಚ್ಚಾಗುತ್ತದೆ

2030ರ ಹೊತ್ತಿಗೆ ಭೂಮಿ ಉಷ್ಣತೆ ಹೆಚ್ಚಾಗುತ್ತದೆ

2030ರ ಹೊತ್ತಿಗೆ, ಭೂಮಿಯ ಉಷ್ಣತೆಯು 1.5 ಡಿಗ್ರಿ ಸೆಲ್ಸಿಯಸ್ ಗಿಂತ ಹೆಚ್ಚಾಗುತ್ತದೆ ಮತ್ತು ಆನಂತರ 1.6 ಡಿಗ್ರಿ ಸೆಲ್ಸಿಯಸ್ ನ ಹೆಚ್ಚಳವನ್ನು ಅತಿ ಶೀಘ್ರವಾಗಿ ದಾಖಲಿಸಲಿದೆ. ಇಂಗಾಲದ ಡೈಆಕ್ಸೈಡ್ ಹೊರತಾಗಿ, ಇತರೆ ಅನೇಕ ಹಸಿರುಮನೆ ಅನಿಲಗಳು ಕೂಡ ಹೊರಸೂಸಲ್ಪಡುತ್ತದೆ. ಮಾನವಕುಲವು ಹವಾಮಾನದ ಉಷ್ಣತೆಯನ್ನು ಹೆಚ್ಚಿಸಿದೆ. ಇದರಿಂದಾಗಿ ಭೂಮಿಯ ಮೇಲೆ ತ್ವರಿತ ಬದಲಾವಣೆಗಳು ಆಗಿವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

 ಆಗಸ್ಟ್‌, ಸೆಪ್ಟೆಂಬರ್ ತಿಂಗಳಿನಲ್ಲಿ ಹೆಚ್ಚಿನ ಮಳೆ

ಆಗಸ್ಟ್‌, ಸೆಪ್ಟೆಂಬರ್ ತಿಂಗಳಿನಲ್ಲಿ ಹೆಚ್ಚಿನ ಮಳೆ

ಆಗಸ್ಟ್‌ ಹಾಗೂ ಸೆಪ್ಟೆಂಬರ್‌ ತಿಂಗಳಿನಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆ ದಾಖಲಾಗಲಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ. ಆಗಸ್ಟ್‌ ತಿಂಗಳ ಮಳೆ ಅಂದಾಜು ತೆಗೆದುಕೊಂಡರೆ, ಈ ತಿಂಗಳು ಮಳೆ ಸಾಮಾನ್ಯಕ್ಕಿಂತ ಸ್ವಲ್ಪ ಅಧಿಕವಿರಲಿದೆ. ಸೆಪ್ಟೆಂಬರ್‌ನಲ್ಲಿಯೂ ಹೆಚ್ಚಿನ ಮಳೆ ದಾಖಲಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಮೃತ್ಯುಂಜಯ ಮಹೋಪಾತ್ರಾ ತಿಳಿಸಿದ್ದಾರೆ. ದೇಶದ ಉತ್ತರ ಹಾಗೂ ಮಧ್ಯ ಭಾಗದಲ್ಲಿ ಸಾಮಾನ್ಯ ಹಾಗೂ ಸಾಮಾನ್ಯಕ್ಕಿಂತ ಕಡಿಮೆ ಮಳೆ ಬೀಳಬಹುದಾಗಿದೆ ಎಂದು ತಿಳಿಸಿದ್ದಾರೆ.

English summary
Due to an increase in temperature, there will be more water evaporation which will in turn decrease soil moisture and lead to droughts says IPCC,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X